February 25, 2026

 

 

ಆಲ್ದೂರು  ಬಿರಂಜಿ ಹೊಳೆ ಪಕ್ಕದ ಮಲ್ನಾಡ್ ಟ್ರೋಫಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ 36+ಲೆಜೆಂಡ್ಸ್ ಕ್ರಿಕೆಟ್ ಪ್ರೀಮಿಯರ್ ಲೀಗ್ 3 ಆವೃತ್ತಿ ಭಾನುವಾರ ಮುಕ್ತಾಯವಾಯಿತು.

ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ರೀಡಾಂಗಣದ ದಾನಿಗಳಾದ ಕುಶ ಗೌಡ ಮತ್ತು ರೈತ ಮುಖಂಡ ತುಳಸೇ ಗೌಡ, ಕ್ರೀಡೆಗೆ ವಯಸ್ಸಿನ ಅಂತರವಿರಬಾರದು ದೈನಂದಿನ ಬದುಕಿನ ಒತ್ತಡಗಳನ್ನು ಮರೆತು ಈ ರೀತಿಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡರೆ ನಮ್ಮಲ್ಲಿರುವ ಒತ್ತಡವನ್ನು ನಿವಾರಿಸಿಕೊಂಡು ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿ ಆಯೋಜಕರನ್ನು ಅಭಿನಂದಿಸಿದರು.

ಕ್ರೀಡಾಕೂಟದಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸಿದ್ದು, ದಿನೇಶ್ ಹೆಡದಾಳು ನಾಯಕತ್ವದ ತಂಡ ಪ್ರಥಮ ಸ್ಥಾನ ಗಳಿಸಿತು. ದ್ವಿತೀಯ ಸ್ಥಾನವನ್ನು ಚಂದ್ರಶೇಖರ್ ಹೊಸಳ್ಳಿ ನಾಯಕತ್ವ ದ ತಂಡ ಪಡೆಯಿತು.
ಕ್ರೀಡಾಕೂಟದ ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ದೊಡ್ಡ ಮಾಗರವಳ್ಳಿ ಮಧು, ಬೆಸ್ಟ್ ಬೌಲರ್ ಹರ್ಷ ಗೌಡ,
ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿ ವೈಶಾಖ್ ಗೌಡ, ಸರಣಿ ಸರ್ವೋತ್ತಮ ಪ್ರಶಸ್ತಿಯನ್ನು ಮನು ಗೌಡ ಹೆಡದಾಳು,

ಕೊಳಗಾವೆ ಶಿವಾನಂದ್, ಪೂರ್ಣೇಶ್ ಶಿವಾಜಿ, ಅರುಣ್,ಅಕ್ಷಯ್, ಪ್ರವೀಣ್, ಮಾಜಿ ಸೈನಿಕ ಅರುಣ್ ಗೌಡ,
ಮತ್ತು ವ್ಯವಸ್ಥಾಪಕರಾದ ಮಧು ಗೌಡ ಹೆಡದಾಳು, ಪ್ರತಾಪ್ ಗೌಡ, ಸಂದೀಪ್ ಗೌಡ ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ