ಮೂಡಿಗೆರೆ ತಾಲ್ಲೂಕಿನ ಬೆಟ್ಟದಮನೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಸಿಐ ಹೊಯ್ಸಳ ಸಂಸ್ಥೆ ವತಿಯಿಂದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಬೆಟ್ಟದಮನೆ ಹಾಗೂ ಬೆಂಗಳೂರಿನ ಕೇಟಚಿಂಗ್ ಹಾರ್ಟ್ಸ್ ಫೌಂಡೇಶನ್ ಡಾ. ರಘುನಾಥ್ ಅವರ ವತಿಯಿಂದ ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿಗಳು ಮತ್ತು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜೆಸಿಐ ಅಧ್ಯಕ್ಷರಾದ ಸಂತೋಷ್ ಜೀ ಹೊಸಹಳ್ಳಿ ಮಾತನಾಡಿ ತಾಯ್ತನ ಹೆಣ್ಣಿಗೋಲಿದ ಅದೃಷ್ಟ ಈ ಅದೃಷ್ಟವನ್ನು ಸಂಭ್ರಮಿಸುವದೇ ಸೀಮಂತ ಕಾರ್ಯ ತಾಯಿ ಎಂಬ ಉನ್ನತ ಪದವೀಗೇರುತ್ತಿರುವ ಸಲುವಾಗಿ ಶುಭ ಹಾರೈಸುವ ಗುರುತ್ತಾಗಿ ಸೀಮಂತ ಕಾರ್ಯ ಮಾಡಲಾಗುತ್ತಿದೆ.ಇದು ತವರು ಮನೆಯಲ್ಲಿ ನೆಡೆಯುವ ಶುಭ ಸಮಾರಂಭವಾಗಿದ್ದು ಬಾಸಿಂಗ, ಬಳೆ ತೋಡಿಸುವದು, ಸೀರೆ ಉಡುಗೊರೆ ಮತ್ತು ಸಿಹಿ ತಿನಿಸುಗಳೊಂದಿಗೆ ಸಂಭ್ರಮಿಸುವದು ವಿಶೇಷವಾಗಿದೆ
ಇಂತ ಶುಭ ಕಾರ್ಯವನ್ನು ಮಾಡಲು ಗೋಣಿಬೀಡು ಜೆಸಿಐ ಸಂಸ್ಥೆಗೆ ಅವಕಾಶ ಸಿಕ್ಕಿರುವದು ನಮ್ಮ ಭಾಗ್ಯ ಎಂದರು.
ವೈದ್ಯಧಿಕಾರಿಗಳಾದ ಡಾ. ಗೌತಮ್ ಮಾತನಾಡಿ ಸೀಮಂತ ಭಾರತೀಯ ಸಂಪ್ರದಾಯದ ಒಂದು ಪ್ರಮುಖ ಸಂಸ್ಕಾರವಾಗಿದ್ದು ಗರ್ಭಿಣಿ 7 ಮತ್ತು 9 ನೇ ತಾಯಿ ಮತ್ತು ಮಗುವಿನ ಅರೋಗ್ಯ ದೀರ್ಘಯುಷ್ಯ ಮತ್ತು ಮಾನಸಿಕ ಸಂತೋಷಕ್ಕಾಗಿ ಆಚರಿಸಲಾಗುತ್ತದೆ ಎಂದರು.
ಬೆಟ್ಟದಮನೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ಸ್ ಮತ್ತು ಪೆನ್ಸಿಲ್ ವಿತರಿಸಲಾಯಿತು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ.ಕೆ. ಚಂದ್ರಶೇಖರ್ ಅವರು ಎಲ್ಲರಿಗೂ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ನಾಗರತ್ನ, ಜೆಸಿಐ ಪೂರ್ವಧ್ಯಕ್ಷರಾದ ಎಂ.ಪಿ ಗಣೇಶ್, ಕೇಟಚಿಂಗ್ ಹಾರ್ಟ್ಸ್ ಫೌಂಡೇಶನ್ ಸ್ಥಾಪಕರಾದ ರಶ್ಮಿ ರಘುನಾಥ್ ಶಾಲಾ ಸಹ ಶಿಕ್ಷಕರಾದ ಚನ್ನಬಸವಯ್ಯ, ಜ್ಯೋತಿ ಹಾಗೂ ಶಾಲಾ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಉಪಸ್ಥಿತರಿದ್ದರು.



