pravasa

 

 

ಕಳಸ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ಅಬ್ಬುಗುಡಿಗೆ ಜಲಪಾತಕ್ಕೆ ಹೋಗುವ ರಸ್ತೆಯಲ್ಲಿ ಗೇರುತೋಟ                                    ಗ್ರಾಮಸ್ಥರಿಂದ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಪ್ರವಾಸಿಗರಿಂದ, ಸ್ಥಳೀಯರಿಂದ ಎಲ್ಲೆಂದರಲ್ಲಿ ಎಸೆಯಲ್ಪಟ್ಟ ಪ್ಲಾಸ್ಟಿಕ್, ನೀರು ಬೀರಿನ ಬಾಟಲಿಗಳನ್ನು ಸಂಗ್ರಹಿಸಿ ಲಾರಿಯಲ್ಲಿ ತುಂಬಿಸಿ ಬೇರೆಡೆಗೆ ಸಾಗಿಸಲಾಯಿತು.

ರಸ್ತೆಯ ಇಕ್ಕೆಲಗಳಲ್ಲಿ ತುಂಬಿ ಹೋಗಿರುವ ಮುಳ್ಳಿನ ಗಿಡಗಂಟಿಗಳು, ಬಾಗಿರುವ ಮರದ ಕೊಂಬೆಗಳು, ಈಗಿರುವ ಪ್ಲಾಸ್ಟಿಕ್, ಬಾಟಲಿಗಳು ಸೇರಿದಂತೆ ಸಾಧ್ಯವಾದಷ್ಟು ಎಲ್ಲಾ ರೀತಿಯ ಕಸವನ್ನು ಹೆಕ್ಕಿ ಲಾರಿಗೆ ತುಂಬಿಸಲಾಯಿತು.

ನಂತರ ಮುಂದೆ ಯಾರೂ ಸಹ ಎಲ್ಲೆಂದರಲ್ಲಿ ಕಸಗಳನ್ನ ಎಸೆಯದಂತೆ ಗ್ರಾಮ ಅರಣ್ಯ ಸಮಿತಿ, ಅರಣ್ಯ ಇಲಾಖೆ, ಗ್ರಾಮಪಂಚಾಯಿತಿ ಅಧಿಕಾರಿಗಳೊಂದಿಗೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದೆಂದು ಚರ್ಚಿಸಿ ತೀರ್ಮಾನಿಸಲಾಗುವುದು ಹಾಗೂ ಸಂಜೆ ವೇಳೆ ಸಾರ್ವಜನಿಕ ರಸ್ತೆ ಬದಿಯಲ್ಲಿ ನಡೆಯುವ ಮದ್ಯಪಾನ, ಮೋಜುಮಸ್ತಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೂ ದೂರು ಸಲ್ಲಿಸಲಾಗುವುದೆಂದು ಎಂದು ಗ್ರಾಮಸ್ಥ ಹಾಗೂ ಅರಣ್ಯ ಸಮಿತಿಯ ನೂತನ ನಿರ್ದೇಶಕ ಸುಧೀರ್ ಅಬ್ಬುಗುಡಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ವಚ್ಛತಾ ಕಾರ್ಯದಲ್ಲಿ ಸುಧೀರ್ , ಚಂದ್ರಶೇಖರ್ ,ಚಿಕ್ಕುಡಿಗೆಯ ರಮೇಶ್, ಪುಷ್ಪಾ, ರಾಕೇಶ್, ಅರುಣ್, ಶರತ್ ಹಾಗೂ ಇತರರು, ಉಪವಲಯ ಅರುಣ್ಯಾಧಿಕಾರಿ ಹರೀಶ್ , ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ