February 10, 2026

 

 

ಆನೆ ಕಾರ್ಯಪಡೆಯ ಸಿಬ್ಬಂದಿಗಳಿಗೆ ಅನುಕೂಲವಾಗುವಂತೆ ಚಿಕ್ಕಮಗಳೂರಿನಲ್ಲಿ ಸೋಮವಾರ ಮಹಿoದ್ರಾ ಸ೦ಸ್ಥೆಯ ನೂತನ ಮಾದರಿಯ ಬೊಲೆರೊ ಕ್ಯಾಂಪರ್ 4×4 ವಾಹನ ಹಾಗೂ ಈಷರ್ ಸಂಸ್ಥೆಯ  ಸುಸಜ್ಜಿತ ಟ್ರಕ್ ಅನ್ನು ನೀಡಲಾಗಿದೆ.

ಮೂಡಿಗೆರೆ ತಾಲ್ಲೂಕು ಅರಣ್ಯ ಇಲಾಖೆಗೆ ಸೋಮವಾರ ಮಹೀಂದ್ರ ಕ್ಯಾಂಪರ್ 4×4 ಮತ್ತು ಈಷರ್ ಕಂಪನಿಯ ಫೋರ್ ವೀಲ್ ಡ್ರೈವ್ ವಾಹನಗಳನ್ನು ಅರಣ್ಯ  ಇಲಾಖೆಯ ಇ ಟಿ ಎಫ್ ಉಪಯೋಗಕ್ಕಾಗಿ ಇಲಾಖೆಗೆ ನೀಡಲಾಯಿತು.

ಇಟಿಎಫ್ ಸಿಬ್ಬಂದಿಗಳಿಗೆ ಸರಿಯಾದ ವಾಹನ ವ್ಯವಸ್ಥೆಯಿಲ್ಲದೇ ಗುಡ್ಡಗಾಡು ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಕಷ್ಟವಾಗಿತ್ತು. ಈ ಬಗ್ಗೆ ಮೂಡಿಗೆರೆ ಬೆಳೆಗಾರರ ಸಂಘವು ಆನೆ ಕಾರ್ಯಪಡೆಗೆ ಸುಸಜ್ಜಿತ ಫೋರ್ ವೀಲ್ ವಾಹನಗಳನ್ನು ನೀಡಬೇಕು ಎಂದು ಮನವಿ ಮಾಡಿತ್ತು. ಬೆಳೆಗಾರರ ಸಂಘದ ಮನವಿಗೆ ಸ್ಪಂದಿಸಿ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿಗಳಿಗೆ ಸುಸಜ್ಜಿತ ವಾಹನಗಳನ್ನು ನೀಡಿದೆ. ಆನೆ ಕಾರ್ಯಪಡೆಗೆ ಸುಸಜ್ಜಿತ ವಾಹನ ನೀಡಿದ ಅರಣ್ಯ ಇಲಾಖೆಗೆ ಮೂಡಿಗೆರೆ ಬೆಳೆಗಾರರ ಸಂಘವು ಅಭಿನಂದನೆ ಸಲ್ಲಿಸಿದೆ.

ಸೋಮವಾರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ವಾಹನಗಳನ್ನು ಆನೆ ಕಾರ್ಯಪಡೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಸಕರುಗಳು, ಡಿಎಫ್ಓ ರಮೇಶ್ ಬಾಬು, ಅರಣ್ಯ ಇಲಾಖೆ ಅಧಿಕಾರಿಗಳು, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಈ ಹಿಂದಿನಿಂದಲೂ ಸಾಮಾನ್ಯ ಟೂ ವೀಲ್ ಡ್ರೈವ್ ಜೀಪುಗಳ ಬದಲು ಆನೆ ಕಾರ್ಯಪಡೆಗೆ ಸುಸಜ್ಜಿತ ಪೋರ್ ವೀಲ್ ಡ್ರೈವ್ ವಾಹನಗಳನ್ನು ನೀಡಬೇಕೆಂದು ಮೂಡಿಗೆರೆ ತಾ ಬೆಳೆಗಾರರ ಸಂಘ ಒತ್ತಾಯ ಮಾಡುತ್ತಾ ಬಂದಿತ್ತು. ಈ ವಾಹನಗಳ ಉಪಯೋಗದಿಂದಾಗಿ ಗುಡ್ಡಗಾಡು ಪ್ರದೇಶದಲ್ಲಿ ವನ್ಯಜೀವಿಗಳು ಜನವಸತಿ ಪ್ರದೇಶ ಮತ್ತು ಹಿಡುವಳಿ ಜಮೀನುಗಳಿಗೆ ಬರುವುದನ್ನು ತಡೆಯಲು ಸಾಕಷ್ಟು ಅನುಕೂಲವಾಗಲಿದೆ ಹಾಗೂ ಕಾರ್ಯಪಡೆಯ ಕೆಲಸಗಳಿಗೂ ಸಹ ಸಹಕಾರಿಯಾಗಲಿದೆ. ಇನ್ನಷ್ಟು ಹೆಚ್ಚಿನ ಫೋರ್ ವೀಲ್ ಡ್ರೈವ್ ವಾಹನಗಳ ಸೌಲಭ್ಯ ದೊರಕಿಸಿಕೊಟ್ಟಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ನಿರ್ವಹಿಸಲು ಹಾಗೂ ವನ್ಯಜೀವಿಗಳ ಸಮಸ್ಯೆಗಳನ್ನು ಸ್ವಲ್ಪಮಟ್ಟಿಗೆ ನಿವಾರಿಸಲು ಅನುಕೂಲವಾಗಲಿದೆ.

 * ಬಿ. ಆರ್. ಬಾಲಕೃಷ್ಣ

ಅಧ್ಯಕ್ಷರು, ಮೂಡಿಗೆರೆ ತಾಲೂಕು ಬೆಳೆಗಾರ ಸಂಘ

ಚಿಕ್ಕಮಗಳೂರು ಜಿಲ್ಲೆಯ ಕಾಡಾನೆಗಳ ಹಾವಳಿ ಮಿತಿಮೀರಿದೆ. ರೈತರು ಮತ್ತು ಕಾರ್ಮಿಕರು ಕಾಡಾನೆ ಹಾವಳಿಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆನೆ ಕಾರ್ಯಪಡೆಗೆ ಸುಸಜ್ಜಿತ ಪೋರ್ ವೀಲ್ ಡ್ರೈವ್ ವಾಹನಗಳನ್ನು ನೀಡಿರುವುದರಿಂದ ಸಿಬ್ಬಂದಿಗಳ ಕಾರ್ಯನಿರ್ವಹಣೆಗೆ ಅನುಕೂಲವಾಗಲಿದೆ.  ಮುಂದೆ ಇಟಿಎಫ್ ಸಿಬ್ಬಂದಿಗೆ ಇನ್ನೂ ಅತ್ಯಾಧುನಿಕ ಉಪಕರಣಗಳನ್ನು ಕೊಡುವುದು ಮತ್ತು ಸಿಬ್ಬಂದಿಗೆ ಸಕಾಲದಲ್ಲಿ ಸಂಬಳ ಭತ್ಯೆ ನೀಡಿದರೆ ಅವರ ಕಾರ್ಯನಿರ್ವಹಣೆ ಉತ್ತಮವಾಗಿ ಕಾಡಾನೆಗಳ ಹಾವಳಿ ನಿಯಂತ್ರಿಸಲು ಅನುಕೂಲವಾಗಲಿದೆ.

  * ರತೀಶ್ ಕುಮಾರ್

ಅಧ್ಯಕ್ಷರು, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರ ಸಂಘ

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ