ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿ ಬಾನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಒಂದು ಮಾದರಿ ಶಾಲೆಯಾಗಿದೆ. ಚಿಕ್ಕ ಗ್ರಾಮದಲ್ಲಿದ್ದರೂ ಇಲ್ಲಿನ ಶಿಕ್ಷಕರು ಮತ್ತು ಸ್ಥಳೀಯರ ಆಸಕ್ತಿಯಿಂದ ಶಾಲೆಯು ವಿದ್ಯಾರ್ಥಿಗಳಿಂದ ನಳನಳಿಸುತ್ತಿದೆ.

ಇತ್ತೀಚೆಗೆ ಶಾಲೆಯ ವಾರ್ಷಿಕೋತ್ಸವನ್ನು ಚಿಣ್ಣರ ಹಬ್ಬರ ಎಂಬ ಶೀರ್ಷಿಕೆಯಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.
ಚಿಣ್ಣರ ಹಬ್ಬ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಊರಿನ ಹಿರಿಯರು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ, ಕೊಡುಗೈ ದಾನಿ ಕಸ್ತೂರಮ್ಮನವರು ಉದ್ಘಾಟಿಸಿ ಮಾತನಾಡಿ ನಮ್ಮ ಸಂಸ್ಕಾರ -ಸಂಸ್ಕೃತಿ ರಕ್ಷಣೆಯಲ್ಲಿ ಸರಕಾರಿ ಶಾಲೆಗಳ ಪಾತ್ರ ಮಹತ್ವದ್ದು, ಸರಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಲು, ಊರಿನ ನಾಗರಿಕರು, ಹಳೆ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಂದ್ರ, ಉಪಾಧ್ಯಕ್ಷ ತೇಜಸ್ವಿನಿ ಪ್ರಸಾದ್, ಮುಖ್ಯೋಪಾಧ್ಯಾಯಿನಿ ಜೆ ಎಂ ಇಂಪಾ, ಶಿಕ್ಷಕರಾದ ಅಶೋಕ್ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸಾದ್ ದೇವಾಡಿಗ, ಶಿಕ್ಶಣ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಫಲ್ಗುಣಿ ಗ್ರಾ.ಪಂ.ಉಪಾಧ್ಯಕ್ಷೆ ಸರೀತಾ ಲೋಹಿತ್,ಸದಸ್ಯರಾದ ಕೋಮಲ ಶಿವಣ್ಣ, ನೇತ್ರಾ ಹರೀಶ್,ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸಾದ್ ದೇವಾಡಿಗ, ಪುಟ್ಟರಾಜು, ಬಿ.ಆರ್.ನವೀನ್, ಸಿಆರ್ ಪಿ ಶಿವಕುಮಾರ್, ಶೋಬಾ, ದೀಪಾ, ಸುರೇಶ್, ಹುಸೇನ್, ಅರ್ಪತ್, ಚಂದ್ರಶೇಖರ್, ರಾಕೇಶ್, ಶಾಲಾ ಸಮಿತಿಯ ಉಪಾಧ್ಯಕ್ಷೆ ತೇಜಸ್ವಿನಿ ಪ್ರಸಾದ್, ಗಣ್ಯರಾದ ಪ್ರತಾಪ್ ಗೌಡ, ಶಿವಣ್ಣಗೌಡ, ಬಿಂದುಸಾರ, ಶಿಕ್ಷಕರಾದ ಜಯಕುಮಾರ್ ಆಚಾರ್, ಕಾಂತರಾಜ್,ಎಸ್.ಡಿಎಂಸಿ ಸದಸ್ಯರು ಇದ್ದರು. ಕಾರ್ಯಕ್ರಮದ ನಿರೂಪಣೆ ಶ್ವೇತ ಅಶೋಕ್ ನೆರವೇರಿಸಿ ಮುಖ್ಯ ಶಿಕ್ಷಕಿ ಇಂಪಾ ಸವೀನ್ ಸ್ವಾಗತಿಸಿ ವಂದಿಸಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕರನ್ನು, ಯೋಧರನ್ನು, ಶಾಲೆಯ ಹಿರಿಯ ಗುರುಗಳನ್ನು ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು.



