ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ರಂಗೇನಹಳ್ಳಿಯಲ್ಲಿ ಶನಿವಾರ ವಿಜಯ ಕರ್ನಾಟಕ ಜಿಲ್ಲಾ ಮಟ್ಟದ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಜಿ.ಆರ್. ವೈಭವಿ ಸುದರ್ಶನ್, ಎಸ್.ಶಿವಾನಂದ್, ಎಚ್.ಎನ್.ಹರೀಶ್ ಗೌಡ, ಕೆ.ಎಸ್.ಅಶ್ವಿನಿ ಸಂತೋಷ್ ಸಾರಗೋಡು, ಎಂ.ಎಸ್.ಆಸ್ತಿಕ್ ಅವರಿಗೆ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಗತಿಪರ ಕೃಷಿಕ ಎಚ್.ವಿಶ್ವನಾಥ್ ಲಾಡ್, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಎಸ್.ಕೀರ್ತನಾ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಆರ್.ಸಿ. ಜಗದೀಶ್, ಚಿಕ್ಕಮಗಳೂರು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕಿ ಕೆ.ಮಂಗಳಾ, ಕೃಷಿ ಅಧಿಕಾರಿ ವಿಶ್ವಾಸ್ ಇದ್ದರು.



