ಜ್ಞಾನಶಕ್ತಿ ಮತ್ತು ವಿಚಾರಶಕ್ತಿಯಿಂದ ಸ್ವಾಮಿ ವಿವೇಕಾನಂದ ವಿಶ್ವದ ಗಮನಸೆಳೆದವರು ಎಂದು ಅಭಾಸಾಪ ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ಹೊಳೆಹೊನ್ನೂರು ಅಭಿಪ್ರಾಯಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಚಿಕ್ಕಮಗಳೂರು ಜಿಲ್ಲಾಸಮಿತಿ ಸಿರಗುಂದÀ ಸಾಯಿಏಜಂಲ್ಸ್ ಪದವಿಪೂರ್ವ ಕಾಲೇಜಿನಲ್ಲಿ ನಿನ್ನೆ ಸಂಜೆ ಆಯೋಜಿಸಿದ್ದ ‘ರಾಷ್ಟ್ರೀಯ ಯುವದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವೇಕಾನಂದ ವ್ಯಕ್ತಿ ಅಲ್ಲ ಒಂದು ಶಕ್ತಿ. ಭಾರತದ ಹಿರಿಮೆ-ಗರಿಮೆಗಳನ್ನು ಜಗತ್ತಿನ ಮುಂದೆ ಪರಿಣಾಮಕಾರಿಯಾಗಿ ಅನಾವರಣಗೊಳಿಸಿದವರು. ಭಾರತದ ಜ್ಞಾನಸಂಪತ್ತನ್ನು ವಿವರಿಸಿದವರು. ದೇಶದ ಸ್ಥಿತಿಗತಿಗಳ ಬಗ್ಗೆ ಮರುಗಿ ಸುಧಾರಣೆಗೆ ಮುಂದಾದವರು ಆಧ್ಯಾತ್ಮದ ಕಲ್ಪನೆ, ಯೋಗ, ವೇದ, ಸ್ಪøತಿ, ಧ್ಯಾನ ಸಮರ್ಥವಾಗಿ ವಿಶ್ವಕ್ಕೆ ಪರಿಚಯಿಸಿದವರು ಎಂದರು.
ನೋವು, ಅನುಮಾನ, ಅವಮಾನ, ಹಿಂಸೆ ಅನುಭವಿಸಿ ಭಾರತದ ಉದಾತ್ತ ಚಿಂತನೆಯನ್ನು ತೆರೆದಿಟ್ಟ ವಿವೇಕ ಮುಖ್ಯವಾಹಿನಿಗೆ ಬಂದಮೇಲೆ ವಿಶ್ವಖ್ಯಾತರು. ಚಿಕಾಗೋದಲ್ಲಿ ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾತು ಆರಂಭಿಸಿದ ಪರಿಯೆ ವಿಸ್ಮಯ. ವಿವಿಧೆಡೆಯಿಂದ ಬಂದ ಧರ್ಮ ವಿದ್ವಾಂಸರು ಪ್ರಭಾವಿತರಾಗಿ ಸುದೀರ್ಘ ಕರತಾಡನ ಮಾಡಿದ್ದು ಇತಿಹಾಸ. ವಿವೇಕರ ಉಪನ್ಯಾಸ ಏರ್ಪಡಿಸಲು ಸ್ಪರ್ಧೆಯೆ ನಡೆದಿತ್ತು. ಯುವಶಕ್ತಿಗೆ ಅವರೊಂದು ಮಾದರಿ ಎಂದ ಪ್ರಶಾಂತ, ಸಂಕಲ್ಪ ಶುದ್ಧವಾಗಿದ್ದರೆ ಸಾಕಾರಗೊಳ್ಳುತ್ತದೆ ಎಂದರು.
ಕೆ.ಆರ್.ಪೇಟೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿದ್ಯಾಸಾಗರ್ ಪ್ರಧಾನ ಉಪನ್ಯಾಸ ನೀಡಿ ವಿವೇಕಾನಂದರು ಭಾರತಕ್ಕೆ ನೀಡಿದ ಎರಡು ಆದರ್ಶಗಳೆಂದರೆ ತ್ಯಾಗ ಮತ್ತು ಸೇವೆ. ತಮ್ಮ ಜೀವನದಲ್ಲಿ ಇದನ್ನೆ ಪರಿಪಾಲಿಸಿದ್ದು ಯುವಜನತೆ ಅನುಕರಿಸಿದರೆ ಭವ್ಯ ಭಾರತ ನಿರ್ಮಾಣ ಸಾಧ್ಯ. ಧರ್ಮವೇ ಭಾರತದ ಜೀವಾಳ-ಅಂತಃಸತ್ವ. ಸ್ವಂತ ಮೋಕ್ಷವನ್ನು ತ್ಯಾಗಮಾಡಿ ಸೇವೆಗೆ ಸಮರ್ಪಸಿಕೊಂಡವರು ಎಂದರು.
ಕೋಟ್ಯಾಧಿಪತಿಗಳ ಮನೆಯಲ್ಲಿ ಹುಟ್ಟಿದರೂ ಪ್ರಾಮಾಣಿಕವಾದ ಜಿಜ್ಞಾಸೆ, ಪರಾಮರ್ಶೆಯ ಗುಣವನ್ನು ಬೆಳೆಸಿಕೊಂಡ ಪರಿಣಾಮ ರಾಮಕೃಷ್ಣ ಪರಮಹಂಸರಂತಹ ಗುರುಗಳನ್ನು ಪಡೆದರು. ಭಗವಂತ, ಧರ್ಮ, ಆಧ್ಯಾತ್ಮದ ಬಗ್ಗೆ ಕುತೂಹಲವಾಗಿ ಹುಡುಕಿಕೊಂಡು ಹೊರಟವರಿಗೆ ದೈವಕೃಪೆಯಿಂದ ಸಿಕ್ಕಿದ ರಾಮಕೃಷ್ಣರನ್ನು ಒಪ್ಪಿ ಉನ್ನತ ಶಿಷ್ಯರಾಗಿ ಆಧ್ಯಾತ್ಮದ ಉನ್ನತಿಗೇರಿದವರೆಂದು ಬಣ್ಣಸಿದರು.
ರಾಮಕೃಷ್ಣರ ನಂತರ ಅವರ ಶಿಷ್ಯರು ಅಲೆಮಾರಿ ಸನ್ಯಾಸಿಗಳಾಗಿ ಚದುರಿದ್ದು, ನಾಲ್ಕೈದುವರ್ಷ ಕಾಲ್ನಡೆಗೆಯಲ್ಲಿ ಭಾರತದಾದ್ಯಂತ ಸಂಚರಿಸಿದ ವಿವೇಕಾನಂದ ಕನ್ಯಾಕುಮಾರಿಯ ಬಂಡೆಯಮೇಲೆ ಕುಳಿತು ಮೂರುದಿನಗಳ ಕಾಲ ಅನ್ನ-ಆಹಾರ-ನಿದ್ದೆ ತೊರೆದು ತಪಸ್ಸು ಮಾಡಿದ ನಂತರ ಹೊಸ ಬೆಳಕಿನೊಂದಿಗೆ ಭಾರತದ ವಿಶ್ವರೂಪ ದರ್ಶಿಸಿದವರೆಂದು ಡಾ.ವಿದ್ಯಾಸಾಗರ್, ಭಾರತ ಜಗತ್ತಿನ ಆಧ್ಯಾತ್ಮ ಹೃದಯವೆಂದು ಪ್ರತಿಪಾದಿಸಿದವರೆಂದರು.

ಸಾಯಿ ಏಜೆಂಲ್ಸ್ ಪ.ಪೂ.ಕಾಲೇಜು ವಾಣಿಜ್ಯವಿಭಾಗದ ಮುಖ್ಯಸ್ಥ ಡಾ.ಕುಲದೀಪ ಸಮಾರಂಭ ಉದ್ಘಾಟಿಸಿ ಮಾತನಾಡಿ ಶಿಸ್ತು, ಸಂಕಲ್ಪ, ತರ್ಕ ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಶುದ್ಧ ಸಂಕಲ್ಪ ಸಿದ್ಧಿ ಆಗುತ್ತದೆ. ಇಚ್ಛಾಶಕ್ತಿಯಿಂದ ಹನುಮ ಲಂಕೆ ಹಾರಿದ. ಉತ್ತಮವಾದ ಚಾರಿತ್ರ್ಯವಂತ, ಪ್ರಾಮಾಣಿಕ, ಜ್ಞಾನವಂತರಾಗಿ ಯುವಕರನ್ನು ರೂಪಿಸುವ ಶಿಕ್ಷಕನದ್ದು ನಿಜವಾದ ದೇಶಸೇವೆ ಎಂದರು.
ಅಭಾಸಾಪ ಶೃಂಗೇರಿ ವಿಭಾಗೀಯ ಸಂಯೋಜಕ ಚಿ.ಸ.ಪ್ರಭುಲಿಂಗಶಾಸ್ತ್ರಿ ಸಮಾರಂಭದ ಅಧ್ಯಕ್ಷತÉವಹಿಸಿ ಮಾತನಾಡಿ ‘ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ’ ಎಂಬ ವಿವೇಕರ ಸಂದೇಶ ವಿಶ್ವದ ಯುವಜನತೆಗೆ ಆದರ್ಶ ಎಂದರು.
ಕೌಶಲ್ಯ ಅಭಿವೃದ್ಧಿ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಶಿವಲಿಂಗಪ್ಪ, ಇನೋವೇಟಿವ್ ಶಾಲಾ ಮುಖ್ಯಸ್ಥ ಸಾಗರ್ ಮತ್ತು ಭವಿಷ್ಯನಿಧಿ ವಿಶ್ರಾಂತ ಅಧಿಕಾರಿ ವಿಜಯಕುಮಾರ ನೇತೃತ್ವದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕನ್ನಡ ಉಪನ್ಯಾಸಕ ನಿಡಘಟ್ಟ ಕುಮಾರಸ್ವಾಮಿ ಸ್ವಾಗತಿಸಿ-ವಂದಿಸಿದರು.



