ಮಹಿಳೆಯರ ಆರ್ಥಿಕ ಸ್ವಾವಲಂಬನೆ ಅಗತ್ಯ ಎಂದು ಮೂಡಿಗೆರೆ ಪ.ಪೂ.ಕಾಲೇಜು ಪ್ರಾಂಶುಪಾಲೆ ಸವಿತಾರಮೇಶ್ ಅಭಿಪ್ರಾಯಿಸಿದರು.
ಲೇಡೀಸ್‍ಕ್ಲಬ್ ಚಿಕ್ಕಮಗಳೂರು ನಗರದ ಲಯನ್ಸ್‍ಭವನದಲ್ಲಿ ಆಯೋಜಿಸಿದ್ದ ಮೂರನೆಯ ವಾಷಿಕೋತ್ಸವ ಹಾಗೂ ಮಹಿಳಾದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಸುಶಿಕ್ಷಿಷಿತರಾಗಿ ಆರ್ಥಿಕಸ್ವಾವಲಂಬನೆಯತ್ತ ಗಮನಹರಿಸಬೇಕೆಂದರು.
ವೇದಕಾಲದಲ್ಲಿ ಸ್ತ್ರೀಯನ್ನು ಪೂಜ್ಯಭಾವನೆಯಿಂದ ಕಾಣಲಾಗುತ್ತಿತ್ತು. ಮಧ್ಯಯುಗದಲ್ಲಿ ಮನುಸ್ಪøತಿಯಿಂದ ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಬಿಂಬಿಸಲಾಯಿತು. ಆಧುನಿಕತೆಯ ಬದಲಾವಣೆಯ ಗಾಳಿ ಬೀಸಿ ಮತ್ತೇ ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ್ದಾಳೆ ಎಂದರು.
ಮನೆಗಳಲ್ಲಿ ಹಿರಿಯರು ಇರಬೇಕು. ಗಂಡು-ಹೆಣ್ಣು ಎಂಬ ತಾರತಮ್ಯ ಮಾಡದೆ ಮಕ್ಕಳನ್ನು ಬೆಳೆಸಿದರೆ ಅವರ ಭವಿಷ್ಯ ಉತ್ತಮವಾಗಿರುತ್ತದೆ.
ಮಹಿಳೆಯರಿಗೆ ಸ್ವಾತಂತ್ರ ಮತ್ತು ಸಮಾನತೆ ಸಿಗುತ್ತಿಲ್ಲ. ಶೇ.33 ಮೀಸಲಾತಿ ದೊರೆತರೂ ಸರಿಯಾದ ತರಬೇತಿ ಇಲ್ಲ ಎಂದ ಸವಿತಾ, ವಿದ್ಯೆಗೆ ಪ್ರಾಧಾನ್ಯತೆ ಸಿಗಬೇಕಾಗಿದೆ. ಲೇಡಿಸ್ ಕ್ಲಬ್ ಮಹಿಳೆಯರೆ ಕಟ್ಟಿದಂತಹ ಸಂಸ್ಥೆ. ಅನೇಕ ಸೇವಾ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಪಡೆಯಲಿ ಎಂದು ಹಾರೈಸಿದರು.
ಹೆಣ್ಣು ಎಷ್ಟೇ ಕಲಿತರೂ ಸಮಾಜದಲ್ಲಿ ಒಂದಿಲ್ಲೊಂದು ದೌರ್ಜನ್ಯಕ್ಕ ಒಳಗಾಗುತ್ತಿದ್ದಾಳೆ. ಮಹಳೆಯರು ತಮ್ಮ ಸಮಸ್ಯೆಗಳಿಗೆ ತಾನೇ ಪರಿಹಾರ ಕಂಡುಕೊಳ್ಳುವ ಬುದ್ಧಿಶಕ್ತಿ ಬೆಳೆಸಿಕೊಳ್ಳಬೇಕು. ಆರ್ಥಿಕಸ್ವಾವಲಂಬನೆ ಪಡೆಯಬೇಕು. ಮಹಿಳೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು. ಸ್ತ್ರಿ ಸಹನಾಶೀಲಳು ಮತ್ತು ಕ್ಷಮಯಾಧರಿತ್ರೆಯೂ ಹೌದು. ದೇವರು ಹೆಣ್ಣಿಗೆ ಹೆಚ್ಚಿನ ಬುದ್ಧಿಶಕ್ತಿ ಕೊಟ್ಟಿರುತ್ತಾನೆಂದು ಸವಿತಾ ನುಡಿದರು.
ಲೇಡಿಸ್‍ಕ್ಲಬ್ ಅಧ್ಯಕ್ಷೆ ಯಶೋಧಶಿವಪ್ಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಸಂಘ ಮತ್ತು ಸಂಸ್ಥೆಗಳನ್ನು ಸ್ಥಾಪಿಸುವ ಉದ್ದೇಶ ಯಾವುದೇ ಒಳ್ಳೆಯ ಕೆಲಸ ಮಾಡುವ ಮೊದಲು ಸಂಕಲ್ಪ ದೃಢವಾಗಿರಬೇಕು ಮತ್ತು ಅದು ಪಾರದರ್ಶಕವಾಗಿರಬೇಕು. ನಾವು ಮಾಡುವ ಅಳಿಲುಸೇವೆ ಇನ್ನೊಬ್ಬರ ಮನಸ್ಸು ತಟ್ಟುವಂತಿರಬೇಕೆಂದ ಯಶೋಧ, ಒಬ್ಬರಿಂದ ಅದು ಅಸಾಧ್ಯ, ಎಲ್ಲರೂ ಕೈಜೋಡಿಸಿದಾಗ ವಿಶೇಷಸಾಧನೆ ಸಾಧ್ಯ ಎಂದರು.
ಅಂತರರಾಷ್ಟ್ರೀಯಮಟ್ಟದಲ್ಲಿ ಲಯನೆಸ್ ಕ್ಲಬ್ ಲಯನ್ಸ್‍ನೊಂದಿಗೆ ಸಮ್ಮಿಳಿತವಾದ ನಂತರ ಚಿಕ್ಕಮಗಳೂರಿನಲ್ಲಿ ಸಮಾನಮನಸ್ಕರಾದ ನಾವು ಲೇಡೀಸ್‍ಕ್ಲಬ್ ಸ್ಥಾಪಿಸಿ 3ವರ್ಷಗಳಿಂದ ಅನೇಕ ಸೇವಾಕಾರ್ಯಗಳನ್ನು ಮಾಡಲಾಗಿದೆ. ಮಾಗಡಿ ಸರ್ಕಾರಿ ಶಾಲಾವಿದ್ಯಾರ್ಥಿಗಳಿಗೆ ಅಂದಾಜು 15,000ರೂ.ಮೌಲ್ಯದ ಸಮವಸ್ತ್ರ ಕೊಡುಗೆ ನೀಡಿದ್ದು, ಉಪ್ಪಳ್ಳಿಯ ಉದ್ಯಾನವನಕ್ಕೆ ಸಾರ್ವಜನಿಕವಾಗಿ ಉಪಯುಕ್ತವಾಗುವ ಆಟುಕೆ ಸೇರಿದಂತೆ ಮೂಲಸೌಕರ್ಯಗಳ ಕೊಡುಗೆ ನೀಡುವ ಆಶಯ ಹೊಂದಿದೆ ಎಂದ ಯಶೋಧ, ಸೇವಾ ಮನೋಭಾವ ಇದ್ದಾಗ ಮಾತ್ರ ಸಂಸ್ಥೆ ಸ್ಥಾಪಿಸಿದ್ದು ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದ ಸಹಭಾಗಿತ್ವ ನೀಡಿದ್ದ ನಾದಚೈತನ್ಯ ಸಾಂಸ್ಕøತಿಕ ಯುವಕಲಾವೇದಿಕೆಯ ಕಾರ್ಯದರ್ಶಿ ರೇಖಾಪ್ರೇಂಕುಮಾರ್ ಮಾತನಾಡಿ ‘ನಾರಿತ್ವದಿಂದ ನಾರಾಯಣತ್ವದೆಡೆಗೆ’ ಸಾಗುವುದಲ್ಲಿ ಸಾರ್ಥಕತೆ ಇದೆ. ಕುಟುಂಬ ನಿರ್ವಹಣೆ ಅಷ್ಟೇ ಅಲ್ಲ ಸಮಾಜ ನಿರ್ಮಾಣದಲ್ಲೂ ಸ್ತ್ರೀಪಾತ್ರ ದೊಡ್ಡದಿದೆ. ಮಹಿಳಾ ದಿನಾಚರಣೆಯನ್ನು ನಾವೇ ಆಚರಿಸಿ ಸಂಭ್ರಮಿಸುವಂತದ್ದಲ್ಲ, ಪುರುಷರೂ ಆಚರಿಸಿ ಗೌರವಿಸಿದಾಗ ಅರ್ಥಪೂರ್ಣ ಎಂದರು.
ರಾಷ್ಟ್ರೀಯ ಸಾವಿತ್ರಿಬಾಯಿ ಪುಲೆ ಪ್ರಶಸ್ತಿಪುರಸ್ಕøತರಾದ ಯಲಗುಡಿಗೆ ಶಿಕ್ಷಕಿ ಗೀತಾರಾಜವತ್, ದಾನಿಗಳಾದ ಸುಲೋಚನಮ್ಮಶ್ರೀನಿವಾಸ್ ಮತ್ತು ಸುಜಾತಗುರುಮೂರ್ತಿ, ಗಾಯಕಿ ರೇಖಾ ಮತ್ತು ಪಿಎನ್‍ಬಿ ಉಪಸಂಪಾದಕಿ ಸುಮಿತ್ರಾಶಾಸ್ತ್ರಿ ಅವರುಗಳನ್ನು ಇದೇ ಸಂದರ್ಭದಲ್ಲಿ ಗೌರವಿಸÀಲಾಯಿತು. ಲಯನ್ಸ್‍ಕ್ಲಬ್ ಅಧ್ಯಕ್ಷ ಕುಮಾರ್, ಟ್ರಸ್ಟಿ ಸುರೇಶ್, ಪ್ರಾಂತೀಯಅಧ್ಯಕ್ಷ ವೆಂಕಟೇಶ್ ಮತ್ತಿತರರು ವೇದಿಕೆಯಲ್ಲಿದ್ದರು.
ಲೇಡಿಸ್‍ಕ್ಲಬ್ ಕಾರ್ಯದರ್ಶಿ ರುಕ್ಮಿಣಿರವೀಂದ್ರನಾಥ್ ವಾರ್ಷಿಕವರದಿ ಮಂಡಿಸಿದರು. ಭಾರತಿಈಶ್ವರ್ ಕಾರ್ಯಕ್ರಮ ನಿರೂಪಿಸಿ, ದಾಕ್ಷಾಯಣಿ ಸ್ವಾಗತಿಸಿ, ನಾಗರತ್ನ ವಂದಿಸಿದರು. ಸರಳಾಶ್ರೀಧರ್, ಸುಪ್ರಭ ಮತ್ತು ವಿಜಯಕೇಶವಮೂರ್ತಿ ಅತಿಥಿ ಪರಿಚಯಿಸಿದರು. ಸುಲೋಚನಮೋಹನ್ ಧ್ವಜವಂದನೆ ಸಲ್ಲಿಸಿದರು.
ನಾದಚೈತನ್ಯದ ಹಂಸಿನಿ, ಹರ್ಷಣಿ ಮತ್ತು ಅಂಜನಾ ಗಾಯನ ಗಮನಸೆಳೆಯಿತÀು. ವಿವಿಧ ಆಟೋಟಸ್ಪರ್ಧಾ ವಿಜೇತರಿಗೆ ಯಶೋಧಶಿವಪ್ಪ ಬಹುಮಾನ ವಿತರಿಸಿದರು. ಸಾಂಸ್ಕøತಿಕ ಕಾರ್ಯಕ್ರಮಗಳು ಆಕರ್ಷಕವಾಗಿತ್ತು.



