ಸಾವಿನಲ್ಲೂ ಅಂಗಾಂಗ ದಾನ ಮಾಡುವ ಮೂಲಕ ನೊಂದ ಕುಟುಂಬ ಸಾರ್ಥಕತೆ ಮೆರೆದಿದೆ.
ಗಂಡನ ಸಾವಿನ ನೋವಲ್ಲೂ ಅಂಗಾಂಗ ದಾನಕ್ಕೆ ಪತ್ನಿ ಸಮ್ಮತಿಸಿದ್ದಾರೆ, ಆಟೋ ಅಪಘಾತದಲ್ಲಿ ಕೊಪ್ಪದ ಮಂಜುನಾಥ್ (35) ಮೆದುಳು ನಿಷ್ಕ್ರಿಯಗೊಂಡಿತ್ತು.
ಸರ್ಕಾರದ ಮೂಲಕ ಅಂಗಾಂಗ ದಾನಕ್ಕೆ ಪತ್ನಿ ಅಪೂರ್ವ ಶೆಟ್ಟಿ ಮುಂದಾಗಿದ್ದಾರೆ.
ಕೊಪ್ಪ ತಾಲೂಕಿನ ಪ್ರಶುಮನಿ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ಜರುಗಿತು. ಅಪಘಾತವಾದಾಗ ಆಟೋ ತಲೆಗೆ ಬಡಿದು ಮೆದುಳು ನಿಷ್ಕ್ರಿಯವಾಗಿ ಕೊಪ್ಪ, ಮಣಿಪಾಲ್ ನಲ್ಲಿ ಚಿಕಿತ್ಸೆ ಬಳಿಕವೂ ಮಂಜುನಾಥ್ ಸಾವಪ್ಪಿದ್ದರು.
ಗುರುವಾರ ಮಧ್ಯಾಹ್ನ ಮುಂಜುನಾಥ್ ಅವರ ಹೃದಯ, ಕಿಡ್ನಿ, ಲಿವರ್ ಸೇರಿ ಅಂಗಾಂಗದಾನ ಮಾಡಲಾಗಿದೆ. ಪತಿ ಮತ್ತೊಬ್ಬರಲ್ಲಿ ಜೀವಂತವಾಗಿರಲಿ ಎಂದು ಪತಿಯ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. 4 ವರ್ಷ ಹಾಗೂ 1 ವರ್ಷದ 2 ಗಂಡು ಮಕ್ಕಳಿದ್ದು ಬಡ ಕುಟುಂಬ ಮಕ್ಕಳ ವಿದ್ಯಾಬ್ಯಾಸದ ಬಗ್ಗೆ ಸಂಘ ಸಂಸ್ಥೆಗಳು ಸಹಾಯ ಮಾಡಬೇಕಾಗಿದೆ.



