a812ec82-d70f-49a9-832a-110b7c1df505

 

 

ಏನೆ ಒಳ್ಳೆ ಕೆಲಸ ಮಾಡಿದ್ರು ಅದರಲ್ಲಿ ಅದ್ಯಾತ್ಮಿಕ, ಆರಾಧನಾ ಭಾವ ದಿಂದ ಮಾಡುವುದು ನಮ್ಮ ಭಾರತೀಯ ಹಿಂದು ಸಂಸ್ಕೃತಿಯ ಲಕ್ಷಣ

2024 ರoದು ವೆಸ್ಟಿಂಡೀಸ್ ನ ಸುಂದರ ದ್ವೀಪಗಳ ಸಮೂಹದ ಬರ್ಬಾಡಸ್ ಎಂಬ ದ್ವೀಪ ಪ್ರದೇಶದ ಸ್ಟೇಡಿಯಂ ನಲ್ಲಿ ನಡೆದ T – 20 ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತೀಯ ತಂಡದ ನಾಯಕ ರೋಹಿತ್ ಶರ್ಮ ಆ ಕ್ರೀಡಾಂಗಣದ ಪಿಚ್ ನ ಸ್ವಲ್ಪ ಮಣ್ಣನ್ನು( ಮಣ್ಣನ್ನು ಮೃತಿಕೆ ಅಂತಾನು ಕರೆಯುತ್ತೇವೆ ) ತೆಗೆದುಕೊಂಡು ಪ್ರಸಾದದ ರೀತಿಯಲ್ಲಿ ತನ್ನ ಬಾಯಿಮುಖಾಂತರ ಸೇವಿಸುತ್ತಾರೆ

ಅದೆ ರೀತಿ ಮೊನ್ನೆ ನಡೆದ T 20 ಕ್ರಿಕೆಟ್ ವಿಶ್ವಕಪ್ ಗೆದ್ದಾಗಲೂ ಸಹ ನಮ್ಮ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಸಹ ಪಿಚ್ ನ ಮಣ್ಣನ್ನು ತೆಗೆದುಕೊಂಡು ಭಕ್ತಿ ಇಂದ ತನ್ನ ಹಣೆಗೆ ಲೇಪನ ಮಾಡಿಕೊಳ್ಳುತ್ತಾರೆ

ಪ್ರತಿ ಕ್ರೀಡಾಪಟು ಅಂಕಣಕ್ಕೆ ಹೋಗುವಾಗ ಭೂತಾಯಿಯನ್ನು ಕೈ ಇಂದ ಸ್ಪರ್ಶಸಿ, ಹಣೆ ಎದೆ ಬಾಗಕ್ಕೆ ಮುಟ್ಟಿ ಆಶೀರ್ವಾದ ಪಡೆದು ಅಂಕಣ ಪ್ರವೇಶ ಮಾಡುತ್ತಾನೆ ಇದು ಈ ಮಣ್ಣಿನ ಸಂಸ್ಕೃತಿ. ಇದರಲ್ಲಿ ಅಚ್ಚರಿ ಪಡುವಂತದ್ದು ಏನು ಇಲ್ಲ. ಅದು ಇಲ್ಲಿಯ ಧರ್ಮದ ಸಂಸ್ಕೃತಿ

ಆದರೆ 2023 ರ ಅಹಮದಬಾದ್ ನಲ್ಲಿ ನಡೆದ ICC ವಿಶ್ವ ಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರ ವರ್ತನೆ ನಿಜಕ್ಕೂ ದಿಗ್ಬ್ರಾಂತ ರನ್ನಾಗಿಸಿತು

ಮೇಲೆರಡು ಘಟನೆಗಳು ಹಿಂದು ಸಂಸ್ಕೃತಿ ಯ ಆಚರಣೆಯ. ಭೂಮಿ ತಾಯಿ ಅನ್ನುವ ಸಂಸ್ಕಾರ ವನ್ನು ಗೌರವ ಭಕ್ತಿಯನ್ನು ಸೂಚಿಸುತ್ತದೆ, ಅವರವರ ನಂಬಿಕೆಯ ಆಚರಣೆ ಯಂತೆ

ಅದರಲ್ಲೂ ಆಸ್ಟ್ರೇಲಿಯಾ ತಂಡದ ಪ್ರಮುಖ ಆಲ್ರೌಂಡರ್ ಮಿಚೆಲ್ ಮಾರ್ಷ್ ತಾವು ಗೆದ್ದ ವಿಶ್ವಕಪ್ ಮೇಲೆ ತಮ್ಮ ಪಾದಗಳನ್ನು ಇಟ್ಟು ಫೋಟೋ ಶೂಟ್ ಮಾಡಿ ಇವೆಲ್ಲ ತಮ್ಮ ಕಾಲ ಕೆಳಗೆ ಅನ್ನುವ ದುರ್ವರ್ತನೆ ತೋರಿದರು

ಇದರ ಪರಿಣಾಮ ಏನು., ಆಸ್ಟ್ರೇಲಿಯನ್ನರರು ಹುಟ್ಟುವಾಗಲೇ ಅಧಿಕ ದೈಹಿಕ ಸಾಮರ್ಥ್ಯ ವನ್ನು ಹೊಂದಿರುವವರು ಆ ಜೀನ್ ಇರುವುದೆ ಹಾಗೆ ತುಂಬಾ ಎತ್ತರದ ಬೌಲರ್ ಗಳು ಅವರೇಜ್ 140 km ವೇಗದಲ್ಲಿ ಬಾಲ್ ಹಾಕುವ ಸಾಮರ್ಥ್ಯ ಇರುವವರ ದಂಡೆ ಬೋಲಿಂಗ್ ಪಡೆಯಲ್ಲಿದೆ ಹಾಗೆ ಬ್ಯಾಟಿಂಗ್ ನಲ್ಲೂ ಸಹ ಚಚ್ಚಿ ಬಿಸಾಕುವ ಸಾಮರ್ಥ್ಯ ಇರುವವರ ದಂಡೆ ಇದೆ. ಇನ್ನು ಸ್ಪಿನ್ ವಿಬಾಗ ಫೀಲ್ಡಿಂಗ್ ವಿಭಾಗ ಸಹ ಅತ್ಯುತ್ತಮ.
ಹಲವು ವಿಶ್ವ ಕಪ್ ಹಾಗು ಹಲವು ಪಂದ್ಯಾವಳಿ ಯನ್ನು ಗೆದ್ದಿದ್ದಾರೆ
ಇವರ ಗೆಲುವಿನ ಒಟ್ಟಾರೆ 20 % ಅಲ್ಲಿ ಅವರ ಬೌಲರ್ ಗಳ ಬ್ಯಾಟಿಂಗ್ ಕೊಡುಗೆ ಸಹ ಇದೆ ಒಟ್ಟಿನಲ್ಲಿ 11 ಜನ ಸಹ ಅವಶ್ಯಕತೆ ಇದ್ದಾಗ ಬ್ಯಾಟ್ ಬೀಸಿ 4..6 ರನ್ ಕಲೆ ಹಾಕಿ ಅವಶ್ಯ ಇದ್ದ ರನ್ ಹೊಡೆದು ಪಂದ್ಯಾವಳಿ ಗೆಲ್ಲಿಸಿದ್ದಾರೆ
ಆದರೆ ಮೊನ್ನೆ ನಡೆದ T20 ವಿಶ್ವಕಪ್ ಪಂದ್ಯಾವಳಿಯಲ್ಲೂ ಸಹ ಈ ತಂಡ ಹೊಸ ಪ್ರತಿಭೆಗಳಿಂದ ಪ್ರಬಲವಾದ ತoಡಾನೇ ಆಗಿತ್ತು ಆದರೂ ಸಹ ಮೊದಲನೆಯ ಸುತ್ತಿನಲ್ಲಿ ಜಿoಬಾವೆ ಶ್ರೀಲಂಕಾ ತಂಡಗಳ ಎದರು ಸೋತು ಹೀನಾಯವಾಗಿ ಸೋತು ಪಂದ್ಯಾವಳಿ ಇಂದ ಹೊರ ದಬ್ಬಲ್ಪಟ್ಟಿತು

ಈ ಹಿಂದಿನ ಗೆಲುವಿನ ದುರಹಂಕಾರಕ್ಕೆ ಸರಿಯಾದ ಫಲ ಸಿಕ್ಕಿತ್ತು

ಭಾರತ ತಂಡ ವಿಶ್ವಕಪ್ ಆರಂಭಕ್ಕು ಮುನ್ನ ತನ್ನ ಬ್ಯಾಟಿಂಗ್ ಹಾಗು ಬೋಲಿಂಗ್ ಆರ್ಭಟ ವನ್ನು ವಿಶ್ವ ಕ್ರಿಕೆಟ್ ಗೆ ಪರಿಚಯಿಸಿತ್ತು ಹಾಗು ಗೆಲ್ಲುವ ನೆಚ್ಚಿನ ತಂಡ ಆಗಿತ್ತು. ಆದರೆ ಭಾರತ ತಂಡ ಪಾಕಿಸ್ತಾನ ತಂಡದ ವಿರುದ್ಧ ಬಿಟ್ಟರೆ ಬೇರೆ ತಂಡಗಳ ವಿರುದ್ಧ ತನ್ನ ಸಾಮರ್ಥ್ಯ ದ ರೀತಿ ಆಡಲೇ ಇಲ್ಲ ತಿಣುಕಾಡಿ ಗೆದ್ದಿತು
ಆದರೆ ಫೈನಲ್ ಪಂದ್ಯದಲ್ಲಿ ಪ್ರಬಲ ನ್ಯೂಝಿಲ್ಯಾoಡ್ ತಂಡ ದ ವಿರುದ್ಧ ಮಾತ್ರ ತನ್ನ ಸಾಮರ್ಥ್ಯ ವನ್ನು ಅದಕ್ಕೆ ಕಾಫಿಟ್ಟಂತೆ ತನ್ನ ವಿಸ್ಪೋಟಕ ಪ್ರದರ್ಶನ ನೀಡಿ ತಾನು ವಿಶ್ವಕಪ್ ಗೆ ಹಕ್ಕು ದಾರ ಅಂತ ತನ್ನ ಒಟ್ಟಾರೆ ಪ್ರದರ್ಶನ ಮುಖಾಂತರ ತೋರಿಸಿ ಪ್ರಶಸ್ತಿ ಮೂಡಿಗೇರಿಸಿಕೊಂಡಿತು
ಯಾವುದೆ ಕೆಲಸ ಕ್ರೀಡೆ ಇರಲಿ ಬರಿ ದೈಹಿಕ ಬಲ ಮಾತ್ರ ಸಾಲದು ಅಲ್ಲಿ ನಯ ವಿನಯ ಆ ಕೆಲಸದ ಬಗ್ಗೆ ಆರಾಧನಾ ಬಾವ ಇರಬೇಕು ಆಗಲೇ ಯಶಸ್ಸು ಅನುಗ್ರಹಿಸುವುದು

✍️ ಅವರೇಕಾಡು ಪೃಥ್ವಿ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ