ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ನಿಯಮಿತ ಶಿವಮೊಗ್ಗ ಅವರು ನಡೆಸಿದ ಸಹಕಾರ ಸಂಘದ ಡಿ.ಸಿ.ಎಂ. ತರಬೇತಿ ಪರೀಕ್ಷೆಯಲ್ಲಿ ಮೂಡಿಗೆರೆಯ ಸ್ಥನು ಪಟೇಲ್ ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಶಿವಮೊಗ್ಗ ವಿಭಾಗ ಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಸ್ಥನು ಅವರಿಗೆ ಶೇಷಾದ್ರಿ ಸ್ಮಾರಕ ಬಹುಮಾನ ನೀಡಿ ಅಭಿನಂದಿಸಲಾಗಿದೆ.
ಸ್ಥನು ಪಟೇಲ್ ಅವರು ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ಮೂಲರಹಳ್ಳಿ, ತೋಟದಗದ್ದೆ ಸುರೇಶ್ (ಮೂಡಿಗೆರೆ ಮಲೆನಾಡು ವಾಹನ ಮಾಲೀಕರು ಮತ್ತು ಚಾಲಕರ ಸಂಘದ ಮಾಜಿ ಅಧ್ಯಕ್ಷ) ಅವರ ಪುತ್ರ. ಸ್ಥನು ಪ್ರಸ್ತುತ ಮೂಡಿಗೆರೆ ಕೋಮಾರ್ಕ್ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.



