sava

 

 

ಕಾಫಿ ಹಣ್ಣು ಕೊಯ್ಯುವಾಗ ತಲೆ ಮೇಲೆ ಮರದ ಕೊಂಬೆ ಮುರಿದು ಬಿದ್ದು ಕಾರ್ಮಿಕ ಯುವತಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ಸಮೀಪದ ಹೊಸಪೇಟೆ ಗ್ರಾಮದಲ್ಲಿ ಶನಿವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ. ತೊಗರಿ ಹಂಕಲ್ ಗ್ರಾಮದ ಮಲ್ಲನಗೌಡ ರವರ ತೊಗರಿಹಂಕಲ್ ಬಿ ಗ್ರೂಪ್ ಎಸ್ಟೇಟಿನ ಕಾಫಿ ತೋಟದಲ್ಲಿ   ಕಾಫಿ ಹಣ್ಣು ಕೊಯ್ಯುವಾಗ ಈ ದುರ್ಘಟನೆ ಸಂಭವಿಸಿದೆ. ಮೃತ ಯುವತಿಯನ್ನು ಹೊಸಪೇಟೆ ಗ್ರಾಮದ ಕವಿತಾ (21) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ  ಶಶಿಕಲಾ ಎಂಬ ಮತ್ತೋರ್ವ ಯುವತಿ ಗಾಯಗೊಂಡಿದ್ದಾರೆ.

ಈ ಬಗ್ಗೆ ಮೃತ ಯುವತಿಯ ಸಹೋದರ ಸಚಿನ್.ಎ  ಚಿಕ್ಕಮಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದ ದೂರಿನ ಸಾರಾಂಶದಂತೆ ; ಹೊಸಪೇಟೆ ಗ್ರಾಮದಲ್ಲಿ ವಾಸವಾಗಿರುವ ನಾವು ನಮ್ಮ ತಂದೆ ತಾಯಿಯವರಿಗೆ   3 ಜನ ಮಕ್ಕಳಿದ್ದು ಕವಿತ    ಮೂರನೇಯವಳಾಗಿರುತ್ತಾಳೆ. ನನ್ನ  ತಂಗಿಯಾದ ಕವಿತಳು   ದಿನಾಂಕ:17-01-2026 ರಂದು  ಬೆಳಿಗ್ಗೆ 9-00 ಗಂಟೆಗೆ ಹೊಸಪೇಟೆಯ ತೊಗರಿ ಹಂಕಲ್ ಗ್ರಾಮದ ಮಲ್ಲನಗೌಡ ರವರ ತೊಗರಿಹಂಕಲ್ ಬಿ ಗ್ರೂಪ್ ಎಸ್ಟೇಟಿನ ಕಾಫಿ ತೋಟಕ್ಕೆ  ಹೋಗಿದ್ದು ಮಲ್ಲನಗೌಡ ರವರ ಕಾಫಿ ತೋಟದಲ್ಲಿ ಕಾಫಿ ಹಣ್ಣನ್ನು ಕೊಯ್ಯತ್ತಿರುವಾಗ ಕೆಲಸ ಮಾಡುವ ಸ್ಥಳದಲ್ಲಿ  ಜೋರಾಗಿ ಗಾಳಿ ಬಂದಿದ್ದು ಜೋರಾಗಿ ಬಂದ ಗಾಳಿಗೆ ಕಾಫಿ ತೋಟದಲ್ಲಿ ಬೆಳೆದಿದ್ದ  ಹಳೆಯ ಕಾಡು ಜಾತಿಯ ಮರದ ಕೊಂಬೆಯು ಗಾಳಿಗೆ ಮುರಿದು ಬಿದ್ದಾಗ ತೋಟದಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಂಗಿ ಕವಿತ ಮತ್ತು ಶಶಿಕಲಾ ರವರುಗಳಿಗೆ  ಪೆಟ್ಟಾಗಿರುತ್ತದೆ.

ತಂಗಿ ಕವಿತ ಮತ್ತು ಶಶಿಕಲಾ ರವರುಗಳನ್ನು ಸ್ಥಳಕ್ಕೆ  ಬಂದ ಅಂಬುಲೆನ್ಸ್ ನಲ್ಲಿ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ವೈದ್ಯರು ಚಿಕಿತ್ಸೆಯನ್ನು  ನೀಡಿ ನಂತರ ಹೆಚ್ಚಿನ ಚಿಕಿತ್ಸೆ ಕೊಡಿಸುವಂತೆ ಸಲಹೆ ನೀಡಿದ್ದರಿಂದ  ನನ್ನ ತಂಗಿ ಕವಿತರವರನ್ನು  ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುತ್ತಿರುವಾಗ  ರಾತ್ರಿ 9-30 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ಧಾರೆ.

ತೀವ್ರವಾಗಿ ಗಾಯಗೊಂಡಿದ್ದ ಕವಿತಾ ಅವರನ್ನು ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು,  ಜಿಲ್ಲಾಸ್ಪತ್ರೆಯಲ್ಲಿ  ಡ್ಯೂಟಿಯಲ್ಲಿದ್ದ ವೈದ್ಯರಿಲ್ಲದೆ ನರ್ಸ್ ಹಾಗೂ ಕಾಂಪೌಂಡರ್‌ ಸೇರಿ ಯುವತಿಗೆ ಚಿಕಿತ್ಸೆ ನೀಡಿದ ಆರೋಪ ಕೇಳಿ ಬಂದಿದೆ. ಚಿಕಿತ್ಸೆ ಬಳಿಕ ಶಿವಮೊಗ್ಗಕ್ಕೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ದುರಾದೃಷ್ಟವಶಾತ್‌ ಆಕೆ ತರೀಕೆರೆ ಬಳಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದರು. ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ನರ್ಸ್ ಹಾಗೂ ಕಾಂಪೌಂಡರ್‌ ಒಂದು ಇಂಜೆಕ್ಷನ್‌ ಕೂಡ ಕೊಡದೇ ಕೇವಲ ಬ್ಯಾಂಡೇಜ್‌ ಹಾಕಿ, ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ಕ್ಯಾನ್ ಮಾಡದೆ, ಎಕ್ಸ್ ರೇ ಮಾಡದೆ, ಒಂದ್ ಇಂಜಕ್ಷನ್ ಕೂಡ ಮಾಡದೆ ಹೇಗೆ ಶಿವಮೊಗ್ಗಕ್ಕೆ ಕಳುಹಿಸಿದ್ರಿ? ಸ್ಥಳಕ್ಕೆ ಜಿಲ್ಲಾ ಸರ್ಜನ್ ಬರಬೇಕು ಎಂದು ಆಗ್ರಹಿಸಿ ಯುವತಿ ಕುಟುಂಬಸ್ಥರು ಕು ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆ ನಡೆಸಿದರು.

ಮೃತ ಯುವತಿಯನ್ನು ಹೊಸಪೇಟೆ ಗ್ರಾಮದ ಕವಿತಾ (21) ಎಂದು ಗುರುತಿಸಲಾಗಿದೆ. ಯುವತಿ ಕಾಫಿ ಹಣ್ಣು ಕೊಯ್ಯುವಾಗ ತಲೆ ಮೇಲೆ ಮರಬಿದ್ದು ಗಾಯಗೊಂಡಿದ್ದಳು. ಆಕೆಯನ್ನು ತಕ್ಷಣ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ