ಸ್ವದೇಶಿ ವರರನ್ನು ವಿದೇಶಿ ವಧು ಕಂಕಣ ಭಾಗ್ಯದಲ್ಲಿ ವರಿಸಿಕೊಳ್ಳುವ ಅಪರೂಪದ ದೃಶ್ಯಾವಳಿಗೆ ಚಿಕ್ಕಮಗಳೂರು ನಗರದ ಜಿಲ್ಲಾ ಒಕ್ಕಲಿಗರ ಕಲ್ಯಾಣ ಮಂಪಟ ಸಾಕ್ಷಿಯಾಯಿತು.
ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಡಾವಣೆ ನಿವಾಸಿ ಕಸ್ತೂರಿ ಮತ್ತು ಕೆ.ಎನ್.ಶ್ರೀನಿವಾಸ್ ಪುತ್ರ ರೂಪಕ್ ಅವರು ಚೀನಾ ದೇಶದ ತನ್ನ ಪ್ರೇಯಸಿ ಜೇಡ್ ಅವರನ್ನು ಭಾರತೀಯ ಸಂಸ್ಕೃತಿಯಂತೆ ಶಾಸ್ತ್ರೋಕ್ತವಾಗಿ ವಿವಾಹವಾದರು. ಆಸ್ಟೇಲಿಯಾದಲ್ಲಿ ವೃತ್ತಿನಿರತರಾಗಿರುವ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಎರಡು ಕುಟುಂಬಗಳು ಒಪ್ಪಿಗೆ ಮೇರೆಗೆ ಎರಡೂ ಕುಟುಂಬದ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಯುವಕ ರೂಪಕ್ ಎಂಬುವವರು ಕಳೆದ 13 ವರ್ಷಗಳಿಂದ ಆಸ್ಟೇಲಿಯಾ ದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ಧ ಜೇಡ್ ಪರಸ್ಪರ ಪರಿಚಯ, ಸ್ನೇಹ ಹಾ ಗೂ ಪ್ರೀತಿ ತಿರುಗಿ ಮದುವೆ ಮಂಟಪಕ್ಕೆ ಕರೆತಂದಿದೆ ಎನ್ನಲಾಗಿದೆ.




