ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಯು.ಎಸ್.ಟಿ. ಕಂಪನಿ (ಬೆಂಗಳೂರು) ವತಿಯಿಂದ ಶಾಲಾ ಮಕ್ಕಳಿಗೂ ಹಾಗೂ ಅಂಗನವಾಡಿ ಮಕ್ಕಳಿಗೂ ನಲಿಕಲಿ ಟೇಬಲ್ ಹಾಗೂ ಚೇರ್‌ಗಳನ್ನು ವಿತರಿಸಲಾಯಿತು.
ಒಟ್ಟು 16 ನಲಿಕಲಿ ಟೇಬಲ್‌ಗಳು ಮತ್ತು 96 ಚೇರ್‌ಗಳನ್ನು ವಿತರಿಸಲಾಗಿದ್ದು, ಇದರ ಒಟ್ಟು ಮೌಲ್ಯ ರೂ.1,06,500 ಆಗಿರುತ್ತದೆ. ಸದರಿ ಸಾಮಗ್ರಿಗಳನ್ನು ಫಲ್ಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಕೇನಹಳ್ಳಿ ಹಾಗೂ ಬಗ್ಗಸಗೋಡು ಸರ್ಕಾರಿ ಶಾಲೆಗಳಿಗೆ ಮತ್ತು ಪಂಚಾಯಿತಿ ವ್ಯಾಪ್ತಿಯ ಎಂಟು ಅಂಗನವಾಡಿ ಕೇಂದ್ರಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಮಾರಿ ಶಶಿಕಲಾ, ಉಪಾಧ್ಯಕ್ಷೆ ಶ್ರೀಮತಿ ಸರಿತಾ ಲೋಹಿತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.
ಸಾಮಗ್ರಿಗಳನ್ನು ವಿತರಿಸಿದ ಯು.ಎಸ್.ಟಿ. ಕಂಪನಿಯ ಮನು ಅವರಿಗೆ ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಲತಾ ಸನಾಲ, ಅನಿತಾ ಮತ್ತು ಅರವಿಂದ್ ಅವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಧನ್ಯವಾದಗಳನ್ನು ತಿಳಿಸಲಾಯಿತು.
ಈ ವೇಳೆ ಯು.ಎಸ್.ಟಿ. ಕಂಪನಿಯವರು ಕಳೆದ ಸಾಲಿನಲ್ಲಿ ಸುಮಾರು ತಲಾ ರೂ.1.50 ಲಕ್ಷ ವೆಚ್ಚದಲ್ಲಿ ಐದು ಶಾಲೆಗಳಿಗೆ ಕಂಪ್ಯೂಟರ್ ಮತ್ತು ಪ್ರೊಜೆಕ್ಟರ್‌ಗಳನ್ನು ನೀಡಿದ್ದನ್ನು, ಜೊತೆಗೆ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್‌ಗಳು ಹಾಗೂ ಡ್ರಾಯಿಂಗ್ ಪುಸ್ತಕಗಳನ್ನು ವಿತರಿಸಿದ್ದನ್ನು ಸ್ಮರಿಸಲಾಯಿತು.




