ramesh-daradahlli 22

 

 

06/03/2026 ರ ಶುಕ್ರವಾರ ಕರ್ನಾಟಕ ರಾಜ್ಯ ಸರ್ಕಾರದ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಖಾತೆಯನ್ನು ನಿರ್ವಹಿಸುತ್ತಿದ್ದಾರೆ ಆದರೆ ಪ್ರತಿ ವರ್ಷದಂತೆ ಕೊರತೆ ಬಜೆಟ್ ಮಂಡಿಸಿದ್ದಾರೆ ಆದರೆ ಸಹಕಾರ ಸಂಘದಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷದ ವರೆಗೆ ಸಾಲ ನೀಡುವುದಾಗಿ ಈ ಹಿಂದಿನ ಬಜೆಟ್ ಗಳಲ್ಲಿ ಮಾಡಿರುವ ಘೋಷಣೆ ಕೇವಲ ಭರವಸೆಯಾಗಿಯೇ ಉಳಿದಿದೆ ಎಂದು ರೈತಸಂಘ ಹಸಿರುಸೇನೆ ಜಿಲ್ಲಾ ಸಂಚಾಲಕ ಡಿ ಎಸ್ ರಮೇಶ್ ಗೌಡÀ  ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ; 2023 ರ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಮತದಾರರಿಗೆ ಚುನಾವಣೆಗು ಮುನ್ನ ಫ್ರೀ ಗ್ಯಾರಂಟಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರ 3 ವರ್ಷ ಹತ್ತಿರ ಬಂದರೂ ಯಾವುದೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸರ್ಕಾರಿ ನೌಕರರಿಗೆ ಸಮಯಕ್ಕೆ ಸರಿಯಾಗಿ ಸಂಬಳ ನೀಡಲು ಸಾಧ್ಯವಾಗಿರುವುದಿಲ್ಲ ಮತ್ತು ಶಕ್ತಿ ಯೋಜನೆಯಿಂದ ಕೆ ಎಸ್ ಆರ್ ಟಿ ಸಿ ಬಸ್ ನಿಗಮ ಸಂಪೂರ್ಣ ನಷ್ಠಗೊಳಗಾಗಿದೆ ಮತ್ತು ನೌಕರರಿಗೆ ಸಂಬಳವನ್ನು ಸಹ ಕೊಟ್ಟಿರುವುದಿಲ್ಲ ದೇಶದಲ್ಲಿ ಯಾವುದೆ ಪಕ್ಷದ ಸರ್ಕಾರಗಳು ಇರಲಿ ಬಜೆಟ್ ಮಂಡನೆ ಮಾಡುವಾಗ ಸರ್ಕಾರದ ಖಜಾನೆಯಲ್ಲಿ ಬಜೆಟ್‍ನ ಒಟ್ಟು ಗಾತ್ರದ ಅರ್ಧ ಭಾಗ ಹಣ ಶೇಖರಣೆ ಮಾಡಿರಬೇಕು ಆಗ ಮಾತ್ರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಲಿದೆ ಉಳಿದ ಹಣವನ್ನು ತೆರಿಗೆ ಮೂಲಕ ಮತ್ತು ಸಾಲ ಮಾಡಿ ತೆರಿಗೆ ಹಣ ಸರ್ಕಾರ ನಡೆಸಿಕೊಂಡು ಹೋಗುವುದು ರಾಜ್ಯದ ಹಣಕಾಸು ಇಲಾಖೆಗೆ ಪ್ರತ್ಯೇಕ ಮಂತ್ರಿ ಸ್ಥಾನ ಇರಬೇಕು ಮುಖ್ಯಮಂತ್ರಿಯಾದವರು ಹಣಕಾಸು ನಿರ್ವಹಣೆ ಮಾಡುವುದು ಫಾರ್ಟ್‍ಟೈಮ್ ಕೆಲಸದಂತೆ ನಡೆಯುತ್ತಿದೆ ಹಣಕಾಸು ಇಲಾಖೆಗೆ ಪ್ರತ್ಯೇಕ ಮಂತ್ರಿ ಇದ್ದರೆ ಸರ್ಕಾರಕ್ಕೆ ಬರುವ ಹಣಕಾಸು ಮೂಲಗಳನ್ನು ನಿಗ ವಹಿಸುವುದು ಸೇರದಂತೆ ಸರ್ಕಾರಕ್ಕೆ ತೆರಿಗೆ ಮೂಲಕ ಬರುವ ಹಣ ಇರಬಹುದು ಮತ್ತು ಇತರ ನೈಸರ್ಗಿಕ ಸಂಪತ್ತಿನಿಂದ ಬರುವ ಆದಾಯಗಳನ್ನು ಸರ್ಕಾರಕ್ಕೆ ಬರುವಂತೆ ನಿಗ ವಹಿಸಲು ಮತ್ತು ಸರ್ಕಾರದ ಅಧಿಕಾರಿಗಳೆ ಸರ್ಕಾರಕ್ಕೆ ಬರುವ ತೆರಿಗೆ ಹಣವನ್ನು ಅರ್ಧ ಭಾಗ ತಡೆಯುವ ಕೆಲಸಗಳನ್ನು ಮಾಡುತ್ತಿರುತ್ತಾರೆ ಆದ್ದರಿಂದ ಇದರ ಬಗ್ಗೆ ನಿಗ ವಹಿಸಲು ಮತ್ತು ಮುಂದಿನ ಅಭಿವೃದ್ದಿಗೆ ಹಣ ಸಂಗ್ರಹಿಸುವ ಜವಾಬ್ದಾರಿಯನ್ನು ನಿರ್ವಹಣೆ ಮಾಡುವುದು ಹಣಕಾಸಿನ ಮಂತ್ರಿಗಳ ಕರ್ತವ್ಯವಾಗಿರುತ್ತದೆ.

2023 ರ ವಿಧಾನಸಭಾ ಚುನಾವಣೆಯಲ್ಲಿ ಸಹಕಾರ ಸಂಘದಿಂದ ರೈತರಿಗೆ 10 ಲಕ್ಷದವರೆಗೂ 0% ಸಾಲ ಕೊಡುವುದಾಗಿ ಪಕ್ಷದ ಚುನಾವಣಾ ಪ್ರನಾಳಿಕೆಯಲ್ಲಿ ಘೋಷಣೆ ಮಾಡಿದ್ದರು ಆದರೆ ಇಲ್ಲಿವರೆಗೂ ಸಹಕಾರ ಸಂಘದಿಂದ ರೈತರಿಗೆ ಹೊಸ ಸಾಲವನ್ನು ನೀಡಿಲ್ಲ ಭಾರತದÀಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ರೈತರನ್ನು ಖಾಸಗಿ ಸಾಲಗಳಿಗೆ ಸಿಲುಕದಂತೆ ತಪ್ಪಿಸಲು ಸ್ವಾತಂತ್ರ್ಯ ಹೋರಾಟಗಾರರ ಪ್ರಯತ್ನ ದಿಂದ ರಾಜ್ಯದಲ್ಲಿ ಸಹಕಾರ ಸಂಘ ಸ್ಥಾಪಿಸಲಾಯಿತು ಆದರೆ ಈಗ ಸಹಕಾರ ಸಂಘದ ಕೇಂದ್ರ ಸ್ಥಾನಗಳಲ್ಲಿ ಡಿಸಿಸಿ ಬ್ಯಾಂಕ್ ಮತ್ತು  ಅಪೆಕ್ಸ್ ಬ್ಯಾಂಕ್‍ಗಳಲ್ಲಿ ಮಂತ್ರಿಗಳು ಶಾಸಕರುಗಳು ತಮ್ಮ ಹಿತಾಸಕ್ತಿಗಾಗಿ ಅಧಿಕಾರ ಹಿಡಿಯುತ್ತಿದ್ದಾರೆ ಆದರೆ ರೈತರನ್ನು ಖಾಸಗಿ ಸಾಲಗಳಿಂದ ಮುಕ್ತಗೊಳಿಸುವ ಯಾವುದೆ ಚಿಂತನೆಗಳನ್ನು ನಡೆಸುತ್ತಿಲ್ಲ 06/03/2026 ರ ಬಜೆಟ್ ನಲ್ಲಿ ರೈತರಿಗೆ 0% ಸಾಲ ನೀಡುವುದಾಗಿ ತಿಳಿಸಿದ್ದಾರೆ ಆದರೆ ಎಷ್ಟು ಸಾಲ ಕೊಡುವ ಪ್ರಮಾಣ ತಿಳಿಸಿಲ್ಲ ಈ ಹಿಂದೆ 3 ಲಕ್ಷದ ವರೆಗೆ 0% ಸಾಲ ನೀಡಲಾಗಿದೆ ಸಹಕಾರ ಸಂಘದಿಂದ 10 ಲಕ್ಷದವರೆಗೆ ವಾರ್ಷಿಕ 3% ಬಡ್ಡಿ ಗೆ ಸಹಕಾರ ಸಂಘದಿಂದ ಹೆಚ್ಚುವರಿ ಸಾಲ ನೀಡಬೇಕು ಎಂದು ಒತ್ತಾಯ ಹಿಂದಿನಿಂದಲು ಬೇಡಿಕೆ ಇಡಲಾಗಿದೆ ಆದರೆ ಇದರ ಬಗ್ಗೆಯೂ ಯಾವುದೆ ಪ್ರಸ್ತಾಪ ಮಾಡಿಲ್ಲ ಎಂದು ರಮೇಶ್ ಗೌಡ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ