bettagere 3

 

 

ಪಂಚಭೂತಗಳನ್ನು ಪೂಜಿಸುವ ತತ್ವ ನಮ್ಮಸನಾತನ ಭಾರತೀಯ ಸಂಸ್ಕೃತಿಯದು ಎಂದು ಆದಿಚುಂದನಗಿರಿ ಶೃಂಗೇರಿ ಶಾಖಾಮಠದ ಶ್ರೀ ಶ್ರೀ ಗುಣನಾಥ ಸ್ವಾಮಿಜಿ ಹೇಳಿದರು.

ಅವರು ಶುಕ್ರವಾರ ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ ಗ್ರಾಮದ ಬೈರವನಕೋಟೆಯಲ್ಲಿ ನೂತನವಾಗಿ ನಿರ್ಮಿಸಿರುವ ಕಾಲ ಭೈರವೇಶ್ವರ ನೂತನ ದೇವಸ್ಥಾನದ ಪುನರ್ ಪ್ರತಿಷ್ಠ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು.

ಪ್ರಕೃತಿಯೊಳಗೇ ನಮ್ಮನ್ನು ನಾವು ಕಂಡುಕೊಳ್ಳುವುದು ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಜೀವನ ಮಾರ್ಗವಾಗಿದೆ.  ದೇವರಲ್ಲಿ ನಂಬಿಕೆ ನಮ್ಮ ಬದುಕಿಗೆ ನೆಮ್ಮದಿ, ಚೈತನ್ಯವನ್ನು ನಿಡುತ್ತದೆ. ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಜೀವನಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಈಗಿನ ಪೀಳಿಗೆಯದ್ದಾಗಿದೆ. ರೈತ ತನಗೆ ಮಾತ್ರ ಬೆಳೆಯದೆ ಪಶುಪಕ್ಷಿಗಳಿಗೂ ಆಹಾರ ಒದಗಿಸುತಿದ್ದಾನೆ.  ನಮ್ಮ ಒಕ್ಕಲು ಪದ್ಧತಿಯಲ್ಲಿ ಪ್ರಮುಖವಾಗಿದ್ದ ‌ಭತ್ತ ಬೆಳೆಯುವ ಸಂಸ್ಕೃತಿ ಇತ್ತೀಚೆಗೆ ಕಡಿಮೆ ಆಗುತ್ತಿದೆ. ಇದು ಪುನಶ್ಚೇತನ ಆಗಬೇಕು ಎಂದರು.

ಬೆಟ್ಟಗೆರೆ ಕಾಲ ಭೈರವೇಶ್ವರ ಮೂರ್ತಿ ಆದಿಚುಂಚನಗಿರಿದು ಹೋಲಿಕೆ ಇದೆ. ರೈತ ಮಕ್ಕಳ ಸಂಸ್ಕೃತಿ ಪ್ರತಿಬಿಂಬಿಸುತ್ತದೆ. ಸಮಾಜದ ಏಳಿಗೆಗಾಗಿ ಆದಿಚುಂಚನಗಿರಿ ಕ್ಷೇತ್ರ ನಿರಂತರ ಪ್ರಯತ್ನ ನಡೆಸುತ್ತಿದೆ. ಪರಮಪೂಜ್ಯ ಬಾಲ ಗಂಗಾಧರ ನಾಥ ಸ್ವಾಮಿಜಿಯವರ ಕೊಡುಗೆ ಅಪಾರವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಹಿರಿಯರಾದ ಓ.ಎಸ್. ಗೋಪಾಲಗೌಡ, ದೇವಸ್ಥಾನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಊರಿನ ಹಿರಿಯರು ಉಪಸ್ಥಿತರಿದ್ದರು. ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ದೇವಾಲಯಕ್ಕೆ ಭೇಟಿ ನೀಡಿದ್ದರು.

ಮೂರುದಿನಗಳ ಕಾಲ ನಡೆದ ಪುನರ್ ಪ್ರತಿಷ್ಠ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ನೂತನ ದೇವಾಲಯವರು ಅತ್ಯಂತ ಸುಂದರವಾಗಿ ಮೂಡಿಬಂದಿದ್ದು, ಬೆಟ್ಟಗೆರೆ ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ