ದಿನಾಂಕ 20/01/2026 ರಂದು ಬಿ.ಎಸ್ ಜಯರಾಮ್ ಮಾನ್ಯ ಅಧ್ಯಕ್ಷರು ಮೂಡಿಗೆರೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಇವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯ ನಡಾವಳಿ.
ಸ್ವಾಗತ: ಶ್ರೀಮತಿ ದಯಾವತಿ ಎಂ.ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಮೂಡಿಗೆರೆ ರವರು ಹಾಜರಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರುಗಳಿಗೆ ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳಿಗೆ ಸ್ವಾಗತ ಕೋರುತ್ತಾ, ಸಭೆಯನ್ನು ನಡೆಸಿಕೊಡುವಂತೆ ಮಾನ್ಯ ಅಧ್ಯಕ್ಷರನ್ನು ಕೋರಿದರು.
ಉಪಸ್ಥಿತಿ:
- ಶ್ರೀ ಬಿ.ಎಸ್. ಜಯರಾಮ್ ಮಾನ್ಯ ಅಧ್ಯಕ್ಷರು, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
- ಶ್ರೀಮತಿ ದಯಾವತಿ ಎಂ. ಸದಸ್ಯ ಕಾರ್ಯದರ್ಶಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
- ಶ್ರೀ ಹೆಚ್.ಪಿ. ರಮೇಶ್, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
- ಶ್ರೀ ಗುರುವಪ್ಪ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
- ಶ್ರೀ ಶ್ರೀನಿವಾಸ್, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
- ಶ್ರೀ ನವೀನ್, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
- ಶ್ರೀ ಭರತ್ ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
- ಶ್ರೀಮತಿ ಜಯಮ್ಮ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
- ಶ್ರೀ ಅರುಣ್, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
ಅನ್ನಭಾಗ್ಯ ಯೋಜನೆ:
ಆಹಾರ ಶಿರಸ್ತೇದಾರರು ಸಭೆಗೆ ಅನ್ನ ಭಾಗ್ಯ ಯೋಜನೆಯ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 843 ಬಿಪಿಎಲ್ ಪಡಿತರಚೀಟಿಯನ್ನು ರದ್ದುಪಡಿಸಿ ಎಪಿಎಲ್ ಕಾರ್ಡಿಗೆ ವರ್ಗಾಯಿಸಲಾಗಿದೆ. 18212 ಬಿಪಿಎಲ್ ಪಡಿತರಚೀಟಿ ಪ್ರಸ್ತುತ ಇರುತ್ತದೆ. ಪಡಿತರ ಚೀಟಿಗೆ E-KYC ನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳುವಂತೆ ತಿಳಿಸಿದರು. ಕುಟುಂಬದ ಯಜಮಾನ ಒಬ್ಬರೇ ಇರುವ ಪಡಿತರ ಚೀಟಿಗಳನ್ನು ಪರಿಶೀಲಿಸಿ ಯಜಮಾನ ಪೌತಿಯಾಗಿದ್ದಲ್ಲಿ ಅಂತಹ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುತ್ತಿದೆ. ತಾಲ್ಲೂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಬಂದಿದ್ದು, ಹೆಚ್ಚುವರಿ ಪಡಿತರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಪ್ರತಿ ತಿಂಗಳು 20ನೇ ದಿನಾಂಕದೊಳಗೆ ಪಡಿತರಕ್ಕೆ ಬೇಡಿಕೆ ಸಲ್ಲಿಸಬೇಕು ತದನಂತರ ಬೇಡಿಕೆ ಸಲ್ಲಿಸಿದ್ದಲ್ಲಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲವೆಂದು ಸಭೆಯಲ್ಲಿ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ:
ಇಲಾಖಾಧಿಕಾರಿಗಳು ಗೃಹಲಕ್ಷ್ಮಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 29032 ಗೃಹಲಕ್ಷ್ಮಿ ಫಲಾನುಭವಿಗಳು ಇದ್ದು, ಇದರಲ್ಲಿ 28654 ಫಲಾನುಭವಿಗಳಿಗೆ ಯೋಜನೆಯ ಹಣ ಬರುತ್ತಿರುವುದಾಗಿ ಹಾಗೂ ಯೋಜನೆಯಿಂದ ಬಾಕಿ ಉಳಿದ ರೇಷನ್ ಕಾರ್ಡ್‌ಗಳು NPCI 76, IT/GST 132, ತಿದ್ದುಪಡಿ/ಮರಣ 170 ಒಟ್ಟು 378 ಇರುತ್ತದೆ. ಸೆಪ್ಟೆಂಬರ್-2025 ರ ಮಾಹೆಯವರೆಗೆ ಗೃಹಲಕ್ಷ್ಮೀ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಿರುವುದಾಗಿ ತಿಳಿಸಿದರು.
ಗೃಹಜ್ಯೋತಿ ಯೋಜನೆ:
ಇಲಾಖಾಧಿಕಾರಿಗಳು ಗೃಹಜ್ಯೋತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 25985 ಗೃಹಜ್ಯೋತಿ ಫಲಾನುಭವಿಗಳು ಇದ್ದು, ಡಿಸಂಬರ್-2025 ರ ಮಾಹೆಯವರೆಗೆ 22476 ಫಲಾನುಭವಿಗಳಿಗೆ ಸರ್ಕಾರದಿಂದ ರೂ. 9329149/- ಅನುದಾನ ಬಿಡುಗಡೆಯಾಗಿರುತ್ತದೆ. ಹಾಗೂ ಸರ್ಕಾರದ ಆದೇಶದಂತೆ 126 ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಹಾಗೂ ಗೃಹಜ್ಯೋತಿ ಯೋಜನೆಯಲ್ಲಿ ಅಧಿಕ ವಿದ್ಯುತ್ ಬಳಸಿರುವ ಫಲಾನುಭವಿಗಳ ಸಂಖ್ಯೆ 3383 ಇದ್ದು, ರೂ. 794461/- ಬಿಲ್ ಪಾವತಿಸಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಅಂಗನವಾಡಿಗಳನ್ನು ಗೃಹಜ್ಯೋತಿ ಯೋಜನೆಗೆ ಒಳಪಡಿಸಲು ಕ್ರಮವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಯುವನಿಧಿ ಯೋಜನೆ:
ಜನವರಿ-2026 ರ ಮಾಹೆಯಿಂದ ಡಿಜಿಟಲ್ ಮಿತ್ರ ತರಭೇತಿಯು ಪ್ರಾರಂಭವಾಗಿರುತ್ತದೆ. ಪ್ರಸ್ತುತ 20 ಫಲಾನುಭವಿಗಳಿಗೆ ಆನ್ ಲೈನ್ ತರಭೇತಿ ನೀಡಲಾಗುತ್ತಿದೆ. ಯುವನಿಧಿ ಯೋಜನೆಗೆ ಡಿಸಂಬರ್-2025 ಮಾಹೆಯವರೆಗೆ ಪದವಿ ವಿಭಾಗದಲ್ಲಿ 3514 ಹಾಗೂ ಡಿಪ್ಲೊಮೋ ವಿಭಾಗದಲ್ಲಿ 41 ವಿಧ್ಯಾರ್ಥಿಗಳು ನೊಂದಣಿಯಾಗಿರುತ್ತಾರೆ. ಇವರಿಗೆ ಕೌಶಲ್ಯಾಭಿವೃದ್ದಿ ತರಭೇತಿಗೆ ನೊಂದಣಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ನೊಂದಣಿ ಮಾಡಿಕೊಂಡ ನಂತರ ಮೂಲ ದಾಖಲಾತಿಗಳನ್ನು ಸಲ್ಲಿಸಿದ್ದಲ್ಲಿ ಕೌಶಲ್ಯಾಭಿವೃದ್ದಿ ತರಭೇತಿಯನ್ನು ನೀಡಲಾಗುವುದೆಂದು ಹಾಗೂ ತರಭೇತಿ ಪಡೆಯದಿದ್ದಲ್ಲಿ ಯೋಜನೆಯಿಂದ ಕೈಬಿಡಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಶಕ್ತಿ ಯೋಜನೆ:
ಇಲಾಖಾಧಿಕಾರಿಗಳು ಶಕ್ತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಜನವರಿ ಮಾಹೆಯಲ್ಲಿ ಪ್ರಸ್ತುತ 175173 ಫಲಾನುಭವಿಗಳು ಬಸ್ ನಲ್ಲಿ ಪ್ರಯಾಣಿಸಿದ್ದು, ರೂ.8884000/- ಸರ್ಕಾರದಿಂದ ಅನುದಾನ ಬಿಡುಗಡೆಯಾಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಿದರು.
ಕೊಟ್ಟಿಗೆಹಾರ-ಶೃಂಗೇರಿ ಮಾರ್ಗವಾಗಿ ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಕೂವೆ, ನಿಡುವಾಳೆ ಗ್ರಾಮಸ್ಥರು ಸಲ್ಲಿಸಿದ್ದ ಕೋರಿಕೆ ಅರ್ಜಿಯನ್ನು ಜಿಲ್ಲಾ ಕಮಿಟಿ ಮುಖಾಂತರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ ಎಂದು ಮಾನ್ಯ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.
ಇತರೆ ವಿಷಯಗಳು:
ಮಾನ್ಯ ಅಧ್ಯಕ್ಷರು ಮಾತನಾಡಿತ್ತಾ, ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶವನ್ನು ಫೆಬ್ರವರಿ -2026 ರ ಮಾಹೆಯಲ್ಲಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ E-KYC ನ್ನು ಮಾಡಿಸಿಕೊಳ್ಳಲು ತಿಳಿಸಿದರು.
ಮತದಾರರು ತಮ್ಮ ಚುನಾವಣಾ ಗುರುತಿನ ಚೀಟಿಯಲ್ಲಿರುವ ಕ್ರಮಸಂಖ್ಯೆ ಹಾಗೂ ಭಾಗದ ಸಂಖ್ಯೆಯನ್ನು ನೀಡಿ ಮತದಾರರ ಪಟ್ಟಿ ಮ್ಯಾಪಿಂಗ್ ಮಾಡಿಸಿಕೊಳ್ಳುವಂತೆ ತಿಳಿಸಿದರು.
ತಾಲ್ಲೂಕಿನಲ್ಲಿ ಸ್ವಂತ ಕಟ್ಟಡ ಹೊಂದಿರುವ ಎಲ್ಲಾ ಅಂಗನವಾಡಿಗಳನ್ನು ಗೃಹಜ್ಯೋತಿ ಯೋಜನೆಗೆ ಒಳಪಡಿಸಲು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಮುಖಾಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.



