suddi-9 (2)

 

 

ಆಲ್ದೂರು ಸಮೀಪದ ಬಿರಂಜಿ ಹೊಳೆಯ ಪಕ್ಕದಲ್ಲಿರುವ ಮಲ್ನಾಡ್ ಟ್ರೋಫಿ ಕ್ರೀಡಾಂಗಣದಲ್ಲಿ ಮಲ್ನಾಡ್ ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್ ಪ್ರಥಮ ಆವೃತ್ತಿ ಶನಿವಾರ ಮುಕ್ತಾಯವಾಯಿತು.

ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಹೆಗ್ಗಡತಿ ಯರು ತಂಡ 11,000 ನಗದು ಬಹುಮಾನ ಪಡೆಯಿತು, ದ್ವಿತೀಯ ಸ್ಥಾನವನ್ನು ಡ್ರೀಮ್ ಚೇಜರ್ಸ್ ಪಡೆದು 5,500 ನಗದು ಬಹುಮಾನ ಗಳಿಸಿತು.

ಫೈನಲ್ ಪಂದ್ಯದಲ್ಲಿ ವಿಮನ್ ಆಫ್ ದ ಮ್ಯಾಚ್ ಪ್ರಶಸ್ತಿ ಮತ್ತು ಸರಣಿ ಸರ್ವೋತ್ತಮ ಪ್ರದರ್ಶನ ಪ್ರಶಸ್ತಿಯನ್ನು ಹೆಗ್ಗಡತಿ ತಂಡದ ರಾಗಿಣಿ ಪಡೆದುಕೊಂಡರು.

ಬಹುಮಾನವಾಗಿ ಬಂದಂತಹ 11000 ನಗದು ಹಾಗೂ ದ್ವಿತೀಯ ಬಹುಮಾನದ 5 ಸಾವಿರ ನಗದು ಹಣವನ್ನು ಅಂಧಮಕ್ಕಳ ಶಾಲೆಗೆ ಕೊಡುಗೆಯಾಗಿ ಎರಡು ತಂಡದ ನಾಯಕಿಯರು ನೀಡಿದರು.

ಕ್ರೀಡಾಕೂಟವನ್ನು ಉದ್ದೇಶಿಸಿ ಲೋಕಪ್ಪಗೌಡ ಮಾತನಾಡಿ ; ಮಹಿಳೆಯರಿಗಾಗಿ ಏರ್ಪಡಿಸಿದ ಕ್ರೀಡಾಕೂಟ ಅಚ್ಚುಕಟ್ಟಾಗಿದ್ದು, ಆಯೋಜಕರು ಮಹಿಳೆಯರಿಗೆ ಪ್ರತಿಭೆ ಪ್ರದರ್ಶನ ಮಾಡಲು ಉತ್ತಮ ಅವಕಾಶ ಒದಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಯೋಜಕರಾದ ಹೆಡದಾಳು ಮಧು, ಪ್ರತಾಪ್, ಸಾಗರ್, ಚರಣ್, ಸಂದೀಪ್, ಆಶ್ರಿಕ್ ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ