February 4, 2026

 

 

ಒಂದೆಡೇ ಅಕಾಲಿಕ ಮಳೆ ಕಾಫಿ ಗಿಡಗಳಿಗೆ ಆತಂಕ ತಂದರೆ ಮತ್ತೂಂದೆಡೆ ಮೋಡ ಕವಿದ ವಾತಾವರಣದಿಂದ ಕಾಫಿಯನ್ನು ಹೇಗೆ ಒಣಗಿಸುವುದೆಂಬ ಆತಂಕಕ್ಕೆ ಸಿಲುಕಿದ್ದಾರೆ.

ಕೆಲವು ಬೆಳೆಗಾರರು ಅರೇಬಿಕಾ ಹಣ್ಣನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದು ಬೆಳೆಗಾರರಿಗೆ ನಷ್ಟ ತಂದರೂ ಇರುವ ಬೆಳೆಯನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಹಲವಾರು ಮಂದಿ ಹಸಿ ಕಾಫಿ ನೀಡಲು ಮುಂದಾಗಿದ್ದಾರೆ ಎಂದು ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಬೆಳೆಗಾರರ ಸಂಘದ ಅಧ್ಯಕ್ಷ ಡಿಎಸ್ ರಮೇಶ್ ತಿಳಿಸಿದ್ದಾರೆ.

ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು ಒಟ್ಟಾರೆಯಾಗಿ ಹವಾಮಾನ ವೈಪರೀತ್ಯದಿಂದ ಕಾಫಿ ಉತ್ಪಾದನೆ ಮೇಲೆ ನೇರವಾಗಿ ದುಷ್ಪರಿಣಾಮ ಬೀರುತ್ತಿದ್ದು, ಕಾಫಿ ಸಂಶೋಧನಾ ಮಂಡಳಿಯವರು ಸಣ್ಣ ಬೆಳೆಗಾರರಿಗೆ ಅನುಕೂಲವಾಗುವಂತೆ ಕಾಫಿ ಒಣಗಿಸುವ ತಂತ್ರಜ್ಞಾನವನ್ನು ತರಬೇಕಾಗಿದೆ. ಅಕಾಲಿಕ ಮಳೆಯಿಂದ ಸಾವಿರಾರು ಹೆಕ್ಟರ್ ಕಾಫಿ ಬೇಳೆ ನಷ್ಟವಾಗಿದೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬೆಳೆಗಾರರಿಗೆ ಪರಿಹಾರ ನೀಡಲು ಮುಂದೆ ಬರಬೇಕು ಎಂದರು.

ಕಾರ್ಯದರ್ಶಿ ಬಿ.ಕೆ.ಚಂದ್ರಶೇಖರ್ ಮಾತನಾಡಿ. ಒಂದೆಡೇ ಹವಾಮಾನ ವೈಪರೀತ್ಯವಾದರೆ ಮತ್ತೊಂದಡೆ ಮಲೆನಾಡಿನ ಕೆಲವು ಭಾಗಗಳಲ್ಲ ಕಾಡಾನೆ  ಮತ್ತು ಕಾಡು ಕೋಣಗಳ ಕಾಟ ಹೆಚ್ಚಾಗಿದ್ದು, ಇದರಿಂದ ಹಲವಡೆ ಕೂಲಿ ಕಾರ್ಮಿಕರು ಕಾಡು ಪ್ರಾಣಿ ಗಳ ಭಯದಿಂದ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಮುಂದಾಗದಿರುವುದು ಕಾಫಿ ಬೆಳೆಗಾರರಿಗೆ ಆತಂಕ ತಂದಿದೆ,   ಮಲೆನಾಡಿನಲ್ಲಿ ಕೂಲಿ ಕಾರ್ಮಿಕರ ಕೊರತೆ ಬಾದಿಸುತ್ತಿದ್ದು ಕಾರ್ಮಿಕರ ಕೂಲಿ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಇದರಿಂದ ಉತ್ಪಾದನಾ ವೆಚ್ಚ ಸಹ ಏರಲು ಕಾರಣವಾಗಿದೆ. ಕೂಲಿ ಕಾರ್ಮಿಕರ ಕೂಲಿ ದರ ಏರುತ್ತಿದ್ದರು ಸಹಕೂಲಿ ಕಾರ್ಮಿಕರ ಕೊರತೆ ಬಾಧಿಸುತ್ತಿರುವದು ಆತಂಕಕಾರಿಯಾಗಿದೆ ಎಂದು ತಿಳಿಸಿದ್ದಾರೆ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ