agniveer

 

 

ಮಂಗಳೂರು ಸೇನಾ ನೇಮಕಾತಿ ಕಚೇರಿ ವತಿಯಿಂದ ನೇಮಕಾತಿ ರ್ಯಾಲಿಗೆ ಸಂಬಂಧಿಸಿದಂತೆ ಆನ್‍ಲೈನ್ ನೋಂದಣಿ ಪ್ರಕ್ರಿಯೆ ಫೆಬ್ರವರಿ 13 ರಿಂದ ಆರಂಭವಾಗಿದ್ದು, ಏಪ್ರಿಲ್ 1 ರವರೆಗೆ ನಡೆಯಲಿದೆ.

ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಕ್ಲರ್ಕ್/ಎಸ್.ಕೆ.ಟಿ., ಅಗ್ನಿವೀರ್ ತಾಂತ್ರಿಕ, ಅಗ್ನಿವೀರ್ ಟಿಡಿಎನ್10/ಟಿಡಿಎನ್8 ಅಪ್ಲಿಕೇಶನ್ ವರ್ಗಗಳಿದ್ದು, ನೋಂದಣಿ ಮಾಡುವ ಸಂದರ್ಭ ಆಧಾರ್ ಕಾರ್ಡ್, ಶಾಶ್ವತ ಮೊಬೈಲ್ ಸಂಖ್ಯೆ, 10ನೇ ತರಗತಿ ಅಂಕಪಟ್ಟಿ, ಕ್ಲರ್ಕ್-ಎಸ್.ಕೆ.ಟಿ. ವರ್ಗಕ್ಕೆ ಅರ್ಜಿ ಸಲ್ಲಿಸುತ್ತಿದ್ದರೆ 12ನೇ ತರಗತಿ ಅಂಕಪಟ್ಟಿ, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ಸಹಿ ಮಾಡಿದ ಭಾವಚಿತ್ರ (ಅಳತೆ ಕೆ.ಬಿ.ಯಿಂದ 10 ಕೆ.ಬಿ.ವರೆಗೆ), ಎಡಗೈ ಹೆಬ್ಬೆರಳಿನ ಗುರುತು (5 ಕೆ.ಬಿ.ಯಿಂದ 10 ಕೆ.ಬಿ.ವರೆಗೆ), ಎನ್‍ಸಿಸಿ ಅಥವಾ ಎನ್‍ಸಿಸಿ ಪ್ರಮಾಣ ಪತ್ರ (ಇದ್ದಲ್ಲಿ), ನಿವಾಸ ಪ್ರಮಾಣ ಪತ್ರ-ಈ ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಬಹುದು. ನೋಂದಣಿ ಸಮಯದಲ್ಲಿ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಬೇಕು. ಅರ್ಜಿ ಸಲ್ಲಿಕೆ ವೇಳೆ ತಪ್ಪು ಮಾಹಿತಿಗಳನ್ನು ನೀಡಿದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.

ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಎಚ್ಚರಿಕೆಯಿಂದ ಅಧಿಸೂಚನೆ ಓದಿಕೊಳ್ಳಬೇಕು. ಆನ್‍ಲೈನ್ ಫಾರ್ಮ್‍ನಲ್ಲಿ ಹೆಸರು, ತಂದೆ, ತಾಯಿಯ ಹೆಸರು ಮತ್ತು ಜನ್ಮ ದಿನಾಂಕ ಸಮರ್ಪಕವಾಗಿ ಭರ್ತಿ ಮಾಡಿರಬೇಕು. ಆಧಾರ್ ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. 250 ರೂ. ನೋಂದಣಿ ಶುಲ್ಕ ಪಾವತಿಸಬೇಕು. https://www.joinindianarmy.nic.in/writereaddata/Portal/Images/Kannada/English  ವೆಬ್‍ಸೈಟ್ ಅನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ