ಚಿಕ್ಕಮಗಳೂರು ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಪ್ರತಿನಿತ್ಯ ಪ್ಲಾಸ್ಟಿಕ್ ತ್ಯಾಜ್ಯವನ್ನು ದಹಿಸುತ್ತಿದ್ದು ಕೂಡಲೇ ಪರಿಶೀಲಿಸಿ ನಿಲ್ಲಿಸುವ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಬಹುಜನ ಸಮಾಜ ಪಕ್ಷದ ವತಿಯಿಂದ ಗುರುವಾರ ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ನ್ಯಾಯಾಲಯದ ಆವರಣದಲ್ಲಿ ಪ್ರತಿನಿತ್ಯವು ಪ್ಲಾಸ್ಟಿಕ್ ತ್ಯಾಜ್ಯ ಇತ್ಯಾದಿಗಳನ್ನು ಸುಡಲಾಗುತ್ತಿದೆ. ಪ್ಲಾಸ್ಟಿಕ್ ಸುಟ್ಟ ಕೆಟ್ಟ ವಾಸನೆ ಸುತ್ತಮುತ್ತ ಪರಿಸರದಲ್ಲಿ ವಿಪರೀತವಾಗಿ ಹರಡುತ್ತಿದೆ ಎಂದರು.
ಪ್ಲಾಸ್ಟಿಕ್ ಸುಡುವ ದುರ್ವಾಸನೆಯಂದ ಅಕ್ಕಪಕ್ಕದ ನಿವಾಸಿಗಳು ತಮಗರಿಲ್ಲದೇ ವಿಷಾನಿಲಯವನ್ನು ಉಸಿರಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಕರಿಮೋಡದಿಂದ ಪ್ಲಾಸ್ಟಿಕ್ ಹೊಗೆ ಇಡೀ ಸ್ವಚ್ಚಂಧ ಪರಿಸರದ ವಾತಾವರಣನ್ನು ಕಲುಷಿತಗೊಳಿಸುತ್ತಿದೆ ಎಂದು ಹೇಳಿದರು.
ಬಿಎಸ್ಪಿ ನಗರಾಧ್ಯಕ್ಷ ಡಿ.ಹೆಚ್.ವಿಜಯ್‍ಕುಮಾರ್ ಮಾತನಾಡಿ ಪ್ರತಿನಿತ್ಯವು ಪ್ಲಾಸ್ಟಿಕ್ ಸುಡುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇದು ಮಾರಕ ಕಾಯಿಲೆಗೆ ತುತ್ತಾಗುವ ಸಂಭವವಿದೆ. ಅಲ್ಲದೇ ವೃದ್ದರು ಹಾಗೂ ಪುಟಾಣಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ.ಎಸ್.ಪಿ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಯೋಜಕ ಗಂಗಾಧರ್, ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಮಂಜುಳಾ, ಮುಖಂಡರುಗಳಾದ ಟಿ.ಎಸ್.ರತ್ನ, ಗಿರೀಶ್, ಹರೀಶ್‍ಮಿತ್ರ, ಕನ್ನಡಸೇನೆ ಮುಖಂಡರಾದ ಜಯಪ್ರಕಾಶ್, ಅನ್ವರ್ ಮತ್ತಿತರರು ಹಾಜರಿದ್ದರು.



