ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿ ಹಿರಿಶಿಗರದ ಕಾಫಿ ಬೆಳೆಗಾರರ ಸಂಘ ನಿರ್ದೇಶಕರಾದ ಸಿ ಎಸ್ ಚಂದ್ರಶೇಖರ್ ರವರ ತೋಟದಲ್ಲಿ ಕಾಡಾನೆಗಳು ಧಾಳಿ ನಡೆಸಿದ್ದು ಕೈಗೆ ಬಂದ ಫಸಲು ಮಣ್ಣು ಪಾಲಾಗಿದ್ದು, ಲಕ್ಷಾಂತರ ರೂ ನಷ್ಟ ಉಂಟಾಗಿದೆ.

ವಿಷಯ ತಿಳಿದ ಗೋಣಿಬೀಡು ಬೆಳೆಗಾರರ ಸಂಘದ ಅಧ್ಯಕ್ಷರಾದ ಡಿ. ಎಸ್. ರಮೇಶ್ ಕಾರ್ಯದರ್ಶಿ ಬಿ.ಕೆ .ಚಂದ್ರಶೇಖರ್ ನಿರ್ದೇಶಕರಾದ ರಂಜಿತ್ ಹಾಗೂ ಜಿಲ್ಲಾ ಮಹಿಳಾಬೆಳಗಾರರ ಸಂಘದ ಕಾರ್ಯದರ್ಶಿ ಶಾಲಿನಿ ಅನಿಲ್ ಅವರು ಹಾನಿಯಾದ ತೋಟವನ್ನು ವೀಕ್ಷಣೆ ಮಾಡಿದರು ಮಾಲೀಕರಿಗೆ ಸಾಂತ್ವಾನ ಹೇಳಿದ್ದಾರೆ.
ಕಾಡಾನೆಗಳ ದಾಳಿಯಿಂದ ಶಾಶ್ವತ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.




