ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ರಾಜ್ಯ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್ ಅತ್ಯಂತ ನಿರಾಶದಾಯಕ ಬಜೆಟ್ ಎಂದು ಬೆಳೆಗಾರರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದುವರೆಗೂ ಒಟ್ಟು 17 ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರ ರಾದರು. ಈ ಬಾರಿ ಜಿಲ್ಲೆಯ ರೈತರಿಗೆ ಶೂನ್ಯ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಹೆಚ್ಚು ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಮಾನವ ಮತ್ತು ಪ್ರಾಣಿಗಳ ಮಧ್ಯೆ ಇರುವ ಸಂಘರ್ಷದಲ್ಲಿ ಆನೆ ಉಪಟಳದಿಂದ ಕನಿಷ್ಠ ತಿಂಗಳಿಗೆ ಎರಡು ಜನ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದಿದ್ದಾರೆ.
ತೋಟದ ಕಾರ್ಮಿಕರು, ಮಾಲೀಕರುಗಳು ರೈತರು ತೋಟಗಳಿಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಬಜೆಟ್ ಮಂಡನೆಯ ಮೊದಲು ಜಿಲ್ಲೆಗೆ ಆಗಮಿಸಿದ ಅರಣ್ಯ ಸಚಿವ ಈಶ್ವರ್ ಕಂಡ್ರೆ ಅವರು ರೈತರೊಂದಿಗೆ ಕಾಫಿ ಬೆಳೆಗಾರರು ಅಡಿಕೆ ಬೆಳೆಗಾರನ ಸಮ್ಮುಖದಲ್ಲಿ ಸಂವಾದ ನಡೆಸಿ ಜನಂದೋಲನ ಸಭೆ ನಡೆಸಿದರಲ್ಲ ದೆ ಆನೆ ಮತ್ತು ಕಾಡುಕೋಣ ಸೇರಿದಂತೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡುವ ಭರವಸೆ ಬಜೆಟ್‍ನಲ್ಲಿ ಹುಸಿಯಾಗಿಸಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಸೇರಿದಂತೆ ಔಷಧಿ ಸರಬರಾಜು ಸಮರ್ಪಕವಾಗಿ ಆಸ್ಪತ್ರೆಗೆ ತಲುಪುತ್ತಿಲ್ಲ. ಚಿಕಿತ್ಸೆಗೆ ಬಂದ ಬಡ ರೋಗಿಗಳಿಗೆ ಔಷಧಿ ಒದಗಿಸುವಲ್ಲಿ ವಿಫಲರಾಗಿದ್ದೇವೆ ಮತ್ತು ಸರ್ಕಾರಿ ವೈದ್ಯಾಧಿಕಾರಿಗಳ ಹಲವು ಬೇಡಿಕೆಗಳನ್ನು ಮತ್ತು ಮುಂಬಡ್ತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಹೊತ್ತು ಬಜೆಟ್ ಮಂಡಿಸಿದ ಒಂದು ತಿಂಗಳ ಹಿಂದೆ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರು ಪದಾಧಿ ಕಾರಿಗಳು ಸೇರಿದಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟಿದ್ದರು.
ಆದರೆ ಈ ಬಗ್ಗೆ ಕಿಂಚಿತ್ತು ತಲೆಕೆಡಿಸಿಕೊಳ್ಳದೆ ಬಜೆಟ್‍ನಲ್ಲಿ ಈ ವಿಚಾರ ಸೌಜನ್ಯಕ್ಕೂ ಪ್ರಸ್ತಾಪ ಮಾಡಲಿ ಲ್ಲ. ಈಗ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆಕೊಟ್ಟ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಜ್ಞಾನೋದಯವಾಗಿ ಮಾತುಕತೆ ಗೆ ಮುಂದಾಗಿದೆ. ಸದ್ಯ ಈಗಲಾದರೂ ಸರ್ಕಾರಿ ಎಚ್ಚೆತ್ತು ಬಡವರಿಗೆ ಔಷಧಿ ಮತ್ತು ಇತರ ಸೌಕರ್ಯವನ್ನು ಒದಗಿಸಿಕೊಡಬೇಕು ಆಗ್ರಹಿಸಿದ್ದಾರೆ
ಈ ಬಾರಿ ಬಜೆಟ್ ನಲ್ಲಿ ಕೈಮರದಿಂದ ಮುಳ್ಳಯ್ಯನಗಿರಿಗೆ ಪ್ರವಾಸಿಗರ ಅನುಕೂಲಕ್ಕಾಗಿ ರೋಪ್ ವೇ ನಿರ್ಮಾಣದ ವಿಚಾರ ಕಳೆದ 15 ವರ್ಷಗಳ ಹಿಂದೆ ನಡೆಯುತ್ತಿದೆ. ಇದು ಕಾರ್ಯರೂಪಕ್ಕೆ ಬರುವುದು ಅಷ್ಟೊಂದು ಸುಲಭವಲ್ಲ ಇದು ಸೋಲಾ ಅರಣ್ಯ ಇದಕ್ಕೆ ಹಸಿರು ನ್ಯಾಯಾಲಯ ಪೀಠ ಯಾವುದೇ ಕಾರಣ ಕ್ಕೂ ಅನುಮತಿ ಕೊಡುವ ಸೂಚನೆ ಕಾಣುವುದಿಲ್ಲ.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ತೆರಳಿ ಮಕ್ಕಳ ಮಹಿಳೆಯರ ಯೋಗಕ್ಷೇಮ ವಿಚಾರಿಸಿ ಸರ್ಕಾರದ ಸೌಲತ್ತುಗಳ ಬಗ್ಗೆ ಮನವರಿಕೆ ಮಾಡಿ ಬಿಸಿಲಿನಲ್ಲಿ ಸುತ್ತಾಡುವ ಕಾರ್ಯಕರ್ತರಿಗೆ ಸರ್ಕಾರ ಹಿಂದೆ ಘೋಷಿಸಿದ ಸಹಾಯಧನ ಕೊಡುವುದಲ್ಲ ಬಿಟ್ಟು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಸೀರೆ ಕೊಡುತ್ತೇವೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ
ಗಿರೀಶ್ ಹೊಲದಗದ್ದೆ: ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ತೆರಳಿ ಮಕ್ಕಳ ಮಹಿಳೆಯರ ಯೋಗಕ್ಷೇಮ ವಿಚಾರಿಸಿ ಸರ್ಕಾರದ ಸೌಲತ್ತುಗಳ ಬಗ್ಗೆ ಮನವರಿಕೆ ಮಾಡಿ ಬಿಸಿಲಿನಲ್ಲಿ ಸುತ್ತಾಡುವ ಕಾರ್ಯಕರ್ತರಿಗೆ ಸರ್ಕಾರ ಹಿಂದೆ ಘೋಷಿಸಿದ ಸಹಾಯಧನ ಕೊಡುವುದಲ್ಲ ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೀರೆ ಕೊಡುತ್ತೇವೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ
ಇದುವರೆಗೂ 16 ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರ ಬಜೆಟ್ ನಲ್ಲಿ ಸಾಮಾಜಿಕ ಹೊಣೆಗಾರಿಕೆ ಸಾಮಾಜಿಕ ಕಳಕಳಿ ಇರುತ್ತಿತ್ತು ಈ ಬಾರಿ ಬಜೆಟ್‍ನಲ್ಲಿ ಯಾವುದೇ ಸ್ಪಂದನೆ ಇರಲಿಲ್ಲ ಏಕೆಂದರೆ ಮುಖ್ಯಮಂತ್ರಿಗಳು ಮಂಡಿಸುತ್ತಿದ್ದ ಬಜೆಟನ್ನು ಸಮರ್ಥಿಸಿ ಅವರದೇ ಪಕ್ಷದ ಶಾಸಕರುಗಳು ಸ್ಪಂದನೆ ನೀಡದಿರುವುದು ಇದಕ್ಕೆ ಉದಾಹರಣೆಯಾಗಿದೆ ಕೃಷಿಕರಿಗೆ ಕಾರ್ಮಿಕರಿಗೆ ಹೊರಗುತ್ತಿಗೆ ನೌಕರರಿಗೆ ಅದು ಆಶಾ ಕಾರ್ಯಕರ್ತರಾಗಿರಬಹುದು ಅಂಗನವಾಡಿ ಕಾರ್ಯಕರ್ತರ ಇರಬಹುದು ಇವರ್ಯಾರಿಗೂ ನೆರವಾಗುವ ಒಂದೇ ಒಂದು ಅಂಶಗಳು ಕೂಡ ಬಜೆಟ್ ನಲ್ಲಿ ಇರಲಿಲ್ಲ ರೈತರಿಗೆ ಈ ಬಾರಿ ಸಾಲ ಸೌಲಭ್ಯ ಗಳ ಬಗ್ಗೆ ಹಾಗೂ ಬೆಳೆ ಹಾನಿ ಸರ್ಕಾರದ ಸಹಾಯಧನ ಇದು ಯಾವುದರ ಬಗ್ಗೆಯೂ ಚಕಾರವೆತ್ತಲಿಲ್ಲ ಬೆಳೆ ವಿಮೆ ರೈತ ಕಟ್ತಾರೆ ಆದರೆ ಬೆಳೆ ಪರಿಹಾರ ಸಿಗಲಿಲ್ಲ ಇವೆಲ್ಲ ತಾಂತ್ರಿಕ ಸಮಸ್ಯೆಗಳ ಪರಿಹಾರ ಕಲ್ಪಿಸಿಕೊಡುತ್ತಾರೆ ಎಂಬ ನಿರೀಕ್ಷೆ ಇತ್ತು. ಒಟ್ಟಿನಲ್ಲಿ ಕಾಫಿ ಬೆಳೆಗಾರರು ಅಡಿಕೆ ಬೆಳೆಗಾರರು ಹಾಗೂ ರೈತರಿಗೆ ಯಾವುದೇ ಅನುಕೂಲವಾಗುವ ಯೋಜನೆಗಳು ಈ ಬಜೆಟ್ ನಲ್ಲಿ ಇರದಿರುವುದು ವಿμÁದನೀಯ ಎಂದಿದ್ದಾರೆ



