ಮಹಿಳೆಯರು ಎಲ್ಲಾ ಕ್ಷೆತ್ರದಲ್ಲೂ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಬಿಡುವಿಲ್ಲದ ಕಾರ್ಯದ ನಡುವೆ ಒತ್ತಡರಹಿತ ಜೀವನ ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಚಿಕ್ಕಮಗಳೂರು ವುಮೆನ್ಸ್ ಕಾಫಿ ಫೋರಂ ಅಧ್ಯಕ್ಷೆ ಶ್ರೀಮತಿ ಪವಿತ್ರ ರತೀಶ್ ತಿಳಿಸಿದರು.
ಚಿಕ್ಕಮಗಳೂರು ತಾಲ್ಲೂಕು ಬಸರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಳ್ಳಿ ಗ್ರಾಮದಲ್ಲಿ ಚಿಕ್ಕಮಗಳೂರು ವುಮೆನ್ಸ್ ಕಾಫಿ ಫೋರಂ ವತಿಯಿಂದ ಅಂತರಾಷ್ಟೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಪ್ರತಿ ಕಾರ್ಯವನ್ನು ತಾಳ್ಮೆಯಿಂದ ಯೋಚಿಸಿ ನಿಭಾಹಿಸಿದಾಗ ಒತ್ತಡದಿಂದ ದೂರವಿರಲು ಸಾಧ್ಯ, ಜೊತೆಗೆ ಜ್ಞಾನ, ಪ್ರಾಣಯಾಮ ಸೇರಿದಂತೆ ಯೋಗಾಭ್ಯಾಸವನ್ನು ಜೀವನದಲ್ಲಿ ರೂಡಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಡದಾಳು ಮೂಲದ ಬೆಟ್ಟದಳ್ಳಿ ನಿವಾಸಿಯಾದ ಆರತಿ ಸುರೇಂದ್ರ ರವರ ಪರಿಶ್ರಮ ಹಾಗೂ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ವುಮೆನ್ಸ್ ಕಾಫಿ ಫೋರಂ ಉಪಾಧ್ಯಕ್ಷೆ ಕವಿತಾ ಲಿಂಗರಾಜು, ಕಾರ್ಯದರ್ಶಿ ರಮ್ಯಾ ಸಂದೇಶ್, ಖಜಾಂಚಿ ಸ್ಮಿತಾ ಸುನಿಲ್, ಸಂಚಾಲಕಿ ರೇಶ್ಮಾ ಸುಧೀರ್, ಸಹ ಸಂಚಾಲಕಿ ಶಾಲಿನಿ ಪಟೇಲ್ ಹಾಗೂ ಫೋರಂನ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.



