basaravalli 1

 

 

ಆಲ್ದೂರು ಬಾಳೆಹೊನ್ನೂರು ರಸ್ತೆಯಲ್ಲಿ ಬರುವ ಬಸರವಳ್ಳಿ ಗ್ರಾಮದಲ್ಲಿ ಬಾಳೆಹೊನ್ನೂರು ಲಯನ್ಸ್ ಕ್ಲಬ್ ವತಿಯಿಂದ ನೂತನವಾಗಿ ನಿರ್ಮಾಣ ಮಾಡಿದ್ದ ಬಸ್ ತಂಗುದಾಣ ವನ್ನು ಬುಧವಾರ ಲೋಕಾರ್ಪಣೆ ಮಾಡಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಹೆಚ್ ಜೆ. ವಿಕ್ರಂ ಗೌಡ ಮಾತನಾಡಿ ಹಲವು ದಶಕಗಳ ಹಿಂದೆ ನಿರ್ಮಾಣವಾದ  ಬಸ್ ತಂಗುದಾಣವಿತ್ತು ಅದು ಶಿಥಿಲಾವಸ್ಥೆಯನ್ನು ಕೂಡ ತಲುಪಿದ್ದು ಪ್ರತಿದಿನ ಶಾಲೆ ಕಾಲೇಜುಗಳಿಗೆ 30ಕ್ಕೂ ಹೆಚ್ಚು ಮಕ್ಕಳು ಈ ಭಾಗದಲ್ಲಿ ಬಸ್ ಮೂಲಕ ಶಾಲಾ ವಾಹನದ ಮೂಲಕ ಸಂಚರಿಸುತ್ತಾರೆ ಮಳೆಗಾಲದಲ್ಲಿ ಅತಿ ಹೆಚ್ಚಿನ ಮಳೆಯಾದಾಗ ಮತ್ತು ಅತಿ ಹೆಚ್ಚಿನ ಬಿಸಿಲಿನ ಉಷ್ಣತೆಯ ತಾಪಮಾನದಲ್ಲಿ ಪರಿತಪಿಸುವಂತಾಗಿತ್ತು  ಒಂದೆಡೆ ನಿಂತು ತೆರಳಲು ತಂಗುದಾಣ ಇರಲಿಲ್ಲ ಎನ್ನುವಂತಹ ಕೂಗು ಕೇಳಿ ಬರುತ್ತಿತ್ತು ಆದ್ದರಿಂದ

ಬೆಟ್ಟದ ಮಳಲಿಯ ಮಳಲೂರಮ್ಮ ಎಸ್ಟೇಟ್ ಮಾಲೀಕರು, ಕಾಫಿ ಬೆಳೆಗಾರರು ಮತ್ತು ತಮ್ಮ ತಂದೆ ಜಗನ್ನಾಥ ಗೌಡ, ತಾಯಿಯವರಾದ ರುಕ್ಮಿಣಿ ರವರು ನಿಲ್ದಾಣದ ನಿರ್ಮಾಣಕ್ಕೆ ಒಟ್ಟು ವೆಚ್ಚವಾದ

2,50,000 ಹಣವನ್ನು ಕೊಡುಗೆಯಾಗಿ ನೀಡಿರುತ್ತಾರೆ ಎಂದು ಮಾಹಿತಿ ಹಂಚಿಕೊಂಡರು.

ಲೈನ್ಸ್ ಕ್ಲಬ್ ಕಾರ್ಯದರ್ಶಿ ಸುಧಾಕರ್, ರವೀಂದ್ರ ಕೆ ಸಿ, ವಲಯ ಮುಖ್ಯಸ್ಥರಾದ ಎಂ ಡಿ ಶಿವರಾಂ, ಬಾಳೆಹೊನ್ನೂರು ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷರಾದ ಎಂ ಆರ್ ಮಂಜುನಾಥ್ ಬಸರವಳ್ಳಿ ಪಂಚಾಯಿತಿ ಅಧ್ಯಕ್ಷ ಚಂದ್ರು ಉಪಾಧ್ಯಕ್ಷ ರಮೇಶ್ ಬೆಟ್ಟದ ಮಳಲಿ ಹಾಗೂ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಊರಿನ ಮುಖಂಡರು ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ