ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಮೂಡಿಗೆರೆ ತಾಲ್ಲೂಕು ಶಾಖೆಯ ಅಧ್ಯಕ್ಷ ಬಿ.ಆರ್.ನವೀನ್ ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ರಾಜ್ಯ ಸಂಘದ ಆದೇಶದಂತೆ ಪದ್ಮರಾಜು ಟಿ ಅವರು ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಪದ್ಮರಾಜು ಅವರು ಸದ್ಯ ತಾಲ್ಲೂಕಿನ ಸುಂಕಸಾಲೆ ಗ್ರಾಮ ಪಂಚಾಯಿತಿ ಪಿಡಿಓ ಆಗಿದ್ದಾರೆ. ನೌಕರರ ಸಂಘದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ.
ಪಟ್ಟಣದ ತಾಲ್ಲೂಕು ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಅಧಿಕಾರವನ್ನು ಸ್ವಿಕರಿಸಿ ರಾಜ್ಯ ಸಂಘದ ನಿರ್ದೇಶನದಂತೆ ತಾವು ಅಧಿಕಾರವನು ಸ್ವಿಕರಿಸುತ್ತಿದ್ದು ಬೈಲಾದ ರೀತಿಯಲ್ಲಿ ತಾಲ್ಲೂಕು ಶಾಖೆಯ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಹೋಗುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ತಾಲ್ಲೂಕು ನೌಕರರ ಸಂಘದ ನಿರ್ದೇಶಕರುಗಳಾದ ಶ್ರೀಮತಿ ಪ್ರತಿಮಾ, ಶ್ರೀಮತಿ ಕಾವ್ಯ, ಸುಧಿರ್, ಗಂಗಾಧರಪ್ಪ, ಮಂಜಪ್ಪ, ಪೂರ್ಣೇಶ್, ಮಂಜನಾಯಕ್, ಮಲ್ಲಿಕಾರ್ಜುನ್, ಸುನೀಲ್,ರೇವಣ್ಣ, ಶ್ರೀಮತಿ ಸೌಮ್ಯ, ಕೃಷ್ಣಪ್ಪ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.



