IMG-20260325-WA0010

 

 

ಬಣಕಲ್ ವಿಮುಕ್ತಿ ಚಾರೀಟೇಬಲ್ ಟ್ರಸ್ಟ್  ಹಾಗೂ ವಿಮುಕ್ತಿ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯಲ್ಲಿ  ಮಹಿಳಾ ಶಕ್ತಿ ಸಂಭ್ರಮದ ಕಾರ್ಯಕ್ರಮದ ಮೆರವಣಿಗೆ ವೀರಮಹಿಳೆಯರು ಮತ್ತಿತರ ಸ್ಥಬ್ದ ಚಿತ್ರದೊಂದಿಗೆ ಮಹಿಳೆಯರು ಕಲಶ ಹೊತ್ತು ಬಣಕಲ್ ಪಟ್ಟಣದಲ್ಲಿ ಡೊಳ್ಳು ವಾದ್ಯದ ನಾದದೊಂದಿಗೆ ಅದ್ದೂರಿ ಮೆರವಣಿಗೆ ನಡೆಸಿದರು.

ಬಣಕಲ್ ಚರ್ಚ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ತ್ರೀಪರ ಚಿಂತಕಿ ನಿವೇದಿತಾ ಕಾಮತ್ ಮಾತನಾಡಿ’ ಮಹಿಳೆಯರಿಂದ ಮಾತ್ರ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ.ಶಿಕ್ಷಣವೇ ಮಹಿಳೆಯರಿಗೆ ಸಮಾಜದ ಅಭಿವೃದ್ಧಿಯ ದೀಪವಾಗಿದೆ. ಸಮಾಜದಲ್ಲಿ ಅಸಮಾನತೆ ಇದ್ದು ಮಹಿಳೆಯರು ಅಕ್ಷರ ವಂಚಿತರಾಗಿದ್ದರು.ಈಗ ಸಾಮಾನ್ಯವಾಗಿ ಸುಧಾರಣೆಯ ಹಂತದಲ್ಲಿದೆ.ಮಹಿಳೆಯರಿಗೆ ಸರ್ಕಾರದಿಂದ ಅನೇಕ ಲಾಭದಾಯಕ ಯೋಜನೆಗಳಿವೆ.ಸಮಾನ ಅವಕಾಶಗಳು ಮಹಿಳೆಯರಿಗೆ ಶೇ ನೂರರಷ್ಟು ಸಿಗಬೇಕಿದೆ.ಹೆಣ್ಣು ಮಕ್ಕಳು ಮೂಲಭೂತ ಸೌಲಭ್ಯಗಳು ಸಿಗಬೇಕು.ಮಹಿಳೆಯರಿಗೆ ಸಮಾಜದಲ್ಲಿ ಧೈರ್ಯ,ಸ್ಥೈರ್ಯ ತುಂಬಿ ಸ್ವಾವಲಂಬನೆ ಬದುಕು ಸಾಗಿಸಲು ಸಂಘ ಸಂಸ್ಥೆಗಳು ಮುಂದೆ ಬರುತ್ತಿವೆ.ಎಲ್ಲ ರಂಗದಲ್ಲೂ ಮಹಿಳೆಯರು ದುಡಿಯಲು ಸಮಾನ ಅವಕಾಶವಿದೆ.ಆದರೆ ಮೌಡ್ಯದಿಂದ ಹೊರ ಬಂದು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಮಾತ್ರ ಗೌರವಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯ.ಲೈಂಗಿಕ ದೌರ್ಜನ್ಯ,ಕಿರುಕುಳ.ಇಷ್ಟವಿಲ್ಲದ ಮದುವೆ ಮಾಡಿ ಹೆಣ್ಢು ಮಕ್ಕಳ ಬಾಳಿಗೆ ಮುಳ್ಳಾಗಬಾರದು.ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು ಅವರನ್ನು ಪೋಷಕರು ಬೆಳೆಸಬೇಕು’ಎಂದರು.

ವಿಮುಕ್ತಿ ಘಟಕದ ಅಧ್ಯಕ್ಷೆ ಎಚ್.ಎಂ.ಸುನೀತಾ ಗುತ್ತಿಹಳ್ಳಿ ಮಾತನಾಡಿ ‘ಸಮಾಜದ ಜವಾಬ್ದಾರಿಯುತ ನಾಗರೀಕಳಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಪ್ರೋತ್ಸಾಹ, ಆರ್ಥಿಕ ಸಬಲೀಕರಣ ,ಕೌಶಲ್ಯಗಾರಿಕಾ ತರಬೇತಿ, ಸ್ವಸಹಾಯ ಸಂಘಗಳಲ್ಲಿ ತರಬೇತಿ ಪಡೆಯಲು ಪ್ರತಿಯೋರ್ವ ಮಹಿಳೆಯರು ತಮ್ಮ ಮಕ್ಕಳನ್ನು ಶಿಕ್ಷಣ ನೀಡಿ ಅವರಿಗೆ ಮಾರ್ಗದರ್ಶನ ನೀಡಬೇಕು.ಮಹಿಳಾ ಹಕ್ಕುಗಳ ಬಗ್ಗೆ ತಿಳಿ ಹೇಳಿ ಕುಟುಂಬದಲ್ಲಿ ಸಮಾನ ಹಕ್ಕು ಸಿಗುವಂತೆ ಪ್ರೇರೇಪಿಸಬೇಕು.ವಿವಿಧ ಕ್ಷೇತ್ರಗಳಲ್ಲಿ ಸಮಾನ ವೇತನ,ಕಾನೂನಿನಲ್ಲಿ ಸಮಾನ ನ್ಯಾಯ ಸಿಗುವಂತೆ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.ಕುಟುಂಬ ನಿರ್ವಹಣೆ,ಭೌತಿಕ,ರಾಜಕೀಯ,ಆರ್ಥಿಕ  ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ದುಡಿಯುತ್ತಿದ್ದಾರೆ.ಶಿಕ್ಷಣವೇ ಮಹಿಳಾ ಸ್ವಾವಲಂಬನೆಗೆ ರಹದಾರಿ’ಎಂದರು.

ವಿಮುಕ್ತಿ ಸದಸ್ಯೆ ಎಸ್.ಎಂ.ಸುನೀತಾ ಸಬ್ಲಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಿಮುಕ್ತಿ ಒಕ್ಕೂಟದ ಗ್ರಾಮೀಣ ಸ್ವ ಉದ್ಯೋಗಿ ಲಿಲ್ಲಿ ಮೋನಿಸ್ ನೆರವೇರಿಸಿದರು.

ಸಮಾರಂಭದಲ್ಲಿ ಮಹಿಳಾ ಸಾಧಕಿಯರಾದ ಡೀನಾ ರೊಡ್ರಿಗಸ್,ಸೂಲಗಿತ್ತಿ ಕಮಲಮ್ಮ ನಿಡುವಾಳೆ,ಸುಶೀಲಾ ಗೋಪಾಲ್ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿಮುಕ್ತಿ ಚಾರೀಟೇಬಲ್ ಟ್ರಸ್ಟಿನ ನಿರ್ದೇಶಕ ಫಾ.ಅರುಣ್ ಲೋಬೊ,ಸಿದ್ದಾಂತ್ ಪುತ್ತೂರು, ಸಂಯೋಜಕಿ ವಿಂದ್ಯಾ ಯೋಗೀಶ್,ಒಕ್ಕೂಟದ ಅಧ್ಯಕ್ಷೆ ಅತಿಕಾಭಾನು, ಲಕ್ಷ್ಮಿ, ಸುನಂದಾ, ಜಯ, ಮಮತ, ಪ್ರತಿಮಾ, ಸವಿತ ಹಾಗೂ ಒಕ್ಕೂಟದ ಸದಸ್ಯರು ಇದ್ದರು.

ವರದಿ : ಅನಿಲ್ ಮೊಂತೆರೋ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ