February 18, 2026

 

 

ಸಿವಿಲ್ ನ್ಯಾಯಾದೀಶರ ನೇಮಕ್ಕಾಗಿ ನಡೆದ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಮೂಡಿಗೆರೆಯ ನಿತಿನ್ ಕುವೆಲ್ಲೋ ಅವರು ಸಿವಿಲ್ ನ್ಯಾಯಾದೀಶರಾಗಿ ನೇಮಕವಾಗಿದ್ದಾರೆ.

ರಾಜ್ಯದಲ್ಲಿ ಒಟ್ಟು 83 ಮಂದಿ ಸಿವಿಲ್ ನ್ಯಾಯಾದೀಶರನ್ನು ನೇಮಕ ಮಾಡಲಾಗಿದೆ.

ಮೂಡಿಗೆರೆ ಪಟ್ಟಣದ ಬಿಳಗುಳ ಗ್ರಾಮದ ಲಿಯೋ ಕುವೆಲ್ಲೋ ಮತ್ತು ಶ್ರೀಮತಿ ಅನಿತಾ ಕುವೆಲ್ಲೋ ಅವರ ಪುತ್ರರಾದ ನಿತಿನ್ ಮೂಡಿಗೆರೆ ಸೈಂಟ್ ಮಾರ್ಥಾಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಾಂಗ ಮಾಡಿ, ಮಂಗಳೂರಿನ ಎಸ್.ಡಿ.ಎಂ. ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.

ನಿತಿನ್ ಅವರು 2021ರಿಂದ ಮೂಡಿಗೆರೆ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಿರಿಯ ವಕೀಲ ಡಿ.ಎಸ್ . ಸುಧೀರ್ ಅವರೊಂದಿಗೆ ಸಹಾಯಕ ವಕೀಲರಾಗಿದ್ದರು.

ನ್ಯಾಯಾದೀಶರ ಆಯ್ಕೆ ಪರೀಕ್ಷೆಯನ್ನು ತೆಗೆದುಕೊಂಡು  ಉನ್ನತ ಪ್ರಯತ್ನದಿಂದ ತನ್ನ ಕನಸ್ಸನ್ನು ಈಡೇರಿಸಿಕೊಂಡಿದ್ದಾರೆ.

ನಿತಿನ್ ಅವರ ಸಾಧನೆಗೆ ಮೂಡಿಗೆರೆ ವಕೀಲರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ