ಕೆಪಿಸಿಸಿ ನಿರ್ದೇಶನದ ಮೇರೆಗೆ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಮಾದ್ಯಮ ವಕ್ತಾರರನ್ನು ಆಯ್ಕೆ ಮಾಡಲು ಸಾಮಥ್ರ್ಯವುಳ್ಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಪಕ್ಷದ ತತ್ವ ಸಿದ್ದಾಂತ, ಚಾತುರ್ಯ ಹಾಗೂ ನಿಷ್ಠಾವಂತರಾಗಿರುವ ಕಾರ್ಯಕರ್ತರನ್ನು ಆಯ್ಕೆ ಮಾಡಲು ನಿರ್ಧ ರಿಸಲಾಗಿದೆ ಎಂದು ಕೆಪಿಸಿಸಿ ವೀಕ್ಷಕರಾಗಿ ಸೂರ್ಯ ಮುಕುಂದರಾವ್ ಹೇಳಿದರು.
ಚಿಕ್ಕಮಗಳೂರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ಧ ಜಿಲ್ಲಾ 12 ಬ್ಲಾಕ್ ಕಾಂಗ್ರೆ ಸ್ ಸಮಿತಿಗೆ ಮಾಧ್ಯಮ ವಕ್ತಾರ ನೇಮಕ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾ ಡಿದ ಅವರು ಆಕಾಂಕ್ಷೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಅಂಶುಮಂತ್ ಅಭ್ಯರ್ಥಿಗಳು ಮುಕ್ತ್ತ ಮನಸ್ಸುನಿಂದ ಮಾತಾಡುವ, ಸುದ್ದಿ ಗೋಷ್ಠಿಯಲ್ಲಿ, ಪತ್ರಿಕೆ ಹೇಳಿಕೆಯ ಹಾಗೂ ಟಿವಿ ಮಾಧ್ಯಮಗಳಲ್ಲೂ ಚರ್ಚೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನವಿರೋಧಿ ನೀತಿಗಳನ್ನು ಖಂಡಿಸುವ, ಸೈದ್ದಾಂತಿಕವಾಗಿ ಪಕ್ಷದ ಮಾನದಂಡ ಪ್ರಕಾರ ಕಾರ್ಯನಿರ್ವಹಣೆ ಮಾಡುವ ಕಾರ್ಯಕರ್ತರನ್ನು ನೇಮಕ ಮಾ ಡಲಾಗುವುದು ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದ ಸ್ವಾಮಿ ಸಭೆಯ ಉದ್ದೇಶ ಮತ್ತು ಮಹತ್ವ ತಿಳಿಸಿ ಸಭೆಯಲ್ಲಿ ಭಾಗವಹಿಸಿದ ಆಕಾಂಕ್ಷೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸಂಗ್ರಹಿಸಿ ವರಿಷ್ಠರ ಸಮಿತಿಗೆ ವೀಕ್ಷಕರ ಮೂಲಕ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರರಾದ ರವೀಶ್, ಹೆಚ್.ಹೆಚ್.ದೇವರಾಜ್, ಜಿಲ್ಲಾ ಮಾದ್ಯಮ ವಕ್ತಾರ ಎಲ್.ಟಿ.ಹೇಮಣ್ಣ ಮುಖಂಡರುಗಳಾದ ಅನಂತ್, ಶೃಂಗೇರಿ ಅಶೋಕ್, ನಗರ ಕಾಂಗ್ರೆಸ್ ಸಮಿತಿ ಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯ ಕರ್ತರು ಭಾಗವಹಿಸಿದ್ದರು.



