suddi- 1 (1)

 

 

ಬಿಪಿಎಲ್ ಪಡಿತರ ಚೀಟಿಯಿಂದ ವಂಚಿತರಾದ ಬಡ ಕುಟುಂಬಗಳಿ ಗೆ ರಾಜ್ಯಸರ್ಕಾರ ಹೊಸದಾಗಿ ಕಾರ್ಡ್ ವಿತರಿಸಲು ತೀರ್ಮಾನಿಸಿದ್ದು, ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು

ನಗರದ ಜಿ.ಪಂ. ಮಿನಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಪರಿ ಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಜಿಲ್ಲೆಯಲ್ಲಿ 2023ರವರೆಗೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಸಾವಿರಾರು ಅರ್ಹ ಫಲಾನುಭವಿಗಳಿಗೆ ಬಿಎಪಿಎಲ್ ಕಾರ್ಡ್ ನೀಡುವ ವ್ಯವಸ್ಥೆ ಆರಂಭಗೊಂಡಿದೆ. ಸದ್ಯದಲ್ಲೇ ಸರ್ಕಾರದ ಆದೇಶದನ್ವಯ ಸೌಲಭ್ಯ ಕಲ್ಪಿಸಲು ತೀರ್ಮಾನಿಸಿದ್ದು ಜಿಲ್ಲೆಯ ಇನ್ನಷ್ಟು ಮಂದಿಗೆ ಗ್ಯಾರಂಟಿ ಯೋಜನೆ ಸವ ಲತ್ತು ಲಭಿಸಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 2.62 ಲಕ್ಷ ಕುಟುಂಬದ ಯಜಮಾನಿಯರಿಗೆ ಮಾಹೆಯಾನ 2 ಸಾವಿರದಂತೆ ಮಾಸಿಕ 52 ಕೋಟಿ ರೂ.ಗಳಂತೆ ಒಟ್ಟು ಆರಂಭದಿಂದ 1214 ಕೋಟಿ ರೂ.ಗಳು ಪಾವತಿಸಿದ್ದು ಅರ್ಜಿ ಹಾ ಕಿದವರ ಪೈಕಿ ಕೆಲವು ಮಂದಿ ತಿದ್ದುಪಡಿ, ಐಟಿ ಅಥವಾ ಮರಣ ಸಂಭವಿಸಿದ ಕಾರಣದಿಂದ ಸೌಲಭ್ಯ ಲಭಿ ಸಿಲ್ಲ. ಈ ಹೊರತಾಗಿ ಶೇ.98 ರಷ್ಟು ಪ್ರಗತಿ ಸಾಧಿಸಿದೆ ಎಂದರು.

ಗೃಹಲಕ್ಷ್ಮೀ ಯೋಜನೆ ಮಹಿಳೆಯರ ಪಾಲಿಗೆ ರಾಜ್ಯಸರ್ಕಾರ ನೀಡಿರುವ ದೊಡ್ಡ ಶಕ್ತಿ. ಮದ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ಖಾತೆ ಜಮಾ ಮಾಡುವುದರಿಂದ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಈ ಯೋಜನೆಯು ಕುಟುಂಬದ ನಿರ್ವಹಣೆ, ಮಕ್ಕಳ ಪಾಲನೆ ಸೇರಿದಂತೆ ಉಳಿತಾಯಕ್ಕೂ ಕಾರಣವಾಗಿದೆ ಎಂದು ತಿಳಿಸಿದರು.

ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯ 3.12 ಲಕ್ಷ ಆರ್.ಆರ್. ಮೀಟರ್ ಒಳಗೊಂಡಂತೆ ಸುಮಾ ರು 10 ಲಕ್ಷ ಜನರಿಗೆ ಸರ್ಕಾರ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಿದೆ. ಹೊಸದಾಗಿ ಗೃಹಜ್ಯೋತಿ ಆಕಾಂಕ್ಷಿಗಳು ಪ್ರಸ್ತುತ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಜನಸಂಪರ್ಕ ಸಭೆಯ ಲ್ಲಿ ಎಲೆಕ್ರ್ಟೋ ಸ್ಮಾರ್ಟ್ ಮೀಟರ್ ಅಳವಡಿಸಲು ಮನವಿ ಮಾಡಲಾಗಿದೆ ಎಂದರು.

ಸಾರ್ವಜನಿಕರಿಗೆ ಅನುಕೂಲ ಚಿಕ್ಕಮಗಳೂರು, ಕಡೂರು ಹಾಗೂ ತರೀಕೆರೆ ತಾಲ್ಲೂಕಿನಲ್ಲಿ ಹೊಸದಾಗಿ ಬಸ್ ನಿಲ್ದಾಣ ನಿರ್ಮಿಸಲು ಸರ್ಕಾರ ಮುಂದಾಗಿದೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 6 ಕೋಟಿಯಷ್ಟು ಉಚಿತ ಪ್ರಯಾಣ ನಡೆಸಲಾಗಿದ್ದು, 223 ಕೋಟಿ ರೂ.ಗಳನ್ನು ರಾಜ್ಯಸರ್ಕಾರ ಸಾರಿಗೆ ಇಲಾಖೆಗೆ ಭರಿಸಿದೆ ಎಂದು ಹೇಳಿದರು.

ಯುವನಿಧಿ ಯೋಜನೆಯಲ್ಲಿ ಜಿಲ್ಲೆಯ ಐದು ಸಾವಿರ ನಿರುದ್ಯೋಗ ಡಿಗ್ರಿ ಮತ್ತು ಡಿಪ್ಲೋಮೋ ಪದವಿ ಧರರಿಗೆ 13 ಕೋಟಿ ರೂ.ಗಳನ್ನು ಉದ್ಯೋಗ ಲಭಿಸುವತನಕ ಆರ್ಥಿಕ ನೆರವಾಗಿದ್ದು ಒಟ್ಟಾರೆ ಪಂಚ ಗ್ಯಾರಂ ಟಿ ಯೋಜನೆಗಳಿಂದ ಜಿಲ್ಲೆಯ ಜನರಿಗೆ 2093 ಕೋಟಿ ರೂ.ಗಳನ್ನು ಏಜೆಂಟರಿಲ್ಲದೇ ನೇರ ನಗದು, ಸವಲ ತ್ತು ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ. ಯೋಜನಾಧಿಕಾರಿ ರಾಜಗೋಪಾಲ್, ಜಿಲ್ಲಾ ಗ್ಯಾರಂಟಿ ಉಪಾಧ್ಯಕ್ಷ ಸಮೀವುಲ್ಲಾ ಶರೀಫ್, ಬಿ.ಜಿ.ಚಂದ್ರಮೌಳಿ, ಎನ್.ಎಸ್.ಹೇಮಾವತಿ, ವಿವಿಧ ತಾಲ್ಲೂಕು ಅಧ್ಯಕ್ಷರು, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ