suddi- 2

 

 

ಸ್ವಾತಂತ್ರ್ಯ ಹೋರಾಟಗಾರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗೌರವಾಧ್ಯಕ್ಷ, ಶತಾಯುಷಿ ಡಾ.ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಚಿಕ್ಕಮಗಳೂರು ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಶನಿವಾರ ನಗರದ ಶ್ರೀ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಮಹಾಸಭಾ ತಾಲ್ಲೂಕು ಅಧ್ಯಕ್ಷ ಕೆ.ಸಿ.ನಿಶಾಂತ್ ನಿತ್ಯ ಇಷ್ಟಲಿಂಗ ಪೂಜೆ, ಕಾಯಕ ದಾಸೋಹಗಳ ಮೇಲೆ ಅಪಾರ ಒಲವು ಖಂಡ್ರೆ ಅವರಿಗೆ ಇತ್ತು. ಅಲ್ಲದೇ ಕಿರೀಟಪ್ರಾಯವಾಗಿದ್ಧ ಜೀವನೋತ್ಸಾಹ, ನೂರೆರಡು ವರ್ಷಗಳ ತುಂಬು ಜೀವನ ನಡೆಸಿದ ಶ್ರೇಷ್ಟ ವ್ಯಕ್ತಿ ಎಂದರು.

ಸರಳತೆ, ಸತ್ಯನಿಷ್ಠ ಮತ್ತು ಜನಪರ ಕಾಳಜಿಯೊಂದಿಗೆ ಬದುಕಿದ ಅವರು, ತಮ್ಮ ಜೀವನವನ್ನೆಲ್ಲ ಸಮಾಜದ ಹಿತಕ್ಕಾಗಿ ಅರ್ಪಿಸಿದ ಮಹಾನ್ ವ್ಯಕ್ತಿತ್ವವಾಗಿದ್ದರು. ಅವರ ಅಗಲಿಕೆಯಿಂದ ಕುಟುಂಬಕ್ಕೆ ಮಾತ್ರವಲ್ಲ, ಸಮಸ್ತ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿದರು.

ಶಂಕರ ದೇವರ ಮಠ ಗುರುಗಳು ಚಂದ್ರಶೇಖರ್ ಶಿವಾಚಾರ್ಯ ಮಾತನಾಡಿ ಸ್ವಾಸ್ಥ್ಯ ಸಮಾಜದ ನಿ ರ್ಮಾಣಕ್ಕೆ ಜೀವನವನ್ನೇ ಮುಡಿಪಿಟ್ಟ ಲಿಂ|| ಖಂಡ್ರೆ ಅವರು ಇಹಲೋಕದ ಯಾತ್ರೆ ಮುಗಿಸಿ ಚಿರಶಾಂತಿಗೆ ಸಂದಿದ್ದಾರೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬ, ಅಭಿಮಾನ ಹಾ ಗೂ ಆಪ್ರ ವಲಯಕ್ಕೆ ಕರುಣಿಸಲಿ ಎಂದರು.

ಈ ಸಂದರ್ಭದಲ್ಲಿ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಈಶ್ವರಪ್ಪ, ತಾಲ್ಲೂಕು ಪ್ರಧಾನ ಕಾರ್ಯದ ರ್ಶಿ ನಲ್ಲೂರ್ ದರ್ಶನ್, ಸಮಾಜದ ಬಾಂಧವರಾದ ನಿರಂಜನ್, ರೇಣುಕಾ ಆರಾಧ್ಯ, ಜೈ ಪ್ರಕಾಶ್, ಯೋಗೀಶ್ ಹಿರೇಮಗಳೂರು, ಸತೀಶ್ ಕುಪ್ಪೆ ನೆಲ್ಲಿ, ಗಿರೀಶ್, ಮೋಹನ್ ಲಕ್ಷ್ಮಿಪುರ ದಿನೇಶ್ ಮೂಗೂಳ್ಳಿ, ವೀರಶೈವ ಲಿಂಗಾಯತ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ