February 4, 2026

 

 

ಆಲ್ದೂರು ಪಟ್ಟಣದ ಹೊರವಲಯದಲ್ಲಿರುವ ಮಾಜಿ ಶಾಸಕ ರಾದ ಸಿ.ಎ ಚಂದ್ರೇಗೌಡರ ಗುಡ್ಡದ ಆಟದ ಮೈದಾನದಲ್ಲಿ ಡೈಮಂಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಕ್ರೀಡಾಕೂಟ ಸೋಮವಾರ ಮುಕ್ತಾಯವಾಯಿತು.

ಹೋಬಳಿ ಮಟ್ಟದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 15 ತಂಡಗಳು ಭಾಗವಹಿಸಿದ್ದು, ಪ್ರಥಮ ಸ್ಥಾನ ಪಡೆದ ತಂಡಕ್ಕೆ 22,222 ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 11,111 ರೂ, ತೃತೀಯ ಸ್ಥಾನ ಬಹುಮಾನ 6,666 ಚತುರ್ಥ ಬಹುಮಾನ ಟ್ರೋಫಿಯನ್ನು ನಿಗದಿಪಡಿಸಲಾಗಿತ್ತು.

ಫೈನಲ್ ಗೆ ಎಟಿಸಿ ಆಲ್ದೂರು ಮತ್ತು ವಿರಾಟ್ ಕ್ರಿಕೆಟರ್ಸ್ ತುಡುಕೂರು ತಂಡ ಪ್ರವೇಶ ಪಡೆದಿದ್ದು, ಪ್ರಥಮ ಸ್ಥಾನ ಎಟಿಸಿ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ದ್ವಿತೀಯ ಸ್ಥಾನ ವಿರಾಟ್ ಕ್ರಿಕೆಟರ್ಸ್, ತೃತೀಯ ಸ್ಥಾನ ಎಕ್ಸಲೆಂಟ್ ವಗರ್ ರಸ್ತೆ, ಚತುರ್ಥ ಸ್ಥಾನ ಗುಡ್ಡದೂರು ಸಹರಾ ತಂಡ ಪಡೆಯಿತು. ಫೈನಲ್ ಪಂದ್ಯದಲ್ಲಿ ವಿರಾಟ್ ತಂಡದ ಪ್ರಸನ್ನ ತಂದೆ ಪುರುಷೋತ್ತಮ ಮತ್ತು ಎಟಿಸಿ ತಂಡದ ಸಂದೀಪ್ ಸರಣಿ ಸರ್ವೋತ್ತಮ, ಎಕ್ಸಲೆಂಟ್ ತಂಡದ ಕಿರಣ್ ಅತ್ಯುತ್ತಮ ಬೌಲರ್, ಗಾಳಿ ಗಂಡಿ ಚಾಮುಂಡೇಶ್ವರಿ ತಂಡದ ಮಣಿಕಂಠ ಕ್ರೀಡಾಕೂಟದ ಬೆಸ್ಟ್ ಬ್ಯಾಟ್ಸ್ಮನ್, ಜೋಸೆಫ್ ಎಂ. ಬೆಸ್ಟ್ ಫೀಲ್ಡರ್ ಪ್ರಶಸ್ತಿಗೆ ಭಾಜನರಾದರು.

ಸಮಾರೋಪ ಕಾರ್ಯಕ್ರಮದಲ್ಲಿ ವಲಯ ಒಕ್ಕಲಿಗ ಸಂಘದ ಅಧ್ಯಕ್ಷರು, ಹಾಗೂ ಪಂಚಾಯಿತಿ ಸದಸ್ಯ ಅಶೋಕ್ ಡಿಬಿ, ವಿದ್ಯಾ ಕಾಫಿ ಕ್ಯೂರಿಂಗ್ ನಿರ್ವಹಣಾ ಮುಖ್ಯಸ್ಥರಾದ ಭಾನುಪ್ರಕಾಶ್,ಗ್ರಾಮಸ್ಥರಾದ ಅಣ್ಣಪ್ಪ, ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿಎಟಿಸಿ ತಂಡವನ್ನು ಟೆನ್ನಿಸ್ ಕ್ರಿಕೆಟ್ ನಲ್ಲಿ ರಾಜ್ಯ ಮತ್ತು ವಿವಿಧ ಜಿಲ್ಲಾಮಟ್ಟದ ಕ್ರೀಡಾಕೂಟಗಳನ್ನು ಪ್ರತಿನಿಧಿಸಿದ ಸಂದೀಪ್ ರವರನ್ನು ವ್ಯವಸ್ಥಾಪಕರಿಂದ ಸನ್ಮಾನಿಸಲಾಯಿತು.

ಕ್ರೀಡಾಕೂಟದ ವ್ಯವಸ್ಥಾಪಕರಾದ ಕೃಪಾಕ್ಷ ಕೋಟ್ಯಾನ್,ಜೋಸೆಫ್.ಎಂ.ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ