NEWS 1 (1)

 

 

ಹೆಣ್ಣಿನಲ್ಲಿ ಅಪಾರವಾದ ಶಕ್ತಿಯಿದೆ, ಮನೆ-ಮನ ದೀಪ ಬೆಳಗಿಸುವ, ವಿವಿಧ ಕ್ಷೇತ್ರಗಳಲ್ಲಿ ಸಾಧಿಸುವ ಛಲ ಹಾಗೂ ಮನೆಮಂದಿಯ ಆರೋಗ್ಯವನ್ನು ಸದೃಢವಾಗಿ ಕಾಪಾಡುವ ಅಗಾಧವಾದ ಕ್ಷಮತೆ ಹೆಣ್ಣಿನಲ್ಲಿದೆ ಎಂದು ಚಿಕ್ಕಮಗಳೂರು ನಾದಚೈತನ್ಯ ಸಂಸ್ಥಾಪಕಿ ರೇಖಾ ಪ್ರೇಮ್‍ಕುಮಾರ್ ಹೇಳಿದರು.

ಚಿಕ್ಕಮಗಳೂರು ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕಾಲೇಜು ಶಿಕ್ಷಣ ಇಲಾಖೆ, ರೇಂಜರ್ಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಗಳ ಸಹಯೋಗದಲ್ಲಿ ಆಯೋಜಿಸಿದ್ಧ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಕುಟುಂಬದ ಜೊತೆಗೆ ಸಮಾಜದ ಕಣ್ಣು. ಸಮಾಜದ ಪ್ರತಿ ಕ್ಷೇತ್ರದಲ್ಲೂ ತನ್ನನ್ನು ತೊಡ ಗಿಸಿಕೊಂಡು ಪುರುಷರಂತೆ ಸರಿಸಮಾನವಾಗಿ ಬದುಕುತ್ತಿದ್ದಾಳೆ. ವಿವಿಧ ದೃಷ್ಟಿಕೋನದಲ್ಲಿ ಜೀವಿಸುತ್ತಿ ರುವ ಹೆಣ್ಣಿಗೆ ಸಮಾಜದಲ್ಲಿ ವಿವಿಧ ಅವಕಾಶಗಳಿದ್ದು ಬುದ್ದಿಶಕ್ತಿ ಹಾಗೂ ವಿವೇಕದಿಂದ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯಾರ್ಥಿನಿಯರ ವ್ಯಕ್ತಿತ್ವ ವಿಕಸನ ಬಲಿಷ್ಟಗೊಳಿಸಲು ಕಾಲೇಜು ವ್ಯಾಸಂಗ ಪೂರಕ. ಶಿಸ್ತುಬದ್ಧ ಕಲಿಕೆ, ಕೌಶಲ್ಯಯುತ ಗುಣಗಳನ್ನು ಅಳವಡಿಸಿಕೊಂಡು ಸಾಗಿದರೆ ಬದುಕು ಮುಂಚೂಣಿಗೆ ಕೊಂಡೊಯ್ಯುತ್ತದೆ. ಇ ತ್ತೀಚೆಗೆ ಮಹಿಳೆ ಆಟೋ ರೀಕ್ಷಾದಿಂದ, ಅಂತರೀಕ್ಷಾದವರೆಗೂ ಪಾದಾರ್ಪಣೆ ಮಾಡುವ ಮೂಲಕ ದೊಡ್ಡ ಕ್ರಾಂತಿಯನ್ನೇ ಮೂಡಿಸಿದ್ದಾರೆ ಎಂದರು.

ಕಲಿಕೆ ವಯಸ್ಸಿನಲ್ಲಿ ಬುದ್ದಿವಂತಿಕೆ, ಸಂಯಮ, ವಿವೇಕದಿಂದ ಕೂಡಿರಬೇಕು. ಸಾಮಾಜಿಕ ಜಾಲತಾಣ ದಲ್ಲಿ ಪ್ರಪಂಚದ ಆಗು-ಹೋಗುಗಳ ವಿಷಯವನ್ನು ಅರಿತುಕೊಳ್ಳಬೇಕೇ ಹೊರತು ಸಮಯವನ್ನು ಕಳೆಯ ಲು ಬಳಸಬಾರದು. ವಿದ್ಯಾರ್ಜನೆ ಜೊತೆಗೆ ಉದ್ಯಮಿಗಳಾಗಿ, ಉದ್ಯೋಗ ಸೃಷ್ಟಿಸುವ ಕಾಯಕಕ್ಕೆ ಮುಂದಾಗ ಬೇಕು ಎಂದು ತಿಳಿಸಿದರು.

ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಸಂಗತಿಗಳನ್ನು ಬಳಸಿಕೊಂಡು ಜ್ಞಾನ ಸಂಪಾದಿಸಬೇಕು. ಪ್ರ ತಿನಿತ್ಯವು ಪತ್ರಿಕೆಗಳನ್ನು ಓದುವ ಹವ್ಯಾಸ ಹಾಗೂ ರಾಜ್ಯಮಟ್ಟದ ಮುದ್ರಣಗೊಳ್ಳುವ ವಿಶೇಷ ಲೇಖನಗಳ ಅಧ್ಯಯನವಿರಬೇಕು. ಅವಕಾಶದ ಬಾಗಿಲು ಎಂಬುದು ಸುಲಭವಾಗಿ ಸಿಗುವುದಿಲ್ಲ. ಅಪಾರವಾದ ಜ್ಞಾನದ ಅವಶ್ಯಕತೆಯಿದ್ದು, ಬಾಗಿಲು ತೆರೆದಾಗ ತಯಾರಿರಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ|| ಮೂಡಲಗಿರಿಯ್ಯ ಸಮಾಜದಲ್ಲಿ ಹೆಣ್ಣಿನ ವ್ಯವಸ್ಥೆ ಕ್ರೌರ್ಯ ಹಾಗೂ ಹಿಂಸಾತ್ಮಕವಾಗಿದೆ. ಆ ನಿಟ್ಟಿನಲ್ಲಿ ಹೆಣ್ಣು ಗಟ್ಟಿಯಾಗಲು ಸಮಗ್ರ ವಿದ್ಯಾಭ್ಯಾ ಸಕ್ಕೆ ಒಳಗಾಗಬೇಕು. ಜ್ಞಾನ ವೃದ್ದಿಸಿ, ವಿವೇಕ ಹೆಚ್ಚಿಸಿ ಕುಟುಂಬದ ಜೊತೆಗೆ ಸಮಾಜದ ಕಣ್ಣಾಗಬೇಕು ಎಂ ದು ಹೇಳಿದರು.

ಪ್ರಪಂಚ ಹಾಗೂ ಪುರುಷ ಜನಾಂಗದ ಅಭಿವೃದ್ದಿ ಹೆಣ್ಣಿನ ಅವಶ್ಯಕತೆ ಬಹಳಷ್ಟಿದೆ. ಸಮಾಜಕ್ಕೆ ಹೆಣ್ಣು ಬಲ, ಧೈರ್ಯ ಹಾಗೂ ದಿಕ್ಕಿನಂತೆ. ಕುಟುಂಬದ ಪರಿಕಲ್ಪನೆ ಹೆಣ್ಣಿಂದ ಸಾಧ್ಯ. ಜಗತ್ತಿನಲ್ಲಿ ಹೆಣ್ಣಿಲ್ಲದಿದ್ದರೆ ಏನ ನ್ನು ಸಾಧಿಸಲಾಗದು. ಪುರುಷರ ಅಹಂನ್ನು ತಗ್ಗಿಬಗ್ಗಿಸುವ ಶಕ್ತಿ ಹೆಣ್ಣಿಗಿದೆ. ಪ್ರೀತಿ ಜನನಕ್ಕೂ ಹೆಣ್ಣೆ ಮೂಲ ±ಎಂಬುದು ಮನಗಾಣಬೇಕು ಎಂದರು.

ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಜಿ.ಮಹೇಶ್ವರಪ್ಪ, ವಾಣಿಜ್ಯ ಶಾಸ್ತ್ರ ಮುಖ್ಯಸ್ಥ ನಟೇ ಶ್, ಸಿಬ್ಬಂದಿ ಲೋಕೇಗೌಡ, ಸಮಾಜಶಾಸ್ತ್ರ ಮುಖ್ಯಸ್ಥ ಶಿವರಾಜ್, ರಾಜ್ಯಶಾಸ್ತ್ರ ಪ್ರಾಧ್ಯಾಪಕ ಎ.ಸಿ.ಪುಟ್ಟಸ್ವಾ ಮಿ, ಕಾಲೇಜು ಶಿಕ್ಷಣ ಇಲಾಖೆ ವ್ಯವಸ್ಥಾಪಕಿ ಹೇಮಮಾಲಿನಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ