suddi-7 (6)

 

 

ವಿದ್ಯಾರ್ಥಿಗಳ ಶ್ರಮ ಹಾಗೂ ಪರಿಣಿತ ಬೋಧಕ ವೃಂದದಿಂದ ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಶೇ.90.19ರಷ್ಟು ಫಲಿತಾಂಶ ಗಳಿಸುವ ಮೂಲಕ ವಿದ್ಯಾರ್ಥಿಗಳು ಸಂಸ್ಥೆಯ ಕೀರ್ತಿ ಹೆಚ್ಚಿಸುವ ಕಾರ್ಯ ಮಾಡಿದ್ದಾರೆ ಎಂದು ಎಂ.ಇ.ಎಸ್. ವಿದ್ಯಾಸಂಸ್ಥೆ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್. ವಿಜಯ್ ಕುಮಾರ್ ಹೇಳಿದರು.

ಚಿಕ್ಕಮಗಳೂರು ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಎಸ್.ಎಸ್.ಎಂ. ಪದವಿ ಪೂರ್ವ ಕಾಲೇಜಿನ 2026ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಭಿನಂದಿಸುವ ಮೂಲಕ ಸಿಹಿಹಂಚಿ ಅವರು ಮಾತನಾಡಿದರು.

ಎಂಇಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಬಹಳಷ್ಟು ಆಸಕ್ತಿಯಿದೆ. ಆ ನಿಟ್ಟಿನಲ್ಲಿ ಶಿಕ್ಷಕರಿಗೆ ಪರೀಕ್ಷೆಗೂ ಮುನ್ನ ಕಟ್ಟುನಿಟ್ಟಿನ ನಿಗಾವಹಿಸಬೇಕು. ವಿದ್ಯಾರ್ಥಿಗಳಿಗೆ ಪಠ್ಯದ ಚಟುವಟಿಕೆಗೆ ಅನು  ಕೂಲಕ್ಕೆ ತಕ್ಕಂತೆ ಬೋಧನೆಗೆ ಸೂಚಿಸಲಾಗಿತ್ತು. ಈ ಪರಿಣಾಮದಿಂದ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಫಲಿತಾಂಶವನ್ನು ಪಡೆದುಕೊಂಡಿದೆ ಎಂದರು.

ಪಿಯು ವ್ಯಾಸಂಗದಲ್ಲಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಬಹಳಷ್ಟು ಸ್ಪರ್ಧಾತ್ಮಕ ಚಟುವಟಿಕೆಗಳಿವೆ. ಕೆಲವು ಬಲಾಡ್ಯ ಶಾಲೆಗಳು ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸುತ್ತೇವೆ. ಆದರೆ ಎಂಇಎಸ್ ಸಂಸ್ಥೆ ಬಡ ಹಾಗೂ ಮಾ ಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ವ್ಯವಸ್ಥೆ ಕಲ್ಪಿಸಿಕೊಟ್ಟು ಸಾಧನೆಗೆ ಅವಕಾಶ ಮಾಡಿಕೊಡುತ್ತಿದೆ ಎಂ ದು ತಿಳಿಸಿದರು.

ಪಿಯು ಫಲಿತಾಂಶ ವಿವರ : ಪರೀಕ್ಷೆಯಲ್ಲಿ ಒಟ್ಟು 184 ವಿದ್ಯಾರ್ಥಿಗಳು ಹಾಜರಾಗಿದ್ದು, ಉನ್ನತ ಶ್ರೇಣಿ ಯಲ್ಲಿ 50, ಪ್ರಥಮ 109, ದ್ವಿತೀಯ 17, ತೃತೀಯ ಶ್ರೇಣಿಯಲ್ಲಿ 8 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ದ್ದಾರೆ. ಒಟ್ಟು 11 ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಅತಿಹೆಚ್ಚು ಅಂಕ ಪಡೆದಿದ್ದಾರೆ. ವಿಜ್ಞಾನದಲ್ಲಿ ಶೇ.98, ವಾಣಿಜ್ಯ ಶೇ.90.10, ಕಲಾ ಶೇ.82.50 ಫಲಿತಾಂಶ ಲಭಿಸಿದೆ.

ಎಸ್.ವರ್ಷಿತ್ ವಿಜ್ಞಾನ ವಿಭಾಗದಲ್ಲಿ 575 ಅಂಕ, ಜೆ.ಬಿ.ಸಹನಾ ವಾಣಿಜ್ಯ ವಿಭಾಗದಲ್ಲಿ 575, ತುಬ ಕಲಾ ವಿಭಾಗದಲ್ಲಿ 551 ಅಂಕ ಪಡೆದಿದ್ದಾರೆ. ಉಳಿದಂತೆ ಗಣಿತದಲ್ಲಿ ಎಸ್.ವರ್ಷಿತ್, ಕನ್ನಡ-ಭೌತಶಾಸ್ತ್ರ ದಲ್ಲಿ ಹೆಚ್.ವಿ.ಶಿಲ್ಪ, ಕನ್ನಡ, ವ್ಯವಹಾರ ಅಧ್ಯಾಯನ, ಸಂಖ್ಯಾಶಾಸ್ತ್ರದಲ್ಲಿ ಜೆ.ಬಿ.ಸಹನಾ, ಲೆಕ್ಕಶಾಸ್ತ್ರದಲ್ಲಿ ಆ ಯೇಷಾ, ವ್ಯವಹಾರದ ಅಧ್ಯಾಯನದಲ್ಲಿ ಸಿ.ಕೆ.ಪುನೀತ್‍ಕುಮಾರ್, ಗಣಕವಿಜ್ಞಾನದಲ್ಲಿ ಎಸ್.ಎನ್.ಪುನೀತ್, ಕನ್ನಡದಲ್ಲಿ ಕೆ.ಎಸ್.ಶಿವಾನಿ ಹಾಗೂ ಇತಿಹಾಸದಲ್ಲಿ ಎಂ.ಡಿ.ಹೇಮಾ 100ಕ್ಕೆ 100 ಅಂಕ ಗಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಲೆನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಕೇಶವಮೂರ್ತಿ, ಪಿಯು ಕಾಲೇಜು ಪ್ರಾಂಶುಪಾ ಲ ಗೋಪಾಲರಾವ್, ಅಕಾಡೆಮಿ ಶೈಕ್ಷಣಿಕ ಸಲಹೆಗಾರ ಮಂಜುನಾಥ್‍ಭಟ್, ವ್ಯವಸ್ಥಾಪಕಿ ಶ್ರೀಲಕ್ಷ್ಮೀ ಹಾ ಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ