February 10, 2026

 

 

ಬಿಜೆಪಿಗೂ ನಮ್ಮ  ಭಾರತ ದೇಶದ ಇತಿಹಾಸಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಬಿಜೆಪಿ ಮತ್ತೊಮ್ಮೆ ಸಾಬೀತು ಮಾಡಿದೆ. ತನ್ನ ತತ್ವ ಸಿದ್ಧಾಂತಗಳಿಂದ ಇಡೀ ದೇಶವನ್ನು ಒಂದು ಮಾಡಿ ಪ್ರೀತಿ, ಸತ್ಯ ಮತ್ತು ಅಹಿಂಸೆಯಿಂದ ವಿಶ್ವವನ್ನು ಗೆದ್ದ ವಿಶ್ವ ನಾಯಕ ಮಹಾತ್ಮಗಾಂಧಿಯವರು ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಹೇಳಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸತ್ಯ, ಅಹಿಂಸೆ ಪ್ರತಿಪಾದಕ ಮಹಾತ್ಮಗಾಂಧಿಯವರನ್ನು ವ್ಯಂಗ್ಯವಾಗಿ ಬಿಂಬಿಸಿ ಮೊನ್ನೆ ದಿನಪತ್ರಿಕೆಗಳಲ್ಲಿ ಬಿಜೆಪಿ ಜಾಹೀರಾತು ನೀಡಿದ್ದು, ಗಾಂಧೀಜಿಯವರು ಬಳಸುತ್ತಿದ್ದ ಊರುಗೋಲನ್ನು ಬಿಜೆಪಿ ನಾಯಕರು ತಮ್ಮ ಆರ್‍ಎಸ್‍ಎಸ್ ಬಳಸುವ ದೊಣ್ಣೆಯಂತೆ ಬಿಂಬಿಸಿರುವುದು ಬಿಜೆಪಿಯವರ ವಿಕೃತ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು.

ಭಾರತವಲ್ಲದೆ ವಿದೇಶದಲ್ಲಿ ಗಾಂಧಿ ನೆಲಕ್ಕೆ ವಿಶೇಷ ಗೌರವವಿದೆ. ಗಾಂಧಿ ಅಧ್ಯಯನ ಕೇಂದ್ರಗಳಿವೆ ಆದರೆ ಇಂತಹ ಮಹಾತ್ಮ ಹುಟ್ಟಿದ ನೆಲದಲ್ಲಿ ಮಹಾತ್ಮನ ಕರ್ಮಭೂಮಿಯಲ್ಲಿ ಅವರಿಗೆ ಇಂತಹ ಅವಮಾನವನ್ನು ಯಾರೂ ಸಹಿಸುವುದಿಲ್ಲ.  ಬಿಜೆಪಿಗರ ಬೌದ್ಧಿಕ ಸಾಮಥ್ರ್ಯ ಹದಗೆಟ್ಟಿದ್ದು, ಅವರ ಬೌದ್ಧಿಕತೆಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಅಹಿಂಸೆ ಪರಮ ಧರ್ಮ ಎಂದು ಸಾರಿದ ಮಹಾತ್ಮಗಾಂಧಿ ಅವರ ಕೈಗೆ ಕೋಲನ್ನು ಕೊಟ್ಟು ಹಿಂಸೆ ಮಾಡಿಸುತ್ತಿರುವ ಬಿಜೆಪಿಯವರ ನೀಡಿರುವ ಜಾಹೀರಾತನ್ನು ನೋಡಿ ರಾಜ್ಯದ ಜನರಿಗೆ ನೋವಾಗಿದೆ ಎಂದರು.

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ದೇಶದ ಗ್ರಾಮೀಣ ಭಾಗದ ರೈತರು, ಬಡವರು ಹಾಗೂ ಮಧ್ಯಮ ವರ್ಗದ ಜನತೆಗೆ ಉದ್ಯೋಗದ ಹಕ್ಕನ್ನು ಮನಮೋಹನ್ ಸಿಂಗ್ ನೇತೃತ್ವದಲ್ಲಿ ಯುಪಿಎ ಸರ್ಕಾರ ಕಾಯ್ದೆ ಮತ್ತು ಹಕ್ಕನ್ನು ನೀಡಿದ್ದನ್ನು ಪ್ರತಿಯೊಬ್ಬ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಗ್ರಾಮೀಣ ಪ್ರದೇಶದ ಜನರು ಶ್ಲಾಘಿಸಿದ್ದರು ಅಲ್ಲದೆ ಇದು ವಿಶ್ವಮಟ್ಟದಲ್ಲಿ ಗಮನಸೆಳೆದ ಯೋಜನೆಯಾಗಿತ್ತು ಎಂದು ಹೇಳಿದರು.

ದೇಶದ ನಿರುದ್ಯೋಗ ಮತ್ತು ಆಹಾರ ಸಮಸ್ಯೆಯನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಗ್ರಾಮೀಣ ಭಾಗದ ಜನರು ಗುಳೇ ಹೋಗುವುದನ್ನು ತಪ್ಪಿಸಿ ಉದ್ಯೋಗ ಖಾತ್ರಿಯನ್ನು ನೀಡುವ ಜೊತೆಗೆ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ದಿಗೆ ಕೊಡುಗೆಯನ್ನು ನೀಡಿದ ಕೀರ್ತಿ ಮನರೇಗಾ ಯೋಜನೆಗೆ ಸಲ್ಲುತ್ತದೆ. ಕೋಟ್ಯಾಂತರ ಫಲಾನುಭವಿಗಳನ್ನು ಹೊಂದಿರುವ ಇಂತಹ ಉತ್ತಮವಾದ ಯೋಜನೆಯನ್ನು ನರೇಂದ್ರಮೋದಿಯವರ ನೇತೃತ್ವದಲ್ಲಿ ದೊಡ್ಡ ದೊಡ್ಡ ಉದ್ಯೋಗಪತಿಗಳ ಕೈಗೊಂಬೆಯಾಗಿ ನರೇಗಾ ಯೋಜನೆಯನ್ನು ದುರ್ಬಲಗೊಳಿಸಿರುವುದು ಅತ್ಯಂತ ಖಂಡನೀಯ.

ಹೊಸ ಕಾಯ್ದೆಯು ರಾಜ್ಯ ಸರ್ಕಾರಗಳಿಗೆ ಹೊರೆ ಹೊರಿಸುವ ನಿಟ್ಟಿನಲ್ಲಿ ಕೇಂದ್ರವು ಈ ಹಿಂದೆ ಇದ್ದ ಕೇಂದ್ರದ 90 ಪಾಲು ರಾಜ್ಯದ 10 ಪಾಲು ಬದಲಾಗಿ ಕೇಂದ್ರವು 60 ಪಾಲು ರಾಜ್ಯವು 40 ಪಾಲು ಭರಿಸುವಂತೆ ಮಾಡಿರುವುದು ರಾಜ್ಯ ಆಡಳಿತ ಹಾಗೂ ಗ್ರಾಮ ಸ್ವರಾಜ್ ಪರಿಕಲ್ಪನೆಗೆ ಮಾರಕವಾಗಿದೆ. ಕೋವಿಡ್‍ನಂತಹ ಕಷ್ಟ ಕಾಲದಲ್ಲೂ 4.6 ಕೋಟಿ ಗ್ರಾಮೀಣ ಜನರ ಕೈ ಹಿಡಿದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಿ ವಿಬಿ-ಜಿ  ಗ್ರಾಮ್ ಜಿ ಹೆಸರನ್ನು ಇಟ್ಟು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕರಾದ ರಾಹುಲ್‍ಗಾಂಧಿಯವರಿಗೆ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಲು ಅವಕಾಶ ನೀಡದಿರುವುದು ಸಂಸತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಮಾನವಾಗಿದೆ ಎಂದರು.

ಪ್ರಧಾನಿ  ನರೇಂದ್ರಮೋದಿ ಹಾಗೂ ರಾಜನಾಥ್ ಸಿಂಗ್ ಭಾರತ ಮತ್ತು ಚೀನಾ ಯುದ್ದದ ಸಂದರ್ಭದಲ್ಲಿ ಸರಿಯಾದ ನಿರ್ಣಯ ತೆಗೆದುಕೊಳ್ಳುವಲ್ಲಿ ವಿಫಲವಾಗಿರುವುದನ್ನು ಜನರಲ್ ಮನೋಜ್ ಮುಕುಂದ್ ನರ್ವಾನೆಯವರು ತಮ್ಮ ಪೋರ್ಸ ಟಾಸ್ಕ್ ಪುಸ್ತಕದಲಿ ಬರೆದಿರುವುದು ಹಾಗೂ  ನರೇಂದ್ರ ಮೋದಿಯವರ ವಿಷಯ ಜೆಫ್ರಿ ಎಪ್ಸ್ಟೀನ್  ಅವರ ದಾಖಲೆಗಳಲ್ಲಿ ದಾಖಲಾಗಿರುವುದು ಹಾಗೂ ಅಂಬಾನಿ ಮತ್ತು ನರೇಂದ್ರಮೋದಿಯವರ ಹೆಸರು ತಳುಕು ಹಾಕಿಕೊಂಡಿರುವುದರ ಬಗ್ಗೆ ರಾಹುಲ್‍ಗಾಂಧಿಯವರ ಪ್ರಶ್ನೆಗೆ ಹೆದರಿ ಸಂಸತ್ತಿನಲ್ಲಿ ಮಾತನಾಡಬೇಕಿದ್ದ ಪ್ರಧಾನಮಂತ್ರಿಗಳು ಹೆದರಿ ಪಲಾಯನ ಮಾಡಿರುವುದು ಅವರ 56 ಇಂಚಿನ ಎದೆಯ ಪುಕ್ಕಲುತನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಅಂದಿನ ಪ್ರಧಾನಮಂತ್ರಿಗಳಾದ ನೆಹರು ಅವರ ಹೆಸರು ಆಲ್ಬರ್ಟ್ ಐನ್ ಸ್ಟೀನ್ ಅಂತಹ ಮಹಾ ವಿಜ್ಞಾನಿಗಳ ಜೊತೆಗೆ ಕೇಳಿ ಬರುತಿತ್ತು, ಆದರೆ  ಆರ್‍ಎಸ್‍ಎಸ್ ಕೈಗೊಂಬೆಯಾಗಿರುವ ಇಂದಿನ ಪ್ರಧಾನಿಗಳ ಹೆಸರು ಕುಖ್ಯಾತ ಅತ್ಯಾಚಾರಿ ಎಪ್ಸ್ಟೀನ್ ಜೊತೆಗೆ ತಳುಕು ಹಾಕಿಕೊಂಡಿರುವುದು ಭಾರತ ದೇಶಕ್ಕೆ ಮಾಡಿರುವ ಅವಮಾನ. ಇದರ ನೈತಿಕತೆ ಹೊತ್ತು ದೇಶದ ಜನರಿಗೆ ಸ್ಪಷ್ಟನೆ ಕೊಡಬೇಕೆಂದು ಒತ್ತಾಯಿಸಿದರು.

ಅಮೇರಿಕಾದವರ ಬ್ಲಾಕ್ ಮೇಲ್ ತಂತ್ರಕ್ಕೆ ಹೆದರಿ ಪಾಕ್ ವಿರುದ್ದ ಅಪರೇಷನ್ ಸಿಂಧೂರ್‍ನ್ನು ಏಕಾಏಕಿ ನಿಲ್ಲಿಸಿದ್ದನ್ನು ಅಮಾಯಕ ದೇಶದ ಪ್ರಜೆಗಳನ್ನು ಕೊಂದ ಭಯೋತ್ಪಾದಕರ ಸುಳಿವು ಸಿಗದೇ ಇರುವುದು ದೇಶದ ಜನತೆ ಮರೆತಿಲ್ಲ. ಈಗ ಮತ್ತೊಮ್ಮೆ ಅಮೇರಿಕಾದವರ ಬ್ಲಾಕ್ ಮೇಲ್‍ಗೆ ಮಣಿದು ಅಮೇರಿಕಾದವರೊಂದಿಗೆ ಟ್ರೇಡ್ ಡೀಲ್ ಮಾಡಿರುವುದು ಇಲ್ಲಿಯವರಗೆ ದೇಶದ ಜನರಿಗೆ ಸ್ಪಷ್ಟನೆ ಕೊಡದಿರುವುದು ಅಮೇರಿಕಾದವರು ಇದನ್ನು ಪತ್ರಿಕಾಗೋಷ್ಠಿಯ ಮೂಲಕ ನೋಡಿದರೆ ನರೇಂದ್ರಮೋದಿಯವರು ಯಾವುದೋ ಒತ್ತಡಕ್ಕೆ ಸಿಲುಸಿರುವುದು ಸ್ಪಷ್ಪವಾಗಿ ಕಾಣುತ್ತಿದೆ. ಈ ಟ್ರೇಡ್ ಡೀಲ್‍ನಿಂದ (ವ್ಯಾಪಾರ ಒಪ್ಪಂದ) ನಾವು ರಷ್ಯದಿಂದ ತೈಲ ಖರೀದಿಯನ್ನು ನಿಲ್ಲಿಸಿ ಅಮೇರಿಕಾದಿಂದ ವೆನುಜುವೆಲ್ಲಾದಿಂದ ತೈಲಾ ಖರೀದಿ ಒಪ್ಪಂದ ಮಾಡಿರುವುದು ಮತ್ತು ಅಮೇರಿಕಾದ ವಸ್ತುಗಳಿಗೆ ರಫ್ತು ತೆರಿಗೆ ಹಾಕದಿರುವುದು ಮುಂದಿನ ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ವಿಷೇಷವಾಗಿ ರೈತರು ದೊಡ್ಡ ಸಮಸ್ಯೆಗೆ ಸಿಲುಕಲಿದ್ದಾರೆ ಎಂದರು.

ಕೇಂದ್ರ ಬಜೆಟ್: ಜನವಿರೋಧಿ ಮತ್ತು ರಾಜ್ಯ ವಿರೋಧಿ, ಅಭಿವೃದ್ಧಿ ವಿರೋಧಿ : ಹೆಚ್ಚು ಸಂಸದರನ್ನು ಬಿಜೆಪಿಯವರಿಗೆ ಕೊಟ್ಟ ರಾಜ್ಯಕ್ಕೆ ಮತ್ತೊಮ್ಮೆ ಬಜೆಟ್ ಅನ್ಯಾಯ ಮಾಡಿದೆ. 2025–26ರ ಕೇಂದ್ರ ಬಜೆಟ್‍ನ ಸೂಕ್ಷ್ಮ ಪರಿಶೀಲನೆಯಿಂದ ಒಂದು ಸಂಗತಿ ಸ್ಪಷ್ಟವಾಗಿದೆ. ಸರ್ಕಾರವು ಆರ್ಥಿಕ ಶಿಸ್ತಿನ ಹೆಸರಿನಲ್ಲಿ ಜನಸಾಮಾನ್ಯರ ಬದುಕಿನ ಮೇಲೆಯೇ ಕತ್ತರಿ ಹಾಕಿದೆ ಎಂದು ಹೇಳಿದರು.

ಆರೋಗ್ಯ, ಶಿಕ್ಷಣ, ಕೃಷಿ, ಸಾಮಾಜಿಕ ಕಲ್ಯಾಣ, ಗ್ರಾಮೀಣ ಹಾಗೂ ನಗರಾಭಿವೃದ್ಧಿಯಂತಹ ಮೂಲಭೂತ ಕ್ಷೇತ್ರಗಳಿಗೆ ಸಾವಿರಾರು ಕೋಟಿ ರೂ. ಅನುದಾನ ಕಡಿತಗೊಳಿಸಲಾಗಿದೆ. ವಿಶೇಷವಾಗಿ ಎಸ್‍ಸಿ, ಎಸ್‍ಟಿ ಹಾಗೂ ಓಬಿಸಿ ಸಮುದಾಯಗಳ ವಿದ್ಯಾರ್ಥಿವೇತನ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಮಾಡಿದ ಕಡಿತವು ಸಾಮಾಜಿಕ ನ್ಯಾಯದ ಮೇಲಿನ ಸರ್ಕಾರದ ನಿಲುವನ್ನು ಬಯಲಿಗೆ ತರುತ್ತದೆ ಎಂದು ತಿಳಿಸಿದರು.

ಮಾಲಿನ್ಯಗೊಂಡ ಕುಡಿಯುವ ನೀರಿನಿಂದ ಜನರು ಸಾವನ್ನಪ್ಪುತ್ತಿರುವಾಗಲೂ ಜಲ ಜೀವನ ಮಿಷನ್‍ಗೆ ರೂ. 50,000 ಕೋಟಿ ಅನುದಾನ ಕಡಿತಗೊಳಿಸಿರುವುದು ಅತ್ಯಂತ ಖಂಡನೀಯ. ಹಣಕಾಸು ಕೊರತೆ 4.4% ಎಂದು ಹೇಳಿಕೊಳ್ಳುತ್ತಿರುವ ಸರ್ಕಾರ, ಅದನ್ನು ಸಾಧಿಸಿರುವುದು ಆರೋಗ್ಯ, ಶಿಕ್ಷಣ ಹಾಗೂ ಮೂಲಧನ ವೆಚ್ಚ ಕಡಿತಗೊಳಿಸುವ ಮೂಲಕವೇ ಹೊರತು ಆರ್ಥಿಕ ಬೆಳವಣಿಗೆಯಿಂದಲ್ಲ. ಆದಾಯ ಸ್ವೀಕೃತಿಗಳ ಭಾರೀ ಕುಸಿತವು ದೇಶದಲ್ಲಿ ಆರ್ಥಿಕ ಮಂದಗತಿಯು ಗಂಭೀರವಾಗಿರುವುದನ್ನು ಸ್ಪಷ್ಟಪಡಿಸುತ್ತದೆ. ಇಂತಹ ಬಜೆಟ್ ಜನಪರವಾಗಿಲ್ಲ, ಇದು ಕೇವಲ ಅಂಕಿ ಸಂಖ್ಯೆಗಳ ಕಸರತ್ತಿನ ಬಜೆಟ್ ಮಾತ್ರ ಆಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ನಗರಾಧ್ಯಕ್ಷ ಪಿ.ತನೋಜ್ ಕುಮಾರ್ ನಾಯ್ಡು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಲಾಕೇಶ್, ಮುಖಂಡ ಸಿಮ್ಸನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ