suddi-6 (2)

 

 

ಶೀಘ್ರದಲ್ಲೇ ಆಲ್ದೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಕರೆದು  ಸದಸ್ಯರು ಹಾಗೂ ಸ್ಥಳೀಯರ ಪ್ರಶ್ನೆಗಳಿಗೆ ಅಧ್ಯಕ್ಷರು ಉತ್ತರಿಸಬೇಕು ಎಂದು ಆಗ್ರಹಿಸಿ ಗ್ರಾ.ಪಂ. ಉಪಾಧ್ಯಕ್ಷ ರು, ಸದಸ್ಯರು ಮತ್ತು ದಸಂಸ ಮುಖಂಡರು ಬುಧವಾರ ಚಿಕ್ಕಮಗಳೂರು ತಾ.ಪಂ. ಇಓ ವಿಜಯ್‍ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಗ್ರಾ.ಪಂ. ಉಪಾಧ್ಯಕ್ಷ ಭರತ್ ಪ್ರಸ್ತುತ ಗ್ರಾ.ಪಂ. ಅಧ್ಯಕ್ಷರು ಈ ತಿಂಗಳು ಸಾಮಾನ್ಯ ಸಭೆಯನ್ನು ಜನವರಿ 28ಕ್ಕೆ ನಿಗಧಿಗೊಳಿಸಿ ಸಭಾ ಸೂಚನಾ ಪತ್ರವನ್ನು ಎಲ್ಲಾ ಸದಸ್ಯರುಗಳಿಗೆ ರವಾನಿಸಿ ಇಂದು ದಿಡೀರನೇ ಕಾರಣಾಂತರದಿಂದ ಸಭೆ ಮುಂದೂಡಿದ್ದಾರೆ ಎಂದು ಹೇಳಿದರು.

2020ರಲ್ಲಿ ರಚನೆಯಾದ ಆಲ್ದೂರು ಗ್ರಾ.ಪಂ. ಆಡಳಿತ ಅವಧಿಯು 2026ರ ಫೆಬ್ರವರಿ 03 ರಂದು ಕೊನೆ ಗೊಳ್ಳಲಿದೆ. ಲಭ್ಯ ಮಾಹಿತಿ ಪ್ರಕಾರ ಮತ್ತೊಂದು ಸಾಮಾನ್ಯ ಸಭೆ ನಡೆಸಲು ಅವಕಾಶ ತುಂಬಾ ವಿರಳ ಸಾಧ್ಯ ವಾಗಿರುತ್ತದೆ. ಆದ್ದರಿಂದ ಜನವರಿ ತಿಂಗಳಾಂತ್ಯದಲ್ಲೇ ಸಾಮಾನ್ಯ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ನವರಾಜ್, ನಿತಿನ್, ಗೋಪಾಲ್, ಗಿರಿ, ಸವಿತಾ ಶಿವಕುಮಾ ರ್, ಕವಿತಾ, ಶ್ವೇತ, ಲಕ್ಷ್ಮೀ, ಹೊನ್ನಪ್ಪ, ಪಿ.ಟಿ.ಚಂದ್ರಶೇಖರ್, ಮನು, ಜಯರಾಮ್, ಮಂಜಪ್ಪ, ದಸಂಸ ಜಿಲ್ಲಾ ಸಂಚಾಲಕ ಚಂದ್ರಶೇಖರ್ ಪುರ ಹಾಜರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ