lakkavalli

 

 

ಚಿಕ್ಕಮಗಳೂರು ಜಿಲ್ಲೆಯ  ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಂಗೇನಹಳ್ಳಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರು, ತರೀಕೆರೆ ವೃತ್ತ ನೇತೃತ್ವದ ಪೊಲೀಸ್ ತಂಡವು 24 ಗಂಟೆಯೊಳಗೆ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯಿಂದ ಸುಮಾರು 8,80,300/- ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 5.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ (46 ಗ್ರಾಂ 400 ಮಿಲಿ) ಮತ್ತು 3,00,300/- ರೂ. ನಗದು ಹಣ ಸೇರಿದೆ.

ರಂಗೇನಹಳ್ಳಿ ಗ್ರಾಮದ ಕುಂಬಾರ ಬೀದಿಯಲ್ಲಿರುವ ಬಿ. ಲಕ್ಷ್ಮಣ್ ಬೆಂಗಳೂರಿಗೆ ಸಂಬಂಧಿಕರ ಮದುವೆ ಹೋಗಿ 23 ರಂದು ರಾತ್ರಿ  ಬಂದು ನೋಡಿದಾಗ ಮನೆಯ ಮುಂಬಾಗಿಲು ತೆರೆದಿರುತ್ತು. ಒಳಗೆ ಹೋಗಿ ನೋಡಿದಾಗ ಬೆಡ್ ರೂಂನಲ್ಲಿದ್ದ  ಗೊಡ್ರೆಜ್ ಬೀರುವಿನ ಬಲಭಾಗದ ಲಾಕರ್ ತೆರೆದಿದ್ದು ಅದರ ಒಳಗೆ ಇಟ್ಟಿದ್ದ ಚಿನ್ನಾಭರಣ ಮತ್ತು ನಗದು ಹಣ ಕಳ್ಳತನವಾಗಿತ್ತು.
ಆರೋಪಿ ರಂಗೆನಹಳ್ಳಿ ಹಾಲಿನ ಡೈರಿ ಸಹಾಯಕ ಜಿ .ಆರ್ .ಗಗನ್ ನನ್ನ ಬಂಧಿಸಿ ಬಂಗಾರದ ಒಂದು ಮಾಂಗಲ್ಯ ಚೈನ್ 35 ಗ್ರಾಂ 140 ಮಿಲಿ ಗ್ರಾಂ  , ಬಂಗಾರದ 4 ಉಂಗುರಗಳು ಅಂದಾಜು 9 ಗ್ರಾಂ 200 ಮಿಲಿ ,ಬಂಗಾರದ 3 ಕಿವಿ ರಿಂಗ್ ಮತ್ತು ಒಂದು ಮೂಗುನತ್ತು 1 ಗ್ರಾಂ 160 ಮಿಲಿ, ಬಂಗಾರದ ಅಷ್ಟಮಣಿ ಗುಂಡು-14 ಅಂದಾಜ 800 ಮಿಲಿ ಸೇರಿದಂತೆ ಕಳವಾದ ಎಲ್ಲಾ ವಸ್ತು ಮತ್ತು ನಗದು ಪಡೆದುಕೊಳ್ಳಲಾಗಿದೆ.

ಪೊಲೀಸ್ ತಂಡದಲ್ಲಿ ತರೀಕೆರೆ ಪೊಲೀಸ್ ವೃತ್ತ ನಿರೀಕ್ಷಕರಾದ ಗಿರೀಶ್ ಬಿ ವಿ, ಲಕ್ಕವಳ್ಳಿ ಪಿಎಸ್ಐ ವಿಶ್ವನಾಥ್ ಎನ್ ಸಿ ಮತ್ತು ಪೊಲೀಸ್ ಸಿಬ್ಬಂದಿಗಳಾದ ಓಂಕಾರ್ ಎಲ್ ಎಸ್, ಶಿವಕುಮಾರ್ ಎನ್ ಆರ್, ಅವಿನಾಶನಾಯ್ಕ ಮತ್ತು ಸಿದ್ದರಾಮಪ್ಪ ಎಸ್ ಸಿ ಕಾರ್ಯನಿರ್ವಹಿಸಿರುತ್ತಾರೆ.

ಊರಿಗೆ ಅಥವಾ ಹೊರಗಡೆ ಹೋಗುವಾಗ ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ. ಅಲ್ಲದೆ, ದೀರ್ಘಕಾಲದವರೆಗೆ ಮನೆಯಿಂದ ಹೊರಗಿರುವಾಗ ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಜಾಗೃತರಾಗಿರಿ, ಸುರಕ್ಷಿತವಾಗಿರಿ ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ