February 10, 2026

 

 

ಮೂಡಿಗೆರೆ ತಾಲ್ಲೂಕಿನ ತ್ರಿಪುರ ಹಾಗೂ ಬೆಟ್ಟಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಯ ಬಕ್ಕಿ ಗ್ರಾಮದ ಅಂಬೇಡ್ಕರ್ ಭವನ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ಆಯೋಜಿಸಲಾಗಿತ್ತು.

ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ, ತ್ರಿಪುರ ಹಾಗೂ ಬೆಟ್ಟಗೆರೆ ಇವರ ಆಶ್ರಯದಲ್ಲಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಸುಮಾರು 300ಕ್ಕೂ ಹೆಚ್ಚು ಬೈಕ್‌ಗಳೊಂದಿಗೆ ಬೈಕ್ ಜಾಥಾ ನಡೆಸಲಾಯಿತು. ಬಿಳ್ಳೂರ್ ಸರ್ಕಲ್‌ನಿಂದ ಆರಂಭವಾದ ಜಾಥಾ ಸುಮಾರು 12 ಕಿಲೋಮೀಟರ್ ದೂರ ಪ್ರಯಾಣಿಸಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಪರಮಪೂಜ್ಯ ರೇಣುಕ ಮಹಾoತ ಶಿವಾಚಾರ್ಯ ಸ್ವಾಮೀಜಿ (ಬೇರುಗುಂಡಿ) ವಾದ್ಯಗೋಷ್ಠಿ ಮತ್ತುಪೂರ್ಣ ಕುಂಭದೊಂದಿಗೆ ಅವರನ್ನು ಮಹಿಳೆ ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.

ಬಳಿಕ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ; “ಹಿಂದೂ ಸಮಾಜದ ಅರಿವು ಹೆಚ್ಚಿಸಿಕೊಳ್ಳಲು ಮಹಾತೇರುಗಳು ಹಾಗೂ ಮಹನೀಯರು ಆರ್‌ಎಸ್‌ಎಸ್ ಶಾಖೆಗಳಿಗೆ ಭೇಟಿ ನೀಡಿ ಧರ್ಮದ ಉಳಿವಿನ ಅರಿವು ಪಡೆಯಬೇಕು. ಸಂಘಟಿತ ಪ್ರಯತ್ನದಿಂದ ಮಾತ್ರ ಧರ್ಮವನ್ನು ಉಳಿಸಬಹುದು” ಎಂದು ಹೇಳಿದರು

ಮುಖ್ಯ ಭಾಷಣ ಮಾಡಿದ ಶ್ರೀ ಜಗದೀಶ್ (ಕ್ಷೇತ್ರ ಸಂಘಟಕರು – ಸ್ವದೇಶಿ ಮಂಚ್, ಕರ್ನಾಟಕ ಹಾಗೂ ಆಂಧ್ರ–ತೆಲಂಗಾಣ) ಅವರು : “ಧರ್ಮ ಉಳಿವಿಗೆ ಜಾತಿ–ಮತ–ಪಂಥ ಭೇದವನ್ನು ಬಿಟ್ಟು ಎಲ್ಲರೂ ಒಂದಾಗಿ ಸಂಘಟಿತರಾಗಬೇಕು. ಹಿಂದೂ ಧರ್ಮ ಉಳಿವಿಗಾಗಿ ಆರ್‌ಎಸ್‌ಎಸ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಹಿಂದೂ ಎಂದರೆ ಶಾಂತಿ ಸ್ವರೂಪ, ಆದರೆ ಧರ್ಮದ ಮೇಲೆ ದಾಳಿ ನಡೆದಾಗ ಪ್ರತಿರೋಧವೂ ಅಗತ್ಯ” ಎಂದು ಹೇಳಿದರು.

ಪೂಜೆ ಮತ್ತು ಸಂಸ್ಕೃತಿ ಕುರಿತು ಮಾತನಾಡಿದ ಶ್ರೀಮತಿ ವಿಂದ್ಯಾ ರತೀಶ್ (ಬೆಟ್ಟಗೆರೆ) ಅವರು “ಹಿಂದೂ ಧರ್ಮ ಅತ್ಯಂತ ಶ್ರೀಮಂತ ಸಂಸ್ಕೃತಿ ಹೊಂದಿದೆ. ಈ ಧರ್ಮದಲ್ಲಿ ಜನಿಸಿದ ನಾವುಗಳು ಅದರ ಆಚಾರ–ವಿಚಾರಗಳನ್ನು ಪಾಲಿಸಬೇಕು. ವಿದೇಶಿಯರೂ ಮೆಚ್ಚುವಂತಹ ಅನೇಕ ಸಂಸ್ಕೃತಿಪರ ಮೌಲ್ಯಗಳು ನಮ್ಮ ಧರ್ಮದಲ್ಲಿವೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಾತಿ, ಮತ, ಪಕ್ಷಭೇದ ಮರೆತು ‘ನಾವೆಲ್ಲ ಹಿಂದೂ’ ಎಂಬ ಭಾವನೆಯೊಂದಿಗೆ ಸುಮಾರು ನೂರಾರು ಜನರು  ಭಾಗವಹಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ವರದಿ : ಪ್ರಕಾಶ್ ಬಕ್ಕಿ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ