ಪಾರ್ಶುವಾಯು ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೇರ್ ನೀಡಲಾಯಿತು.
ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿ ಜಿ ಹೊಸಹಳ್ಳಿ ಗ್ರಾಮದ ಸಣ್ಣಮ್ಮ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೇರ್ ನೀಡಲಾಯಿತು.
ಈ ಸಂದರ್ಭದಲ್ಲಿ ಯೋಜನಾಧಿಕಾರಿ ಸುಧೀರ್ ಜೈನ್, ವಲಯ ಮೇಲ್ವಿಚಾರಕರು ದೀಪಕ್, ಜಿ ಹೊಸಹಳ್ಳಿ ಒಕ್ಕೂಟ ಅಧ್ಯಕ್ಷ ರಂಜಿತ್, ವಿಪತ್ತು ನಿರ್ವಹಣಾ ಘಟಕದ ರವಿ, ಸತೀಶ್, ಸೇವಾಪ್ರತಿನಿಧಿ ಕುಸುಮ, ಹೇಮಾ ಹಾಗೂ ಗುರುಮೂರ್ತಿ ಮತ್ತಿತರರು ಇದ್ದರು
ಈ ಸಂದರ್ಭದಲ್ಲಿ ಮಾತನಾಡಿದ ಯೋಜನಾಧಿಕಾರಿ ಸುಧೀರ್ ಜೈನ್ ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳನ್ನು ನೆರವೇರಿಸಲಾಗುತ್ತಿದೆ. ವಿಶೇಷವಾಗಿ ಬಡವರು, ವಿಕಲಚೇತನರು, ನೊಂದವರು, ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳ ಮೂಲಕ ಸಹಾಯ ಮಾಡಲಾಗುತ್ತಿದೆ. ಯೋಜನೆಯಿಂದ ಸಿಗುವ ಸೌಲಭ್ಯಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.



