idravalli

 

 

ಮೂಡಿಗೆರೆ ನಂದೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿ ಇಂದ್ರವಳ್ಳಿ ಗ್ರಾಮಸ್ಥರು ಸೋಮವಾರ ಶಾಸಕಿ ನಯನ ಮೊಟ್ಟಮ್ಮನವರನ್ನು ಭೇಟಿ ಮಾಡಿ ರಸ್ತೆ ದುರಸ್ತಿಗಾಗಿ ಮನವಿ ಸಲ್ಲಿಸಿದರು.

ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರೆಹಮಾನ್ ಶಾಸಕರು ನುಡಿದಂತೆ ಹಾಂದಿ ಬಸ್ಕಲ್ ರಸ್ತೆಯನ್ನು ನೂತನವಾಗಿ ನಿರ್ಮಿಸಿ ಕೊಟ್ಟಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ ಅವರು ಇಂದ್ರವಳ್ಳಿ ಗ್ರಾಮದ 2 ಕಿಲೋಮೀಟರ್  ದೂರದ ಗ್ರಾಮೀಣ ರಸ್ತೆ  15 ವರ್ಷಗಳ ಹಿಂದೆ ಡಾಂಬರೀಕರಣ ಆಗಿದ್ದು ಬಿಟ್ಟರೆ ಇದುವರೆಗೂ ದುರಸ್ತಿಯಾಗಿಲ್ಲ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ

ಈ ಭಾಗದಲ್ಲಿ ನೂರು ಮನೆಗಳಿದ್ದು, ಪರಿಶಿಷ್ಟ ಜಾತಿ ಪಂಗಡ ಅಲ್ಪಸಂಖ್ಯಾತ, ಮತ್ತು ಒಬಿಸಿಯ ಸರ್ವ ಸಮುದಾಯಗಳ ಜನರು ವಾಸವಿದ್ದಾರೆ ಶಾಸಕರು ರಸ್ತೆ ದುರಸ್ತಿ ಮಾಡಿಕೊಡಬೇಕೆಂದು ಬೇಡಿಕೆ ಇಟ್ಟರು.

ಪ್ರತಿಕ್ರಿಯೆ ನೀಡಿದ ಶಾಸಕಿ ನಯನ ಮೋಟಮ್ಮ ಪ್ರಸ್ತುತ ಬಂದಿರುವಂತಹ ಎಲ್ಲಾ ಅನುದಾನಗಳನ್ನು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ವಿಲೇವಾರಿ ಮಾಡಿದ್ದು, ಮುಂಬರುವ ಅನುದಾನದಲ್ಲಿ

ರಸ್ತೆ ದುರಸ್ತಿ ಮಾಡುವ ಭರವಸೆಯನ್ನು ನೀಡಿದರು.

ಮುಖಂಡರಾದ ಐ ಯು ಸುಮಂತ್, ಐಎಸ್ ಚಂದ್ರೇಗೌಡ, ಐಇ ಪ್ರಸನ್ನ, ನಿತ್ಯ ಪ್ರೇಮ್ ದತ್,ಐ ಎಲ್ ನಿಶಾಂತ್, ದರ್ಶನ್ ಸಿ, ಆಯಸ್ ಮಂಜುನಾಥ್ ಐ ಯು ನಂದೀಶ್ ಐ ಎಸ್ ದೀಕ್ಷಿತ್,ಪಾರ್ವತಮ್ಮ, ಐ ಹೆಚ್, ಮಧು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ