ಮೂಡಿಗೆರೆ ತಾಲ್ಲೂಕಿನ ಜನ್ನಾಪುರ ಜೇಸಿಐ ಸಮೃದ್ಧಿ ನೂತನ ಅಧ್ಯಕ್ಷರಾಗಿ ಪ್ರದೀಪ್ ಹೆಚ್.ಬಿ ಹೊಸಪುರ ಅಧಿಕಾರ ವಹಿಸಿಕೊಂಡಿದ್ದಾರೆ. ಜನ್ನಾಪುರ ವರ್ತಕರ ಸಮುದಾಯ ಭವನದಲ್ಲಿ ನೆಡೆದ ಅದ್ದೂರಿ ಪದಗ್ರಹಣ ಕಾರ್ಯಕ್ರಮದಲ್ಲಿ ನಿರ್ಗಮನ ಅಧ್ಯಕ್ಷ ಜೆಸಿ ಪ್ರಹ್ಲಾದ್ ಅವರಿಂದ ಪ್ರದೀಪ್ ಹೆಚ್.ಬಿ ಅಧಿಕಾರ ಸ್ವೀಕರಿಸಿದರು.
ವಲಯ ಅಧ್ಯಕ್ಷ ಪ್ರಜ್ವಲ್ ಜೈನ್ ಮಾತನಾಡಿ ಜೇಸಿಐ ಎಂದರೆ ಕೇವಲ ಒಂದು ಸಂಸ್ಥೆಯಲ್ಲ. ಇದೊಂದು ನಿಸ್ವಾರ್ಥ ಜನಪರ ಸೇವೆ, ನಾಯಕತ್ವ, ಸೇವಾಭಾವ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಉತ್ತಮ ವೇದಿಕೆಯಾಗಿದೆ. ಜೇಸಿಯಿಂದ ಪ್ರತಿಯೊಬ್ಬ ಸದಸ್ಯನಿಗೂ ನಾಯಕತ್ವದ ಗುಣ, ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಅವಕಾಶ ದೊರೆಯುತ್ತದೆ. ಇದರ ಸುದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು, ನಿರುದ್ಯೋಗಿಗಳು, ರೋಗಿಗಳಿಗೆ ಅನುಕೂಲವಾಗುವಂತಹ ಜನಪರ ಕಾರ್ಯಮಗಳನ್ನು ರೂಪಿಸಬೇಕೆಂದು ಸಲಹೆ ನೀಡಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಜೆಸಿ ಪ್ರದೀಪ್ ಹೊಸಪುರ ಮುಂದಿನ 2026 ರ ನನ್ನ ಅಧಿಕಾರದ ಅವಧಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕನಸು ಹೊಂದಿದ್ದು ಇದನ್ನು ನನಸು ಗೊಳಿಸಲು ಎಲ್ಲರ ಸಹಕಾರ ಅಗತ್ಯ ಮುಂಬರುವ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ತರಬೇತಿ ಕಾರ್ಯಕ್ರಮಗಳನ್ನು ಕೊಟ್ಟು ಸಮಾಜಮುಖಿ ಕೆಲಸದ ಕಡೆ ಹೆಚ್ಚು ಗಮನಹರಿಸುತ್ತೇನೆ.
ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಛಲವನ್ನು ಇಟ್ಟು ಕೊಂಡು ಮೊನ್ನೆಡೆದರೆ ಯಾವ ಅಡೆ ತಡೆಗಳು ಬಂದರು ಅದನ್ನು ಎದುರಿಸಿ ಮುನ್ನುಗ್ಗುವ ಶಕ್ತಿಯನ್ನು ಜೆಸಿಐ ಸಂಸ್ಥೆ ಕಲಿಸಿಕೊಟ್ಟಿದೆ. ಜೆಸಿಐ ಸಂಸ್ಥೆಯ ಎಲ್ಲರ ಸಲಹೆ, ಸೂಚನೆಯನ್ನು ಪಡೆದುಕೊಂಡು ಮೊನ್ನೆಡೆದು ಯಶಸ್ವಿ ನಾಯಕನಾಗಿ ಜೆಸಿಐ ಜನ್ನಾಪುರ ಸಮೃದ್ಧಿ ಸಂಸ್ಥೆಯಲ್ಲಿ ಹೊರ ಹೋಮ್ಮತ್ತೇನೆ ಎಂದರು.
ಪದಗ್ರಹಣ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷೆ ಜೆ ಎಫ್ ಫಿ ಯಶಸ್ವಿನಿ, ಜೆಸಿಐ ವಲಯ ಉಪಾಧ್ಯಕ್ಷ ಜಗತ್. ಬಿ. ಎಂ, ಜೆಸಿಐ ಸಮೃದ್ಧಿ ಸಂಸ್ಥಾಪಕ ಅಧ್ಯಕ್ಷ ಸಂತೋಷ್ ಯು. ಸಿ, ನಿಕ್ಷೇಪ್, 2026 ರ ಕಾರ್ಯದರ್ಶಿ ಚರಣ್ ಮತ್ತು ಜೆಸಿಐ ಸದಸ್ಯರು ಮತ್ತು ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು, ರಾಜಕೀಯ ಪಕ್ಷದ ಮುಖಂಡರು ಗ್ರಾಮಸ್ಥರು ಭಾಗಿಯಾಗಿ ಜೆಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜೆಸಿ ಪ್ರದೀಪ್ ಅವರಿಗೆ ಶುಭ ಕೋರಿದರು.



