suddi6 (3)

 

 

ತಾಯಿ, ಮಡದಿ, ಅತ್ತೆ-ಸೊಸೆ ಸೇರಿದಂತೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣಿನ ಸಾಧನೆಯ ಮೆಟ್ಟಿಲು ದೊಡ್ಡದಾಗಿದೆ. ಮಗು ತೂಗುವ ತೊಟ್ಟಿಲಿನಿಂದ, ದೇಶದ ಆಳ್ವಿಕೆ ನಡೆಸುವವರೆಗೂ ಹೆಣ್ಣು ಸಮರ್ಥರಾಗಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎ.ವಿ.ಗಾಯತ್ರಿ ಶಾಂತೇಗೌಡ ಹೇಳಿದರು.

ಚಿಕ್ಕಮಗಳೂರು ನಗರದ ಕನಕ ಭವನದಲ್ಲಿ ಕನಕಶ್ರೀ ಮಹಿಳಾ ಸಮಾಜದಿಂದ ಆಯೋಜಿಸಿದ್ಧ ಮಹಿಳಾ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಮಗಳು, ಮನೆಯ ಕಣ್ಣಿನಂತೆ. ಸಂಸಾರದ ಬಹುತೇಕ ಜವಾಬ್ದಾರಿಯನ್ನು ನಿರ್ವಹಿಸುವ ಕರು ಣಾಮಯಿ. ತಾಯಿಯಾಗಿ ಮಕ್ಕಳನ್ನು ಸದಾಕಾಲ ಕಾಪಾಡುತ್ತಾಳೆ. ಮಡದಿ, ತಂಗಿಯಾಗಿ ಗಂಡಿನ ಶ್ರೇಯ ಸ್ಸನ್ನು ಬಯಸುವ ಮಹಿಳೆಯರು ಜಗತ್ತಿಗೆ ಒಂದು ಬೆಳಕಿನಂತೆ ಎಂದು ತಿಳಿಸಿದರು.

ಭಾರತೀಯ ಸಂಸ್ಕøತಿಯಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿದೆ. ಈ ನೆಲದಲ್ಲಿ ಶಾರದದೇವಿ, ದುರ್ಗಿ, ಚಾಮುಂಡಿ, ಕಾಳಿ ಎಂಬ ಅವತಾರದೊಂದಿಗೆ ದೇವತೆಗಳು ಹೆಣ್ಣಿನ ಸ್ವರೂಪದಲ್ಲಿವೆ. ಹೀಗಾಗಿ ಹೆಣ್ಣನ್ನು ಪೂಜನೀಯ ಭಾವದಿಂದ ನೋಡುವ, ಗೌರವಿಸುವ ಹಾಗೂ ಸತ್ಕಾರಿಸುವ ಸಂಸ್ಕøತಿಯಿದೆ ಎಂದರು.

ಕೇವಲ ಮನೆಗೆ ಹೆಣ್ಣು ಸೀಮಿತರಾಗದೇ, ರಾಜಕೀಯ ರಂಗದಲ್ಲೂ ಛಾಪು ಮೂಡಿಸಿದ್ದಾರೆ. ಅಲ್ಲದೇ ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳಲ್ಲಿ ಮಹಿಳೆಗೆ ಶೇ.50ರಷ್ಟು ಮೀಸಲಾತಿ ನೀಡುವ ಮೂಲಕ ಸಮಾ ಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾಳೆ ಎಂದು ತಿಳಿಸಿದರು.

ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ಪುರುಷರಿಗಿಂತ ಹೆ ಣ್ಣು ಅತಿಹೆಚ್ಚು ಅರ್ಹತೆ, ತಿಳುವಳಿಕೆ ಹೊಂದಿರುವ ಗುಣದವಳು. ಕೀಳರಿಮೆ, ಹಿಂಜರಿಕೆ ತ್ಯಜಿಸಿ, ಆತ್ಮವಿಶ್ವಾ ಸದಿಂದ ನಿಂತ ಪರಿಣಾಮ ಇಂದಿರಾಗಾಂಧೀ ಪ್ರಧಾನಿಯಾದರು. ಮತ್ತೋರ್ವರು ದೇಶದ ರಾಷ್ಟ್ರಪತಿಗಳಾ ಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಅನೇಕ ವರ್ಷಗಳಿಂದ ಹೆಣ್ಣನ್ನು ಬ್ರೂಣದಲ್ಲಿ ಪತ್ತೆಹಚ್ಚಿ ನಶಿಸುವಂಥ ಕೆಲಸವಾಗುತ್ತಿತ್ತು. ಇದೀಗ ಹೆಣ್ಣು ಮಕ್ಕಳೆಂದರೆ ಅತ್ಯಂತ ಸಂಭ್ರಮದಿಂದ ಹರ್ಷಿಸುತ್ತಾರೆ. ಸಮಾಜದಲ್ಲಿ ಗಂಡಿಗಿಂತ ಹೆಣ್ಣುಮಕ್ಕಳೇ ಪಾಲಕರ ನ್ನು ಕಾಳಜಿಯಿಂದ ಆರೈಕೆ ಮಾಡುತ್ತಿದ್ದು, ಹೆಣ್ಣು ಪ್ರೀತಿಯಿಂದ ನೋಡಿಕೊಳ್ಳುವ ಕಣ್ಣಾಗಿದ್ದಾಳೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಮಂಜುಳಾ ಹುಲ್ಲಹಳ್ಳಿ ಮಾತನಾಡಿ ಜೀವಕ್ಕೆ ಜೀವ ಕೊಡುವಂಥ ಶಕ್ತಿ ಹೆಣ್ಣಿಗಿದೆ. ಸಮಾಜದಲ್ಲಿ ಪುರುಷರು ಹೆಣ್ಣನ್ನು ಅವಲಂಬಿಸಿಯೇ ಜೀವನ ನಡೆಸುತ್ತಿ ದ್ದಾರೆ. ಮನೆಯಲ್ಲಿ ಹೆಣ್ಣಿಲ್ಲದಿದ್ದರೆ ಆ ಮನೆ ದುಸ್ಥಿತಿಗೆ ಕಾರಣ. ಅತ್ತೆ-ಮಾವ ಕೂಡಾ ಸೊಸೆಯನ್ನು ಹೆತ್ತ ಮಗಳಂತೆ ನೋಡಿಕೊಂಡರೆ ಆ ಕುಟುಂಬವು ಸುಖಿ ಕುಟುಂಬವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನಕಶ್ರೀ ಮಹಿಳಾ ಸಮಾಜದ ಅಧ್ಯಕ್ಷೆ ಶಾರದಾ ಮಾ ಸ್ತೇಗೌಡ ಸಮಾಜವು ಅನೇಕ ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಮಾಜಮುಖಿ ಕಾರ್ಯಕ್ರಮ ಗಳೊಂದಿಗೆ ಸಾಗುತ್ತಾ ಬಂದಿದೆ ಎಂದರು.

ಇದೇ ವೇಳೆ ವಾರ್ಷಿಕೋತ್ಸವ ಪ್ರಯುಕ್ತ ಏರ್ಪಡಿಸಿದ್ಧ ಕ್ರೀಡಾಕೂಟದಲ್ಲಿ ವಿಜೇತರಾದ ಮಹಿಳೆಯರಿಗೆ ಗಣ್ಯರಿಂದ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಚಿಂತಕಿ ಕಾವ್ಯ ಸಂತೋಷ್, ಸಮಾಜದ ಕಾರ್ಯದರ್ಶಿ ವನಜಾಕ್ಷಿ ಗೋಪಾಲೇಗೌಡ, ಖಜಾಂಚಿ ಅನ್ನಪೂರ್ಣ ಗೋಪಾಲಕೃಷ್ಣ, ನಿರ್ದೇ ಶಕರುಗಳಾದ ಗೀತಾ ಗಂಗಾಧರ್, ಗೀತಾ ಓಂಕಾರಮೂರ್ತಿ, ರೇಖಾತಮ್ಮಯ್ಯ, ಗಾಯತ್ರಿ ಮರೀಗೌಡ, ಪ್ರೇಮಮಲ್ಲೇಶ್, ರತ್ನ ರಾಜೇಗೌಡ, ಕಾವ್ಯ ಕೇಶವ, ಶೃತಿ ಹರೀಶ್‍ಬಾಬು, ಮಾಲತಿ ಕುಮಾರಸ್ವಾಮಿ, ಗಂಗ ಮ್ಮ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ