ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿ ಸತ್ತಿಹಳ್ಳಿ ಗ್ರಾಮದ ನಿವಾಸಿ ಹರೀಶ್ ಆಚಾರ್ ಇವರಿಗೆ ಸತ್ತಿಹಳ್ಳಿ ಗ್ರಾಮದ ಸರ್ವೆ ನಂಬರ್ 5/2 ರಲ್ಲಿ 33 ಗುಂಟೆ ಜಮೀನು ಇದ್ದು ಕಳೆದ 30 ವರ್ಷಗಳಿಂದ ಕೃಷಿ ನಡೆಸುತಿದ್ದಾರೆ. ಇವರ ಜಮೀನಿಗೆ ಹೋಗಲು ನಕಾಶೆ ಕಂಡಂತಹ ರಸ್ತೆ ಇದ್ದು ಆ ರಸ್ತೆಯಲ್ಲಿ ತಿರುಗಾಡಲು ಇವರಿಗೆ ಅವಕಾಶ ನೀಡದೆ ಇವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ, ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ವಿವೇಕಾನಂದ ಯುವಕ ಸಂಘ ಆಮನವಿ ಮಾಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮುಖಂಡರು ಸತ್ತಿಹಳ್ಳಿ ಗ್ರಾಮದ ನಿವಾಸಿಯಾದ ಹರೀಶ್ ಆಚಾರ್ ಇವರಿಗೆ ಸದಾಶಿವ. ಗಿರೀಶ್. ಗೀತಾ ಓಂಕಾರಮ್ಮ ಇವರುಗಳು ಮಾನಸಿಕ ಹಿಂಸೆಯನ್ನು ಕೊಟ್ಟು ಕಿರುಕುಳ ನೀಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಆಲ್ದೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದರು ಪೊಲೀಸ್ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ದೂರಿದರು.
ಜನವರಿ 6 ರಂದು ತಾಲೂಕು ಕಚೇರಿಯ ತಹಸೀಲ್ದಾರ್ ಸ್ಥಳ ಪರಿಶೀಲನೆ ಮಾಡಿ ನಕಾಶೆ ಕಂಡ ರಸ್ತೆ ಎಂದು ಕಂಡು ಬಂದಿರುತ್ತದೆ ಆದರೂ ದೂರಿನ ಬಗ್ಗೆ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ ಖಂಡನೀಯ ಎಂದು ವಿವೇಕಾನಂದ ಯುವಕ ಸಂಘವು ಆರೋಪಿಸಿದೆ.
ವಿವೇಕಾನಂದ ಸಂಘ ದ ಅಧ್ಯಕ್ಷ ರಾಜು ಆರ್ ಮಾತನಾಡಿ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಜಾಗ. ಗ್ರಾಮ ಠಾಣಾ .ರಸ್ತೆ. ಕೆರೆಕಟ್ಟೆಗಳನ್ನು ಕಬ್ಬಳಿಸುವಂತಹ ದೊಡ್ಡ ಮಾಫಿಯಾ ಕೆಲಸ ಮಾಡುತ್ತಿದೆ ಆದರೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮರೆತು ಕೈಕಟ್ಟಿ ಕುಳಿತುಕೊಂಡಿದ್ದಾರೆ ಇದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.
ನೊಂದು ಕಂಗಾಲಾದ ಕೃಷಿಕ ಹರೀಶ್ ಆಚಾರ್ಯ ಅವರ ಕುಟುಂಬಕ್ಕೆ ಸೂಕ್ತವಾದ ಕಾನೂನು ರಕ್ಷಣೆಯನ್ನು ನೀಡಿ ತಪ್ಪಿತಸ್ಥರ ವಿರುದ್ಧವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ವಿವೇಕಾನಂದ ಯುವಕ ಸಂಘದ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ .ಉಪ ಪೊಲೀಸ್ ಅಧೀಕ್ಷಕ ಜಯಕುಮಾರ್ ಅವರನ್ನು ಭೇಟಿ ಮಾಡಿ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ. ವಿವೇಕಾನಂದ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್ ಕುಮಾರ್ ಎಚ್.ಟಿ ಗೌರವಾಧ್ಯಕ್ಷ . ಲಕ್ಷ್ಮಣ್ ಗೌಡ. ಸತೀಶ್. ರಮೇಶ್ ಕುಮಾರ್. ವಿನುತಾ. ಮಂಜುನಾಥ್. ಹರೀಶ್ ಆಚಾರ್. ಮುಂತಾದವರು ಉಪಸ್ಥಿತರಿದ್ದರು



