ಮೂಡಿಗೆರೆ ತಾಲೂಕಿನ ಗೋಣಿಬೀಡು ಸಮೀಪದ ಕಲ್ಲುಗುಡ್ಡ ಗ್ರಾಮದಿಂದ ಬೇಲೂರು ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಶಾಸಕಿ ನಯನಾ ಮೋಟಮ್ಮ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಿದರು.
ಕಳೆದ ಅನೇಕ ವಷದಿಂದ ಕಲ್ಲುಗುಡ್ಡ ಗ್ರಾಮದ ರಸ್ತೆಗೆ ಡಾಂಬಾರು ಕಂಡಿರಲಿಲ್ಲ. ಈ ಬಗ್ಗೆ ಸ್ಥಳೀಯರು ಶಾಸಕರ ಗಮನ ಸೆಳೆದಿದ್ದರು. ಈ ಹಿನ್ನಲೆಯಲ್ಲಿ ಕಳೆದ 8 ತಿಂಗಳ ಹಿಂದೆ ಕಲ್ಲುಗುಡ್ಡ ಸೇತುವೆಯಿಂದ ಶಾಲೆವರೆಗೆ 35 ಲಕ್ಷ ಅನುದಾನ ಬಳಸಿ ರಸ್ತೆ ಕಾಮಗಾರಿ ನಡೆಸಲಾಗಿತ್ತು. ಬಾಕಿ ಉಳಿದಿದ್ದ 650 ಮೀಟರ್ ಬೇಲೂರು ಸಂಪರ್ಕ ರಸ್ತೆ ಕಾಮಗಾರಿಗೆ 43 ಲಕ್ಷ ರೂ ಅನುದಾನವಿಟ್ಟು ಇದೀಗ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಗೋಣಿಬೀಡು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎ.ಜೆ.ಸುಬ್ರಾಯಗೌಡ, ಗ್ರಾ.ಪಂ. ಸದಸ್ಯ ವಿಜೇಂದ್ರ, ಬೂತ್ ಅಧ್ಯಕ್ಷ ಯೋಗೇಶ್, ಕೆಟಿ.ಜಗದಿಶ್‍ಗೌಡ, ಡಿ.ಜಿ.ರಮೇಶ್, ಸದಾಶಿವ ಮತ್ತಿತರರಿದ್ದರು.



