ಚುಟುಕು ರಚನೆಗೆ ಅಧ್ಯನಶೀಲತೆ ಪರಿಣಾಮಕಾರಿ ಎಂದು ಖ್ಯಾತ ಚುಟುಕು ಕವಿ ದುಂಡಿರಾಜ್ ಅಭಿಪ್ರಾಯಿಸಿದರು.
ಹಿರೇಮಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನ, ಅಭಾಸಾಪ ಮತ್ತು ಸುಗಮಸಂಗೀತ ಗಂಗಾ ವತಿಯಿಂದ ನೀಡಿದ ಸನ್ಮಾನ ಸ್ವೀಕರಿಸಿದ ಅವರು, ಇಂದು ಅಧ್ಯಯನದ ಕೊರತೆ ಚುಟುಕುಗಳಷ್ಟೇ ಅಲ್ಲ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕಾಡುತ್ತಿದೆ. ಹೆಚ್ಚು ಹೆಚ್ಚು ಓದುವ ಪ್ರವೃತ್ತಿ ಬೆಳೆಸಿಕೊಂಡಾಗ ಉತ್ತಮ ಸಾಹಿತ್ಯರಚನೆ ಸಾಧ್ಯವಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಅತ್ಯುನ್ನತವಾದ ಪರಂಪರೆಯನ್ನು ಹೊಂದಿದೆ. ಕನ್ನಡ ಭಾಷೆ ಸುಂದರ ಹಾಗೂ ಸಂಮೃದ್ಧ. ಕನ್ನಡ ಎಂಬುದು ಭಾಷೆಯಷ್ಟೇ ಅಲ್ಲ ಅದೊಂದು ಸಂಸ್ಕøತಿ. ಕನ್ನಡವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಕನ್ನಡವನ್ನು ಶುದ್ಧವಾಗಿ ಓದುವ ಬರೆಯುವ ಅಭ್ಯಾಸ ನಮ್ಮದಾಗಬೇಕು. ಕನ್ನಡ ಪುಸ್ತಕ, ಪತ್ರಿಕೆ ಕೊಂಡು ಓದಬೇಕು. ಕನ್ನಡದ ಹಾಡುಗಳನ್ನು ಕೇಳುವುದು, ಕನ್ನಡದ ನಾಟಕ-ಸಿನಿಮಾ-ಯಕ್ಷಗಾನಗಳ ವೀಕ್ಷಣೆ ಇತರರಿಗೂ ನಮ್ಮ ಭಾಷೆಯನ್ನು ಕಲಿಸಲು ಪ್ರಯತ್ನಿಸುವುದರಿಂದ ಕನ್ನಡದ ಅಭಿವೃದ್ಧಿ ಸಾಧ್ಯವೆಂದು ದುಂಡಿರಾಜ್ ಉತ್ತರಿಸಿದರು.
ಖ್ಯಾತಸಾಹಿತಿ ಡಾ.ಚಿಂತಾಮಣಿಕೊಡ್ಲಕೆರೆ, ಕನ್ನಡಸಾಹಿತ್ಯ ಪೂಜಾರಿ ಹಿರೇಮಗಳೂರು ಕಣ್ಣನ್, ಹಿರಿಯಪತ್ರಕರ್ತ ಸ.ಗಿರಿಜಾಶಂಕರ್, ಸುಗಮ ಸಂಗೀತಗಂಗಾ ಪ್ರಧಾನಕಾರ್ಯದರ್ಶಿ ಮಂಜುನಾಥಕಾಮತ್, ಮಾ.ಸಂ.ಪ್ರ.ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ರಮೇಶ್, ಭಾರತಿದುಂಡಿರಾಜ್, ಚಿತ್ತರಂಜನಿ, ಸಾಧಕರುಗಳಾದ ಅನಂತಶರ್ಮ, ಯತಿರಾಜ್, ವಿದ್ವಾಂಸ ವೈಷ್ಣವಸಿಂಹ ಮತ್ತಿತರರು ಪಾಲ್ಗೊಂಡಿದ್ದರು.



