calender

 

 

ಮೂಡಿಗೆರೆ ತಾಲ್ಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಅಧ್ಯಕ್ಷರಾದ ನವೀನ್ ಬಿ ಆರ್ 2026 ರ ನೂತನ ಕ್ಯಾಲೆಂಡರ್ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಮೂಡಿಗೆರೆ ತಾಲ್ಲೂಕಿನ ತಹಸಿಲ್ದಾರ್ ರವರಾದ ಶ್ರೀಮತಿ ಅಶ್ವಿನಿಯವರು ಮೂಡಿಗೆರೆ ತಾಲ್ಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2026 ರ ಕ್ಯಾಲೆಂಡರ್ ಅನಾವರಣಗೊಳಿಸಿ ಬಿಡುಗಡೆ ಮಾಡಿದರು. ಮೂಡಿಗೆರೆ ತಾಲ್ಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಈ ರೀತಿಯ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಕ್ಯಾಲೆಂಡರ್ ನಲ್ಲಿ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳೊಂದಿಗೆ  ವಿವಿಧ ಆದೇಶಗಳ ಮಾಹಿತಿಯನ್ನು ಸರ್ಕಾರಿ ನೌಕರರಿಗೆ ನೀಡಿರುವುದು ವಿಶೇಷವಾಗಿದೆ. ಈ ಕ್ಯಾಲೆಂಡರ್ ಗಳನ್ನು ಆಯಾ ಇಲಾಖೆಗಳ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರ ಮೂಲಕ ನೌಕರರಿಗೆ ತಲುಪಿಸಲು ವ್ಯವಸ್ಥೆ ಮಾಡಿರುವುದಾಗಿ ಅಧ್ಯಕ್ಷರಾದ ಬಿ ಆರ್ ನವೀನ್ ತಿಳಿಸಿದರು. ಕ್ಯಾಲೆಂಡರ್ ಗಳು ಕೊರತೆಯಾದರೆ ರಾಜ್ಯ ಸಂಘಕ್ಕೆ ತಿಳಿಸುವುದಾಗಿ ಹೇಳಿದರು.

ಕ್ಯಾಲೆಂಡರ್ ಬಿಡುಗಡೆಯ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ