February 7, 2026

 

 

ಇತ್ತೀಚೆಗೆ ಆಲ್ದೂರಿನಲ್ಲಿ ನಾಡಪ್ರಭು ಕೆಂಪೇಗೌಡರವರ ಹೆಮ್ಮೆಯ ಪುತ್ಥಳಿ ಅನಾವರಣವನ್ನು ಮಾಡುವ ಮೂಲಕ ಲೋಕಾರ್ಪಣೆ ಮಾಡಿದ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನೀಡಿದಂತಹ ಆಶೀರ್ವಚನದಲ್ಲಿ ಸರ್ವ ಸಮುದಾಯಗಳನ್ನು ಸಮನಾಗಿ ಕಂಡು ಸಹ ಬಾಳ್ವೆಯೊಂದಿಗೆ ಸಹೋದರತ್ವವನ್ನು ಅಳವಡಿಸಿಕೊಳ್ಳುವಂತೆ ನುಡಿದಂತಹ ಹಿತ ನುಡಿಗಳು ಎಲ್ಲಾ ಧರ್ಮ ಸಮುದಾಯದ ಮುಖಂಡರುಗಳು ಸ್ವಾಗತಿಸುವಂಥದ್ದು ಎಂದು ಆಲ್ದೂರು  ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಶ್ರೋಫ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ; ಆಲ್ದೂರು ವಾತಾವರಣದಲ್ಲಿ ಎಲ್ಲಾ ಧರ್ಮೀಯರು ಸೌಹಾರ್ದಯುತವಾಗಿ ಬದುಕಲು ಅವರ ನುಡಿದಂತಹ ಪ್ರತಿಯೊಂದು ಸಾಲುಗಳು ಮಾರ್ಗದರ್ಶನವಾಗಿದ್ದು ಅದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂಬುದು ನನ್ನ ಪ್ರೀತಿಯ ಕೋರಿಕೆ ಮತ್ತು ಮನವಿ. ಈ ದೇಶದ ಆಸ್ತಿಯಾಗಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹತ್ವವನ್ನು ಅಸ್ಮಿತೆಯನ್ನು ಪ್ರಪಂಚವೇ ಒಪ್ಪಿಕೊಂಡಿರುವುದರ ಕುರಿತು ಅವರು ನುಡಿದ ಹೊನ್ನುಡಿಗಳು ಎಲ್ಲರ ಎದೆಯಾಳದಲ್ಲಿ ಅವರ ಬಗೆಯಲ್ಲಿ ಇನ್ನಷ್ಟು ಅಪಾರ ಪ್ರೀತಿಯನ್ನು ಹೆಚ್ಚುವಂತೆ ಮಾಡಿರುವುದಂತೂ ಅಕ್ಷರಶಃ ಸತ್ಯ ಮತ್ತು ಸಾರ್ವಕಾಲಿಕ ಅದ್ಭುತ ವಾಣಿಯಾಗಿದೆ.

ಇಂತಹ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿ ಸ್ವಾಮೀಜಿಯವರ ಹಿತವಚನವನ್ನು ಮತ್ತು ಸಾನಿಧ್ಯವನ್ನು ಸರ್ವರು ಪಡೆಯಲು ಅವಕಾಶ ಕಲ್ಪಿಸಿದ ಒಕ್ಕಲಿಗ ಕುಲಬಾಂಧವರಿಲ್ಲರಿಗೂ ಹೃದಯದಿಂದ ಧನ್ಯವಾದಗಳನ್ನು ಸರ್ವಧರ್ಮೀಯರ ಪರವಾಗಿ ಕೋರುತ್ತಿದ್ದೇನೆ ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ