ಭಾರತರತ್ನ ದಿವಂಗತ ಕರ್ಪೂರಿ ಠಾಕೂರ್ ಅವರು ರಾಜಕೀಯದ ಪ್ರಮುಖ ಸಮಾನತೆ ಮೌಲ್ಯಗಳ ನಾಯಕರಾಗಿದ್ದರೆಂದು ಚಿಂತಕ ನರಸಿಂಹ ಹೇಳಿದರು.
ಅವರು ಶನಿವಾರ ಮೂಡಿಗೆರೆ ಪಟ್ಟಣದ ಹಳೆಮೂಡಿಗೆರೆ ಸೊಸೈಟಿ ಸಭಾಂಗಣದಲ್ಲಿ ತಾಲೂಕು ಭಂಡಾರಿ ಸಮಾಜದಿಂದ ಏರ್ಪಡಿಸಿದ್ದ ಭಾರತರತ್ನ, ಹಿಂದುಳಿದ ವರ್ಗದ ಜನನಾಯಕ ದಿವಂಗತ ಕರ್ಪೂರಿ ಠಾಕೂರ್ ಅವರ 102 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕೀಯ ಕ್ಷೇತ್ರ ಎಂದಾ ಕ್ಷಣ ಜನರಿಗೆ ಅಸಡ್ಡೆ ಹಾಗೂ ತಾತ್ಸಾರ ಮನೋಭಾವ ಮೂಡುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಕರ್ಪೂರಿ ಠಾಕೂರ್ ಅವರ ರಾಜಕೀಯ ಜೀವನದಲ್ಲಿ ಮಾಡಿದ ಜನಪರ ಯೋಜನೆ ಮಹತ್ವವಾದದ್ದು ಎಂದು ಬಣ್ಣಿಸಿದರು.
ಸಮಾಜದ ಅಧ್ಯಕ್ಷ ಎಂ.ಕೆ.ಷಣುಖ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಅತಿ ಹಿಂದುಳಿದ ರಾಜ್ಯವಾದ ಬಿಹಾರವನ್ನು ಮಾದರಿ ರಾಜ್ಯವನ್ನಾಗಿ ರೂಪಿಸುವಲ್ಲಿ ಕರ್ಪೂರಿ ಠಾಕೂರ್ ರವರ ಸೇವೆಯನ್ನು ಜನೆ ಸದಾ ಸ್ಮರಿಸುವಂತಾಗಿದೆ ಕರ್ನಾಟಕದಲ್ಲಿ ಠಾಕೂರ್ ಅವರ ಶತಮಾನೋತ್ಸವ ಆಚರಿಸಲು ಸಿದ್ಧತೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಸಮಾಜದ ಬೆಂಗಳೂರು ವಲಯಾಧ್ಯಕ್ಷ ಮೋಹನ್ ಭಂಡಾರಿ, ಸಬ್ ರಿಜಿಸ್ಟರ್ ಆಧಿಕಾರಿ ಪಿ.ಎಸ್.ನಾರಾಯಣ ಭಂಡಾರಿ, ನಿಡುವಾಳೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಸುಜಾತಾ ವಾಸು ಭಂಡಾರಿ, ಜನ್ನಾಪುರ ಮೆಸ್ಕಾಂ ಎಂಜಿನಿಯರ್ ಜಿ.ಕೆ.ರವಿ ಕುಮಾರ್, ಶಿಕ್ಷಕಿ ರೇಖಾ ಪ್ರಶಾಂತ್, ಎಲ್‍ಐಸಿ ಅಧಿಕಾರಿ ರಮೇಶ್ ಭಂಡಾರಿ, ಸಂಘದ ಗೌರವಾಧ್ಯಕ್ಷ ಲೋಕೇಶ್ ಭಂಡಾರಿ, ಕಾರ್ಯದರ್ಶಿ ಕೆ.ಎಸ್.ನಾಗೇಶ್ ಭಂಡಾರಿ, ಉಪಸ್ಥಿತರಿದ್ದರು.



