February 25, 2026

 

 

ಜಿಲ್ಲಾಸ್ಪತ್ರೆಯಲ್ಲಿ ಸಿಟಿಸ್ಕ್ಯಾನ್ ಸ್ಥಗಿತಗೊಂಡಿದೆ. ಆಸ್ಪತ್ರೆ ಬಡ ರೋಗಿ ಗಳು ಹೊರಗಡೆ ದುಬಾರಿ ವೆಚ್ಚದಲ್ಲಿ ಸ್ಯ್ಕಾನ್ ಮಾಡಿಸುವ ಶಕ್ತಿಯಿಲ್ಲ. ರಾಜ್ಯಸರ್ಕಾರ ರೋಗಿಗಳ ನೆರವಿಗೆ ಧಾವಿಸುತ್ತಿಲ್ಲ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ಸಹ ಪ್ರಮುಖ್ ಎಸ್.ಡಿ.ಎಂ.ಮಂಜುನಾಥ್ ದೂರಿದ್ದಾರೆ.

ಮಂಜುನಾಥ್

 

ಈ ಬಗ್ಗೆ ಹೇಳಿಕೆಯಲ್ಲಿ ಸೋಮವಾರ ತಿಳಿಸಿರುವ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನವಿರೋ ಧಿ ಸರ್ಕಾರವಾಗಿ ಬದಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಸ್ಯ್ಕಾನಿಂಗ್ ಸೌಕರ್ಯಗಳು ಸ್ಥಗಿತಗೊಂಡಿದೆ. ಜನತೆಯ ಆರೋಗ್ಯ ರಕ್ಷಿಸಬೇಕಾದ ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತವಾಗಿದೆ ಎಂದಿದ್ದಾರೆ.

ನ್ಯಾಷನಲ್ ಹೆಲ್ತ್ ಮಿಷನ್‍ನಡಿ ಪಬ್ಲಿಕ್ ಪ್ರವೈಟ್ ಪಾಟ್ರ್ನಶೀಪ್‍ನ ಟೆಂಡರ್ ಕರಾರಿನಂತೆ ರಾಜ್ಯದ ಬಹುತೇಕ ಜಿಲ್ಲಾಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್‍ದಾರರಿಗೆ ಉಚಿತವಾಗಿ ನೀಡುತ್ತಿರುವ ಡಯಾಲಿಸಿಸ್, ಎಂ ಆರ್‍ಐ, ಸಿಟಿ ಸ್ಕ್ಯಾನಿಂಗ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುವಂಥ ಸಂಸ್ಥೆಗಳಿಗೆ ಎರಡು ವರ್ಷ ಗಳಿಂದ ಕೋಟಿಗಟ್ಟಲೇ ಹಣದ ಬಾಕಿ ಉಳಿಸಿಕೊಂಡಿದೆ ಎಂದಿದ್ದಾರೆ.

ಹೆಚ್ಚಿನ ಚಿಕಿತ್ಸೆಗೆ ಬರುವಂಥ ಸಾರ್ವಜನಿಕರು ಬಿಪಿಎಲ್ ಕಾರ್ಡ್ ತೋರಿಸಿ ಸ್ವಂತ ಹಣವನ್ನು ಪಾವ ತಿಸಿ ಸೇವೆ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ಸಿಬ್ಬಂದಿಗಳು ಸೂಚಿಸುತ್ತಿದ್ದಾರೆ. ಸಿಟಿ ಸ್ಕ್ಯಾನಿಂಗ್ ರೂ.2181 ರೂ. ಪಾವತಿಸಬೇಕಾದ ಅನಿವಾರ್ಯ ಬಂದೋದಗಿದೆ. ವೈದ್ಯಕೀಯ ಶಿಕ್ಷಣ ಪ್ರಾರಂಭವಾಗಿ ಮೂರು ವ ರ್ಷ ಕಳೆದರೂ ಸ್ಕ್ಯಾನಿಂಗ್‍ಗಳನ್ನು ಸ್ಥಾಪಿಸಲಾಗಿಲ್ಲ ಎಂದು ತಿಳಿಸಿದ್ದಾರೆ.

ಎನ್‍ಹೆಚ್‍ಎಂ ಅಡಿಯಲ್ಲಿ ಜಿಲ್ಲಾಸ್ಪತ್ರೆಯನ್ನು ಕೇಂದ್ರವಾಗಿಟ್ಟುಕೊಂಡು 40 ಕಿ.ಲೋ. ಮೀಟರ್ ವ್ಯಾಪ್ತಿ ಯಲ್ಲಿ ಬಡವರಿಗೆ ಒದಗಿಸಬಹುದಾದ ಅಂಬುಲೆನ್ಸ್ ಸೇವೆಯ ವಾಹನದ ಟೈಯರ್ ಪಂಚರಾಗಿದ್ದು ರಿಪೇ ರಿ ಮಾಡಿಸದೇ ವಾರಗಟ್ಟಲೇ ನಿಂತು ಹೋಗಿದೆ. ಉಚಿತ ಆರೋಗ್ಯ ಸೇವೆಯನ್ನು ಬಯಸಿ ಬರುವವರಿಗೆ ಬಡವನ ಪಾಡು ಕೇಳುವರರೇ ಇಲ್ಲವಾಗಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ