NEWS 4

 

 

ಇಂದಿರಾ ಕ್ಯಾಂಟೀನ್ ಕಾರ್ಮಿಕ ಸಿಬ್ಬಂದಿಗಳಿಗೆ ಸೂಕ್ತ ಸಮಯಕ್ಕೆ ವೇತನ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಸಮೃದ್ಧಿ ಕರುನಾಡು ರಕ್ಷಣಾ ವೇದಿಕೆ ಮುಖಂಡರುಗಳು ಶುಕ್ರವಾರ ಸಂಜೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ಕೆ.ರಂಗಸ್ವಾಮಿ ತರೀಕೆರೆ ತಾಲ್ಲೂಕಿನ ಇಂದಿರಾ ಕ್ಯಾಂಟೀ ನ್‍ನ ಕಾರ್ಮಿಕರಾದ ಅಣ್ಣಪ್ಪ, ಪ್ರಶಾಂತ್, ರೇಣುಕಮ್ಮ ಮತ್ತು ಮಂಜುನಾಥ್ ಎಂಬುವವರು ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಕಳೆದ ಆರು ತಿಂಗಳಿಂದ ವೇತನ ನೀಡದೇ ಸತಾಯಿಸಲಾಗುತ್ತಿದೆ ಎಂದು ದೂರಿದರು.

ನಿಗಧಿತ ಸಮಯಕ್ಕೆ ವೇತನ ಸಿಗದಿರುವ ಪರಿಣಾಮ ಕಾರ್ಮಿಕ ಕುಟುಂಬವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿಗಳಿಗೆ ಸಂಘಟನೆ ಮುಖಂಡರುಗಳು ಭೇಟಿ ಮಾಡಿ ಮನವಿ ಸಲ್ಲಿಸಲಾ  ಗಿತ್ತು. ಈ ಸಂಬಂಧ ಕಾರ್ಮಿಕರು ಜಿಲ್ಲಾಧಿಕಾರಿ ಆದೇಶದನ್ವಯ ಕೆಲಸ ನಿರ್ವಹಿಸುತ್ತಿದ್ದರು ಎಂದರು.

ಮನವಿ ಮೇರೆಗೆ ಕ್ಯಾಂಟಿನ್ ನಿರ್ವಹಿಸುವ ಕಂಪನಿಯವರು 3 ತಿಂಗಳ ವೇತನ ನೀಡಿತ್ತು. ಇದಾದ ಬಳಿಕ ಆರು ತಿಂಗಳು ಕಳೆದರೂ ಯಾವುದೇ ನೀಡಿರುವುದಿಲ್ಲ. ಈ ವಿಚಾರವಾಗಿ ಕ್ಯಾಂಟಿನ್ ವ್ಯವಸ್ಥಾಪಕರಿಗೆ ಕೇಳಿದರೆ ಇಲಾಖೆಯಿಂದ ಬಿಲ್ ಬಂದಿರುವುದಿಲ್ಲ ಎಂದು ಹೇಳಿ ಕೈತೊಳೆದುಕೊಂಡಿದೆ ಎಂದರು.

ಕೂಡಲೇ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಕಾರ್ಮಿಕರ ವೇತನವನ್ನು ತಡೆಹಿಡಿಯದಂತೆ ಕಂಪನಿಯವರಿಗೆ ಸೂಚಿಸಿ ವಿತರಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಜಗದೀಶ್, ಜಿಲ್ಲಾಧ್ಯಕ್ಷ ಟಿ.ಎ.ಮಂಜುನಾಥ್, ಉಪಾಧ್ಯಕ್ಷೆ ಡಿ.ಓ.ಅಶ್ವಿನ್ ಹಾಜರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ